Home Health ಭಾರತಕ್ಕೆ ಕಾಲಿಟ್ಟ ‘ಲೈಮ್ ಕಾಯಿಲೆ’ | ಏನಿದು ಹೊಸ ಕಾಯಿಲೆ, ಇದರ ಲಕ್ಷಣಗಳೇನು?

ಭಾರತಕ್ಕೆ ಕಾಲಿಟ್ಟ ‘ಲೈಮ್ ಕಾಯಿಲೆ’ | ಏನಿದು ಹೊಸ ಕಾಯಿಲೆ, ಇದರ ಲಕ್ಷಣಗಳೇನು?

Hindu neighbor gifts plot of land

Hindu neighbour gifts land to Muslim journalist

ಕೊರೋನ ಸೋಂಕು ಕಡಿಮೆ ಆಯ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ, ಲೈಮ್ ಡಿಸೀಸ್ ಎಂಬ ಸೋಂಕು ಭಾರತೀಯರನ್ನು ಕಾಡಲು ಶುರು ಮಾಡಿದೆ.

ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಲೈಮ್ ಕಾಯಿಲೆಗೆ ಸಂಬಂಧಿಸಿದ ಮಾಹಿತಿಗಳು ಹರಿದಾಡುತ್ತಿದೆ. ಅಷ್ಟಕ್ಕೂ ಏನಿದು ಕಾಯಿಲೆ ಹೇಗೆ ಹರಡುತ್ತೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಈ ಸೋಂಕು ಹಸಿರು ಹುಲ್ಲು ಅಥವಾ ತೇವಾಂಶ ಇರುವ ನೈಸರ್ಗಿಕ ಪರಿಸರದಲ್ಲಿ ಕಂಡು ಬರುತ್ತದೆ. ಉಣ್ಣಿಗಳ ಕಡಿತವಾದಾಗ ಉಂಟಾಗುವ ಕಾಯಿಲೆಯೇ ಲೈಮ್ ರೋಗ ಆಗಿದೆ. ಆರಂಭದಲ್ಲಿ ಸೊಳ್ಳೆ ಕಚ್ಚಿದಂತೆ ಕಾಣುವ ಇದರಿಂದ ತೀವ್ರತರ ಸಂಧಿವಾತ ಉಂಟಾಗುತ್ತದೆ.

ಲೈಮ್ ಕಾಯಿಲೆ ಎಂಬುದು ಬೊರೆಲಿಯಾ ಬ್ಯಾಕ್ಟೀರಿಯಾ ಹೊಂದಿರುವ ಉಣ್ಣೆ ಕಚ್ಚುವಿಕೆಯಿಂದ ಹರಡುವ ಸೋಂಕು ಆಗಿದೆ. ತಜ್ಞರ ಪ್ರಕಾರ ಉಣ್ಣಿಗಳ ಕಡಿತದಿಂದ ಆರಂಭದಲ್ಲಿ ಕಚ್ಚುವಿಕೆ ಸ್ಥಳದಲ್ಲಿ ಒಂದು ಗುಳ್ಳೆ ಅಥವಾ ಉಂಡೆ ಉಂಟಾಗುತ್ತದೆ. ಈ ಉಂಡೆಯ ಮೇಲೆ ತುರಿಕೆ ಶುರುವಾಗಿ ಲೈಮ್ ಕಾಯಿಲೆ ಹರಡುತ್ತದೆ. ಲೈಮ್ ಕಾಯಿಲೆಯು ಸಂಧಿವಾತ, ಅರಿವಿನ ಸಮಸ್ಯೆ, ದೀರ್ಘಕಾಲದ ಆಯಾಸ ಮತ್ತು ನಿದ್ರೆಯ ಸಮಸ್ಯೆ ಸೇರಿ ಹಲವು ದೀರ್ಘಕಾಲದ ರೋಗ ಲಕ್ಷಣ ಉಂಟು ಮಾಡುತ್ತದೆ.

ಇತ್ತೀಚೆಗೆ ಬಹಿರಂಗಪಡಿಸಿದ ಸಂಶೋಧನೆಗಳು ಹೇಳಿದ ಪ್ರಕಾರ, ಲೈಮ್ ಕಾಯಿಲೆ ಮೂರು ಹಂತಗಳಲ್ಲಿ ಹರಡುತ್ತದೆ. ಪ್ರತಿ ಹಂತವು ಮೊದಲಿಗಿಂತ ಹೆಚ್ಚು ಮಾರಕವಾಗುತ್ತಾ ಹೋಗುತ್ತದೆ ಎಂದು ಹೇಳಲಾಗಿದೆ.ಮೊದಲ ಹಂತದಲ್ಲಿ ರೋಗಿ ಜ್ವರ, ಆಯಾಸ, ತಲೆನೋವು, ಸ್ನಾಯು ನೋವು, ಜಂಟಿ ಸ್ನಾಯು ಬಿಗಿತ ಮತ್ತು ಊದಿಕೊಂಡ ದುಗ್ಧರಸ ಗ್ರಂಥಿ ಮತ್ತು ದದ್ದು ಉಂಟಾಗುತ್ತದೆ. ಹಾಗೂ ಸಮಯಕ್ಕೆ ಚಿಕಿತ್ಸೆ ನೀಡದೇ ಹೋದ್ರೆ ಸ್ಥಿತಿ ಗಂಭೀರ ಆಗುತ್ತದೆ.

ಲೈಮ್ ಕಾಯಿಲೆ ಎರಡನೇ ಹಂತದಲ್ಲಿ, ಈ ಸಮಸ್ಯೆಗಳು ಹೆಚ್ಚಾಗುತ್ತವೆ. ಕುತ್ತಿಗೆ ನೋವು, ದೇಹದ ವಿವಿಧ ಭಾಗಗಳಲ್ಲಿ ದದ್ದು, ಅನಿಯಮಿತ ಹೃದಯ ಬಡಿತ ಅಥವಾ ಕಡಿಮೆ ದೃಷ್ಟಿ ಸಮಸ್ಯೆ ಉಂಟಾಗುತ್ತದೆ. ಲೈಮ್ ಕಾಯಿಲೆಮೂರನೇ ಹಂತದಲ್ಲಿ, ಉಣ್ಣೆ ಕಚ್ಚಿದ 12 ತಿಂಗಳ ನಂತರ ಮೂರನೇ ಹಂತ ಶುರುವಾಗುತ್ತದೆ. ದೇಹದಲ್ಲಿ ಊತ, ಕೈಯ ಹಿಂಭಾಗ ಮತ್ತು ಪಾದಗಳ ಮೇಲ್ಭಾಗ ಚರ್ಮ ಮಸುಕಾಗುತ್ತದೆ. ಚರ್ಮದ ಅಂಗಾಂಶ ಹಾಗೂ ಕೀಲು ಹಾನಿ ಆಗುತ್ತದೆ.

ಲೈಮ್ ಡಿಸೀಸ್ ಅಸೋಸಿಯೇಷನ್ ​ಹೇಳುವ ​ಪ್ರಕಾರ, ಈ ವೈರಸ್ ಸೋಂಕು ವಿಶ್ವದ 80 ಪ್ರತಿಶತ ದೇಶಗಳಲ್ಲಿ ಹರಡಿದೆ. ಆದರೆ ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ಆದರೆ ಜಾಗ್ರತೆ ವಹಿಸಬೇಕು. ಹಾಗೂ ಸಮಯಕ್ಕೆ ಸರಿಯಾಗಿ ರೋಗ ಲಕ್ಷಣ ಅರ್ಥ ಮಾಡಿಕೊಳ್ಳಬೇಕಿದೆ.