Home Health Physical Intimacy: ಲೈಂಗಿಕ ಜೀವನ ಎಂಜಾಯ್ ಮಾಡಲು ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!

Physical Intimacy: ಲೈಂಗಿಕ ಜೀವನ ಎಂಜಾಯ್ ಮಾಡಲು ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!

Physical Intimacy

Hindu neighbor gifts plot of land

Hindu neighbour gifts land to Muslim journalist

Physical Intimacy: ಸಂಗಾತಿಗಳಿಬ್ಬರ ಮಧ್ಯೆ ಸ್ನೇಹ ಮತ್ತು ಸಾಮರಸ್ಯ ಹೆಚ್ಚಾಗಿರಬೇಕು, ಜೀವನ ಆನಂದಕರವಾಗಿರಲು ಸಂಗಾತಿ ಜೊತೆಗಿನ ಸಂಬಂಧವು (Relationship) ಉತ್ತಮವಾಗಿರಬೇಕು ಮತ್ತು ವೈವಾಹಿಕ ಜೀವನದಲ್ಲಿ ಯಾವತ್ತೂ ಸಂತೋಷ ಕಡಿಮೆಯಾಗಬಾರದು. ಆದರೆ ಅನೇಕ ಬಾರಿ ದಂಪತಿಗಳು ಫಿಸಿಕಲ್ ಇಂಟಿಮೆಸಿ (Physical Intimacy) ಬಗ್ಗೆ ಮಾತನಾಡಲು ಭಯ ಪಡ್ತಾರೆ, ಆದರೆ ಇದರ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ, ಸಂಬಂಧದಲ್ಲಿ ರೊಮ್ಯಾನ್ಸ್ ಹೆಚ್ಚಿಸಬಹುದು.

ದೈಹಿಕ ಅನ್ಯೋನ್ಯತೆ ಅಥವಾ ಫಿಸಿಕಲ್ ಇಂಟಿಮೆಸಿ ಸಂಬಂಧದಲ್ಲಿ ಬಹಳ ಮುಖ್ಯವಾದದ್ದು. ವರ್ಷಗಳ ನಂತರವೂ, ಪರಸ್ಪರ ದೈಹಿಕವಾಗಿ ಸೇರಲು ಇಂಟ್ರೆಸ್ಟ್ ಕಡಿಮೆಯಾಗಿಲ್ಲ, ಒಬ್ಬರಿಗೊಬ್ಬರು ಬೋರ್ ಆಗಿಲ್ಲ, ಅಲ್ಲದೇ ಒಬ್ಬರಿಗೊಬ್ಬರಲ್ಲಿ ಪ್ರೀತಿ ಜಾಸ್ತಿನೇ ಇದೆ ಅಂದರೆ ಅದಕ್ಕೆ ರೊಮ್ಯಾನ್ಸ್ (Romance) ಕಾರಣ.

ಇದನ್ನೂ ಓದಿ: ಬೆಳ್ತಂಗಡಿ: ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ವಾಪಾಸ್‌ ಬಂದಾಗ ವ್ಯಕ್ತಿಯೊಬ್ಬರ ಬೈಕ್‌ ಕಳ್ಳತನ

ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಕಪಲ್ಸ್ ನಡುವೆ ದೈಹಿಕ ಹೊಂದಾಣಿಕೆಯ (Physical Compatibility) ಕೊರತೆಯಿದೆ, ಇದು ಅವರ ಸಂಬಂಧದ ಮೇಲೂ ಪರಿಣಾಮ ಬೀರುತ್ತಿದೆ. ಅಂದಹಾಗೆ, ಕೆಲವು ಸಲಹೆಗಳ ಸಹಾಯದಿಂದ, ನೀವು ದೈಹಿಕ ಹೊಂದಾಣಿಕೆಯನ್ನು ಉತ್ತಮಗೊಳಿಸಬಹುದು.

ಮೊದಲು ನೀವು ಸಾಮಾನ್ಯ ವಿಷಯದ ಬಗ್ಗೆ ಮಾತನಾಡುವಂತೆಯೇ, ನೀವು ರೋಮ್ಯಾನ್ಸ್ ಇಂಟಿಮೆಸಿ ಬಗ್ಗೆಯೂ ಮಾತನಾಡಬಹುದು. ಸಂಗಾತಿಯ ಅಗತ್ಯತೆಗಳು ಮತ್ತು ಬಯಕೆಗಳ ಬಗ್ಗೆ ನೀವು ನೇರವಾಗಿ ಕೇಳಬಹುದು. ಇದರಿಂದ ನಿಮ್ಮ ಸಂಬಂಧ ಮತ್ತು ರೊಮ್ಯಾಂಟಿಕ್ ಜೀವನ ಎರಡು ಚೆನ್ನಾಗಿರುತ್ತೆ.

ನಿಮ್ಮ ಸಂಗಾತಿಯೊಂದಿಗಿನ ಹೆಚ್ಚಿನ ಕನೆಕ್ಷನ್ ಹೊಂದಲು, ಸ್ಪರ್ಶ ಚಿಕಿತ್ಸೆಯು (Touch Therapy) ಭಾವನಾತ್ಮಕ ಸಂಪರ್ಕಗಳನ್ನು ನಿರ್ಮಿಸುತ್ತದೆ. ಸಂಗಾತಿಯನ್ನು ಪ್ರೀತಿಯಿಂದ ತಬ್ಬಿಕೊಳ್ಳುವುದು, ಕೈ ಕೈ ಹಿಡಿದು ನಡೆಯುವುದು, ಮಸಾಜ್ ಮಾಡುವುದು… ಇವೆಲ್ಲವೂ ಪರಸ್ಪರ ಹತ್ತಿರ ತರುವ ವಿಷಯಗಳು. ಅವು ಲೈಂಗಿಕ ಜೀವನವನ್ನು ಸಹ ಸುಧಾರಿಸುತ್ತವೆ.

ಆತ್ಮೀಯ ಕ್ಷಣಗಳನ್ನು ವಿಶೇಷವಾಗಿಸಲು, ಒಟ್ಟಿಗೆ ಹೊಸ ಪ್ರಯೋಗಗಳನ್ನು ಮಾಡಿ. ಇದು ಸಂಗಾತಿಗೆ ಹತ್ತಿರವಾಗಲು ಮತ್ತು ಅವರನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಅಲ್ಲದೆ, ಈ ವಿಷಯವು ಸಂಬಂಧದಲ್ಲಿ ಬೇಸರಕ್ಕೆ ಜಾಗವೇ ಕೊಡೋದಿಲ್ಲ. ಫೋರ್ ಪ್ಲೇ (foreplay), ಅನ್ಯೋನ್ಯತೆಯ ಸಮಯದಲ್ಲಿ ನೀವು ವಿವಿಧ ರೀತಿಯ ಗೇಮ್ ಗಳನ್ನು ಪ್ರಯತ್ನಿಸಬಹುದು.

ಇದನ್ನೂ ಓದಿ: B Y Vijayendra: ಪ್ರತಾಪ್ ಸಿಂಹಗೆ MP ಟಿಕೆಟ್ ತಪ್ಪಿಸಿದ್ಯಾರು ?! ಕೊನೆಗೂ ಸತ್ಯ ಬಾಯಿಬಿಟ್ಟ ವಿಜಯೇಂದ್ರ !!