Home Health ಹೆಚ್ಚು ಬಾರಿ ಕಣ್ಣು ಮಿಟುಕಿಸುವುದಕ್ಕೂ ಇದೆ ಕಾರಣ! : ಏನು ಎಂಬ ಮಾಹಿತಿ ಇಲ್ಲಿದೆ ನೋಡಿ

ಹೆಚ್ಚು ಬಾರಿ ಕಣ್ಣು ಮಿಟುಕಿಸುವುದಕ್ಕೂ ಇದೆ ಕಾರಣ! : ಏನು ಎಂಬ ಮಾಹಿತಿ ಇಲ್ಲಿದೆ ನೋಡಿ

Hindu neighbor gifts plot of land

Hindu neighbour gifts land to Muslim journalist

Eye blinking: ಕಣ್ಣುಗಳು ಮನುಷ್ಯನ ವಿಶೇಷ ಅಂಗ. ಈ ಅಂಗಕ್ಕೆ ರಕ್ಷಣೆಯಾಗಿ ರೆಪ್ಪೆಗಳು ಇರುತ್ತವೆ. ಈ ರೆಪ್ಪೆಗಳು ಧೂಳು, ಗಾಳಿ ಹಾಗೂ ಇನ್ನಿತರ ತೊಂದರೆಗಳು ಎದುರಾದಾಗ ಮುಚ್ಚುವುದರ ಮೂಲಕ ಕಣ್ಣಿನ ರಕ್ಷಣೆ ಮಾಡುತ್ತವೆ. ಕಣ್ಣುಗಳಲ್ಲಿ ಅನಿರೀಕ್ಷಿತವಾಗಿ ಕೆಲವೊಂದು ಬದಲಾವಣೆಗಳು ಕಣ್ಣಿನಲ್ಲಿ ಉಂಟಾಗುತ್ತದೆ. ಈ ದೈಹಿಕ ಬದಲಾವಣೆಗೆ ಕಣ್ಣು ಕುಣಿತ, ಕಣ್ಣು ಹಾರುವುದು, ಕಣ್ಣು ಮಿಟುಕಿಸುವುದು (Eye blinking) ಎಂದು ಕರೆಯಲಾಗುವುದು.

ಕಣ್ಣಿಗೆ ರಕ್ಷಣೆಯ ಅಗತ್ಯ ಇಲ್ಲದೆ ಇರುವಾಗ ಕಣ್ಣಿನ ರೆಪ್ಪೆಗಳು ಹರಿದರೆ ಅಥವಾ ಕುಣಿದರೆ ಅದು ನಮ್ಮ ಭವಿಷ್ಯದ ಮಾಹಿತಿಯನ್ನು ನೀಡುತ್ತಿದೆ ಎನ್ನಲಾಗುವುದು. ಪ್ರತಿಯೊಬ್ಬ ವ್ಯಕ್ತಿಯು ಆಗಾಗ ಕಣ್ಣು ಮಿಟುಕಿಸುತ್ತಲೇ ಇರುತ್ತಾರೆ. ಕಣ್ಣು ಮಿಟುಕಿಸುವುದು ದೇಹ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಸಂಕೇತವಾಗಿದೆ. ಸರಾಸರಿಯಾಗಿ, ಹೆಚ್ಚಿನ ಜನರು ಪ್ರತಿ ನಿಮಿಷಕ್ಕೆ 15 ರಿಂದ 20 ಬಾರಿ ಮಿಟುಕಿಸುತ್ತಾರೆ. ಆದ್ರೆ ಇದು ಯಾಕೆ ಯಾವಾಗ ಉಂಟಾಗುತ್ತದೆ ಎಂಬುದು ಅನೇಕರಿಗೆ ತಿಳಿಯದ ಸಂಗತಿಯಾಗಿದೆ. ಹಾಗಾಗಿ ಈ ಕುರಿತಾದ ಮಾಹಿತಿಯನ್ನು ನಾವು ನೀಡುತ್ತೇವೆ ನೋಡಿ.

