Home Health ರೂ.35ಕ್ಕೆ ಸಿಗುತ್ತೆ ಕೋವಿಡ್ ಮಾತ್ರೆಗಳು !

ರೂ.35ಕ್ಕೆ ಸಿಗುತ್ತೆ ಕೋವಿಡ್ ಮಾತ್ರೆಗಳು !

FILE PHOTO: An experimental COVID-19 treatment pill, called molnupiravir and being developed by Merck & Co Inc and Ridgeback Biotherapeutics LP, is seen in this undated handout photo released by Merck & Co Inc and obtained by Reuters on October 26, 2021. Merck & Co Inc/Handout via REUTERS

Hindu neighbor gifts plot of land

Hindu neighbour gifts land to Muslim journalist

ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿರುವಂತೆಯೇ ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ. ಗೆ ಮಾಲ್ ಫ್ (ಮೊಲ್ಕು ಪಿರವಿರ್) ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡಿಸ್ ಲ್ಯಾಬೋರೆಟರೀಸ್ ಮಂಗಳವಾರ ಹೇಳಿದೆ. ಮಾಲ್ ಬ್ಲೂ ಮಾತ್ರೆಗಳ ಬೆಲೆ ಕೇವಲ 35 ರೂ. ಆಗಿದೆ ಎಂದು ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿ ಡಾ. ರೆಡೀಸ್ ಲ್ಯಾಬೋರೆಟರೀಸ್ ವಕ್ತಾರರೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಸ್ಲಿಪ್‌ನಲ್ಲಿ 10 ಮಾತ್ರೆಗಳು ಇರಲಿದ್ದು, ಐದು ದಿನಗಳವರೆಗೂ 40 ಮಾತ್ರಗಳಿಗೆ ರೂ.1,400 ವೆಚ್ಚ ತಗುಲಲಿದೆ. ಕೋವಿಡ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಈ ಮಾತ್ರೆಗಳನ್ನು ತಯಾರಿಸಲಾಗಿದೆ.

ಮುಂದಿನ ವಾರ ದೇಶಾದ್ಯಂತ ಔಷಧ ಮಾರುಕಟ್ಟೆಗಳಲ್ಲಿ ಈ ಮಾತೆಗಳು ದೊರೆಯಲಿವೆ ಎಂದು ಅವರು ಹೇಳಿದ್ದಾರೆ. ಭಾರತ ಹಾಗೂ 100 ಕಡಿಮೆ, ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಿಗೆ ಮೊಲ್ನಪಿರವಿರ್ ಮಾತ್ರ ಪೂರೈಸಲು ಎಂಎಸ್‌ಡಿ ಸು ಕಂಪನಿಯೊಂದಿಗೆ ಡಾ.ರೆಡೀಸ್ ಲ್ಯಾಬೋರೆಟರೀಸ್ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿತ್ತು.

ಈ ಮಾತ್ರೆಗಳ ಮೂರನೇ ಹಂತದ ಪ್ರಯೋಗವನ್ನು ತಜ್ಞರ ಸಮಿತಿ ಮುಂದೆ ಇಡಲಾಗಿತ್ತು. ಆಸ್ಪತ್ರೆಯಲ್ಲಿರುವ ಅಥವಾ ಅಪಾಯವಿರುವ ವಯಸ್ಕ ರೋಗಿಗಳಿಗೆ 200 ಎಂಜಿ ಮೊಲ್ನಪಿರವಿರ್ ಮಾತ್ರೆಗಳ ತಯಾರಿಕೆ ಹಾಗೂ ಮಾರುಕಟ್ಟೆಗಾಗಿ ಡಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಕಳೆದ ವಾರ ಅನುಮೋದನೆ ನೀಡಿತ್ತು.