Home Health Onion: ಈರುಳ್ಳಿ ಕೊಳ್ಳುವಾಗ, ಕತ್ತರಿಸುವಾಗ ಕಪ್ಪು ಕಲೆ ಇರುತ್ತಾ? ಇದನ್ನು ನೆಗ್ಲೇಟ್ ಮಾಡಿದ್ರೆ ಎಷ್ಟು ಡೇಂಜರ್...

Onion: ಈರುಳ್ಳಿ ಕೊಳ್ಳುವಾಗ, ಕತ್ತರಿಸುವಾಗ ಕಪ್ಪು ಕಲೆ ಇರುತ್ತಾ? ಇದನ್ನು ನೆಗ್ಲೇಟ್ ಮಾಡಿದ್ರೆ ಎಷ್ಟು ಡೇಂಜರ್ ಗೊತ್ತಾ?

Onion

Hindu neighbor gifts plot of land

Hindu neighbour gifts land to Muslim journalist

Onion: ಈರುಳ್ಳಿ ಇಲ್ಲದೆ ಯಾವುದೇ ಅಡುಗೆ ಪೂರ್ಣಗೊಳ್ಳುವುದಿಲ್ಲ. ಇದಲ್ಲದೆ, ಈರುಳ್ಳಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ನೀವು ಈರುಳ್ಳಿಯನ್ನು ಖರೀದಿಸಿದಾಗ ಅಥವಾ ಅದನ್ನು ಕತ್ತರಿಸುವಾಗ ಈರುಳ್ಳಿಯ ಮೇಲೆ ಕಪ್ಪು ಬಣ್ಣದ ಬೂದಿಯ ತರ ಬಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಅಥವಾ ಅಪಾಯವೊ ಎಂಬ ಮಾಹಿತಿ ಬಹುತೇಕ ಜನರಿಗೆ ತಿಳಿದಿಲ್ಲ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ..

ಹೌದು, ಈರುಳ್ಳಿ(Onion) ಕತ್ತರಿಸುವಾಗ ಸಿಪ್ಪೆಯ ಒಳಗೆ ಕಪ್ಪು ಕಲೆಯನ್ನು ನೋಡಿರುತ್ತೀರಿ. ಅಡುಗೆ ಮಾಡುವಾಗ ಆ ಕಲೆಯನ್ನು ಸ್ವಚ್ಛಗೊಳಿಸಿ, ಬಳಸುತ್ತೇವೆ. ಇನ್ನು ಕೆಲವರೂ ಸ್ವಚ್ಛಗೊಳಿಸುವುದೇ ಇಲ್ಲ. ಅಲ್ಲದೆ, ಈರುಳ್ಳಿಯಲ್ಲಿ ಯಾಕೆ ಕಪ್ಪು ಕಲೆ ಇದೆ? ಯಾವುದಾದರೂ ಸೋಂಕು ತುಗುಲಿದೆಯೇ? ಇಂತಹ ಈರುಳ್ಳಿಯನ್ನು ಬಳಸಬಹುದೇ? ಎಂಬುದರ ಬಗ್ಗೆ ಸಾಮಾನ್ಯವಾಗಿ ಯೋಚನೆ ಸಹ ಮಾಡುವುದಿಲ್ಲ. ಆದರೆ, ಈ ಬಗ್ಗೆ ಇದೀಗ ಸಂಶೋಧನೆಯೊಂದು ಹೊರಬಿದ್ದಿದೆ.

ಸಂಶೋಧನೆ ಹೇಳೋದೇನು?
ಈರುಳ್ಳಿ ಸಿಪ್ಪೆ ತೆಗೆಯುವಾಗ ಕಪ್ಪು ಕಲೆ ಇದ್ದರೆ ಅಂತಹ ಈರುಳ್ಳಿಯನ್ನು ತಿನ್ನುವುದರಿಂದ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂಧ್ರ ಕಾಯಿಲೆ) ಕಾಯಿಲೆ ಬರಬಹುದೇ? ಈರುಳ್ಳಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಕಪ್ಪು ಕಲೆಯನ್ನು ಆಸ್ಪರ್ಜಿಲ್ಲಸ್ ನೈಗರ್ ಎಂದು ಕರೆಯುತ್ತಾರೆ. ಈ ರೀತಿಯ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ. ಅಲ್ಲಿಂದ ಈರುಳ್ಳಿಗೂ ಹೋಗುತ್ತದೆ. ಈ ಕಪ್ಪು ಕಲೆ ಮ್ಯೂಕೋರ್ಮೈಕೋಸಿಸ್ ಅಲ್ಲ. ಆದರೆ ಈ ಕಪ್ಪು ಕಲೆ ಒಂದು ರೀತಿಯ ವಿಷವನ್ನು ಬಿಡುಗಡೆ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ.

ಇದು ಜೀವಕ್ಕೆ ಅಪಾಯಕಾರಿಯಲ್ಲದಿದ್ದರೂ, ಇದು ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಈಗಾಗಲೇ ಅಲರ್ಜಿ ಇರುವವರು ಈ ಕಪ್ಪು ಕಲೆಯುಳ್ಳ ಈರುಳ್ಳಿಯಿಂದ ದೂರವಿರುವುದು ಉತ್ತಮ ಎನ್ನುತ್ತಾರೆ. ಅಸ್ತಮಾದಿಂದ ಬಳಲುತ್ತಿರುವವರು ಕೂಡ ಇದರಿಂದ ದೂರವಿರಲು ಸೂಚಿಸಲಾಗುತ್ತದೆ. ಅಲ್ಲದೆ ಈರುಳ್ಳಿಯಲ್ಲಿ ಕಂಡುಬರುವ ಕಪ್ಪು ಬಣ್ಣವನ್ನು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲಾಗುತ್ತದೆ. ಈ ರೀತಿಯ ಕಪ್ಪು ಬಣ್ಣದ ಶಿಲೀಂದ್ರವು ಹೆಚ್ಚಾಗಿ ಮಣ್ಣಿನಲ್ಲಿ ಕಂಡುಬರುತ್ತದೆ. ಇದು ಒಂದು ರೀತಿಯ ವಿಷವನ್ನು ಬಿಡುಗಡೆ ಮಾಡುತ್ತದೆ ಎಂದು ಸಂಶೋಧನೆಯು ತಿಳಿಸಿದೆ.

ಇನ್ನು ಬಳಸುವಾಗ ಕಪ್ಪು ಕಲೆ ಇರುವ ಪದರವನ್ನು ತೆಗೆದುಹಾಕಿ, ಉಳಿದಿದ್ದನ್ನು ಬಳಸಿ. ಆದರೆ ನೀವು ಬಳಸುವ ಈರುಳ್ಳಿ ಪದರದ ಮೇಲೆ ಕಪ್ಪು ಕಲೆ ಹರಡದಂತೆ ಎಚ್ಚರವಹಿಸಿ ಎಂದು ತಜ್ಞರು ಹೇಳುತ್ತಾರೆ.