ಕಣ್ಣಿಗೆ ಹೆಚ್ಚಿನ ಒತ್ತಡ ಬೀಳುವುದು:
ಪ್ರಖರ ಬೆಳಕಿನಲ್ಲಿ ಇರುವುದು, ಹೆಚ್ಚು ಹೊತ್ತು ಓದುವುದು, ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು ಇದಕ್ಕೆ ಸಾಮಾನ್ಯ ಕಾರಣಗಳು. ನೀವು ದೀರ್ಘಕಾಲದವರೆಗೆ ಒಂದು ವಿಷಯದ ಮೇಲೆ ಕೇಂದ್ರೀಕರಿಸಿದಾಗ ಇದು ಸಂಭವಿಸುತ್ತದೆ. ಅನೇಕ ವಿಷಯಗಳು ಕಣ್ಣಿನ ಆಯಾಸವನ್ನು ಉಂಟುಮಾಡಬಹುದು.

ಐ ಡಿಸ್ಟೋನಿಯಾ:
ಇದು ಕಣ್ಣುಗಳಿಗೆ ಸಂಬಂಧಿಸಿದ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಇವುಗಳಲ್ಲಿ ಅತ್ಯಂತ ಸಾಮಾನ್ಯವಾದದ್ದು ಬ್ಲೆಫರೋಸ್ಪಾಸ್ಮ್, ಇದರಲ್ಲಿ ನಿಮ್ಮ ಕಣ್ಣಿನ ಸ್ನಾಯುಗಳಲ್ಲಿನ ಸೆಳೆತದಿಂದಾಗಿ ರೆಪ್ಪೆ ಪದೇ ಪದೇ ಬಡಿಯುತ್ತಿರುತ್ತದೆ. ಎರಡನೆಯದು ಮೆಗ್ಸ್ ಸಿಂಡ್ರೋಮ್. ಇದರಲ್ಲಿ ಬಾಯಿ ಮತ್ತು ದವಡೆಯಲ್ಲಿ ಸೆಳೆತಗಳು ಇರಬಹುದ. ಈ ಕಾರಣದಿಂದಾಗಿಯೂ ರೆಪ್ಪೆ ಪಟಪಟನೆ ಅದುರುತ್ತದೆ.

ಇತರ ಕಾರಣಗಳು:
ನೀವು ಒತ್ತಡದಲ್ಲಿರುವಾಗ, ಬೆಳಕು ಮತ್ತು ಕಣ್ಣಿನ ಒತ್ತಡಕ್ಕೆ ಹೆಚ್ಚು ಸಂವೇದನಾಶೀಲರಾಗಬಹುದು. ಆತಂಕ, ಒತ್ತಡ ಮತ್ತು ಆಯಾಸ ಸೇರಿದಂತೆ ಕೆಲವು ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಗಳು ನಿಮ್ಮನ್ನು ಹೆಚ್ಚಾಗಿ ರೆಪ್ಪೆ ಮಿಟುಕಿಸುವಂತೆ ಮಾಡುತ್ತದೆ.

​ದೃಷ್ಠಿ ದೋಷ:
ದೃಷ್ಟಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದಲೂ ನೀವು ಆಗಾಗಾ ಕಣ್ಣು ಮಿಟುಕಿಸುವಂತಾಗುತ್ತದೆ. ಇವುಗಳಲ್ಲಿ ಸಮೀಪದೃಷ್ಟಿ, ಹೈಪೋಪಿಯಾ, ಪ್ರೆಸ್ಬಯೋಪಿಯಾ ಮತ್ತು ಸ್ಟ್ರಾಬಿಸ್ಮಸ್, ಇತ್ಯಾದಿ. ಇವೆಲ್ಲವೂ ನಿಮ್ಮ ಕಣ್ಣುಗಳು ಒತ್ತಡಕ್ಕೆ ಒಳಗಾಗುವ ಸಂದರ್ಭಗಳಾಗಿವೆ.