Home Health ಸೂಜಿ-ಮುಕ್ತ ಕೊರೋನಾ ಲಸಿಕೆ | ಈ ವ್ಯಾಕ್ಸಿನ್‌ ಅನುಮೋದಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾದ...

ಸೂಜಿ-ಮುಕ್ತ ಕೊರೋನಾ ಲಸಿಕೆ | ಈ ವ್ಯಾಕ್ಸಿನ್‌ ಅನುಮೋದಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾದ ಚೀನಾ!

Hindu neighbor gifts plot of land

Hindu neighbour gifts land to Muslim journalist

ಕೊರೋನ ಲಸಿಕೆಗೆ ಹಿಂದೇಟು ಹಾಕುತ್ತಿರುವ ಜನಗಳಲ್ಲಿ ಹೆಚ್ಚಿನವರು ಸೂಜಿಯಿಂದ ಚುಚ್ಚಿಕೊಳ್ಳಲು ಭಯ ಪಡುವವರೇ ಆಗಿದ್ದಾರೆ. ಇಂತವರಿಗಾಗಿಯೇ ಚೀನಾ ಹೊಸ ಬಗೆಯ ಕೊರೋನಾ ಲಸಿಕೆಯೊಂದನ್ನು ಆವಿಷ್ಕರಿಸಿದೆ.

ಹೌದು. ಸೂಜಿ-ಮುಕ್ತ ಕೊರೊನಾ ಲಸಿಕೆಯನ್ನು ತಯಾರಿಸಿದೆ. ಈ ಲಸಿಕೆಯನ್ನು ಉಚ್ಛ್ವಾಸದ ಮೂಲಕ ಅಂದ್ರೆ ಮೂಗಿನ ಮೂಲಕವೇ ಒಳಕ್ಕೆಳೆದುಕೊಳ್ಳಬಹುದು. ಟಿಯಾಂಜಿನ್ ಮೂಲದ ಕ್ಯಾನ್ಸಿನೊ ಬಯೋಲಾಜಿಕ್ಸ್ ಇಂಕ್ ಈ ಲಸಿಕೆಯನ್ನು ತಯಾರಿಸಿದೆ. ಈ ವ್ಯಾಕ್ಸಿನ್‌ ಅನ್ನು ಅನುಮೋದಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ.

ಲಸಿಕೆ ಕ್ಯಾನ್‌ಸಿನೊದ ಒಂದು-ಶಾಟ್ ಕೋವಿಡ್ ಡ್ರಗ್‌ನ ಹೊಸ ಆವೃತ್ತಿಯಾಗಿದೆ. ಇದು ಮಾರ್ಚ್ 2020ರಲ್ಲಿ ಮಾನವ ಪರೀಕ್ಷೆಗೆ ಒಳಗಾದ ವಿಶ್ವದ ಮೊದಲನೆಯ ವ್ಯಾಕ್ಸಿನ್‌, ಫೆಬ್ರವರಿ 2021ರಲ್ಲಿ ಚೀನಾ, ಮೆಕ್ಸಿಕೊ, ಪಾಕಿಸ್ತಾನ, ಮಲೇಷ್ಯಾ ಮತ್ತು ಹಂಗೇರಿಯಲ್ಲಿ ಇದನ್ನು ಬಳಸಲಾಗಿದೆ. ಇನ್ಹೇಲ್ ಆವೃತ್ತಿಯ ವ್ಯಾಕ್ಸಿನ್‌ ಅನ್ನು ಚೀನಾ ಅನುಮೋದಿಸಿದ ಬೆನ್ನಲ್ಲೇ ಹಾಂಗ್ ಕಾಂಗ್‌ನಲ್ಲಿ ಕಂಪನಿಯ ಷೇರುಗಳ ಮೌಲ್ಯ ಶೇ. 14.5 ರಷ್ಟು ಹೆಚ್ಚಾಗಿದೆ.

ಚೀನಾದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಮಂಡಳಿ CanSinoನ Ad5-nCoV ಅನ್ನು ಬೂಸ್ಟರ್ ಲಸಿಕೆಯಾಗಿ ತುರ್ತು ಬಳಕೆಗೆ ಅನುಮೋದಿಸಿದೆ. ಈ ಲಸಿಕೆ ಸೆಲ್ಯುಲಾರ್ ಪ್ರತಿರಕ್ಷೆಯನ್ನು ಉತ್ತೇಜಿಸುತ್ತದೆ ಮತ್ತು ಇಂಟ್ರಾಮಸ್ಕುಲರ್ ಇಂಜೆಕ್ಷನ್ ಇಲ್ಲದೆ ರಕ್ಷಣೆಯನ್ನು ಹೆಚ್ಚಿಸಲು ಲೋಳೆಪೊರೆಯ ಪ್ರತಿರಕ್ಷೆಯನ್ನು ಪ್ರೇರೇಪಿಸುತ್ತದೆ.

ಕೊರೊನಾ ವೈರಸ್ ವಿರುದ್ಧ ರಕ್ಷಿಸಲು ಮೂಗಿನ ಮತ್ತು ವಾಯುಮಾರ್ಗದ ಅಂಗಾಂಶಗಳಲ್ಲಿ ಪ್ರತಿಕಾಯಗಳನ್ನು ಉತ್ತೇಜಿಸಲು ಇಂಥದ್ದೇ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಕಂಪನಿಗಳು ಮುಂದಾಗಿವೆ. ಈ ವ್ಯಾಕ್ಸಿನ್‌ಗೆ ಸೂಜಿ ಬಳಸಬೇಕಾಗಿಲ್ಲ. ನಾವೇ ಸ್ವತಃ ವ್ಯಾಕ್ಸಿನ್‌ ತೆಗೆದುಕೊಳ್ಳಬಹುದು. ಹಾಗಾಗಿ ಆರೋಗ್ಯ ಇಲಾಖೆ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ. ಚೀನಾದಲ್ಲಿ ಆವಿಷ್ಕರಿಸಿರುವ ಈ ಲಸಿಕೆ ಕೋವಿಡ್‌ ಲಕ್ಷಣಗಳನ್ನು ತಡೆಗಟ್ಟುವಲ್ಲಿ ಶೇ.66ರಷ್ಟು ಪರಿಣಾಮಕಾರಿಯಾಗಿದೆ. ತೀವ್ರತರವಾದ ಕಾಯಿಲೆಯ ವಿರುದ್ಧ ಶೇ.91ರಷ್ಟು ಪರಿಣಾಮಕಾರಿಯಾಗಿದೆ.