Home Health IDSP-IHIP : H3N2 virus spreading fast : ಶರವೇಗದಲ್ಲಿ ಹರಡುತ್ತಿದೆ H3N2 ವೈರಸ್‌! ಹೆಚ್ಚಿದ...

IDSP-IHIP : H3N2 virus spreading fast : ಶರವೇಗದಲ್ಲಿ ಹರಡುತ್ತಿದೆ H3N2 ವೈರಸ್‌! ಹೆಚ್ಚಿದ ಆತಂಕ, ರೂಪಾಂತರ ಕೊಟ್ಟಿದೆ ಬಿಗ್‌ ಶಾಕ್‌!

IDSP-IHIP

Hindu neighbor gifts plot of land

Hindu neighbour gifts land to Muslim journalist

IDSP-IHIP :  ಕೋರೋನಾ (Covid) ಮಹಾಮಾರಿಯು ಕೊಂಚ ತಗ್ಗಿದ್ದೆ ಎಂದು ನಿಟ್ಟುಸಿರು ಬಿಡುತ್ತಿದ್ದ ರಾಜ್ಯದ ಜನತೆಗೆ ಈಗ ಹೊಸ ವೈರಸ್ ಪತ್ತೆ ಆತಂಕ ಮೂಡಿಸಿದೆ. ಇತ್ತೀಚೆಗೆ ಎಲ್ಲೆಡೆ ದೀರ್ಘಕಾಲಿಕ ಕೆಮ್ಮು ಮತ್ತು ಜ್ವರದ(Health Problems) ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ, ಈ ಲಕ್ಷಣಗಳು(IDSP-IHIP)ಸೋಂಕು ಉಲ್ಬಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ರವರು(K. Sudhakar) ಇತ್ತೀಚೆಗೆ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದರು.

ಭಾರತದಲ್ಲಿ H3N2 ವೈರಸ್‌ ಸೋಂಕು ನಿರಂತರವಾಗಿ ಹರಡುತ್ತಿದ್ದು, IDSP-IHIP (Integrated Health Information Platform) ಬಿಡುಗಡೆ ಮಾಡಿದ ಮಾಹಿತಿಯ ಅನುಸಾರ, H3N2 ಸೇರಿದಂತೆ ಈ ವೈರಸ್ ನ ವಿವಿಧ ಉಪ-ರೂಪಾಂತರಗಳ ಮಾರ್ಚ್ 9 ರವರೆಗೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 3038 ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.ಈ ನಡುವೆ ಎಚ್3ಎನ್2 (H3N2 Virus)ಇನ್ಫ್ಲುಯೆಂಜಾ ವೈರಸ್ ತಡೆಗಟ್ಟಲು ಆರೋಗ್ಯ ತಜ್ಞರು ಕೂಡ ಸೂಚಿಸಿದ್ದು, ಮಾಸ್ಕ್ ಬಳಕೆ(Mask)ಕಾಲಕಾಲಕ್ಕೆ ಕೈಗಳನ್ನು ತೊಳೆಯುವಂತೆ ಸೂಚಿಸಿ ಮುನ್ನೆಚ್ಚರಿಕಾ(PrecautionMeasures) ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ವರ್ಷಕ್ಕೊಮ್ಮೆ ಫ್ಲೂ (Flu)ಲಸಿಕೆಯನ್ನು ಹಾಕಿಸುವಂತೆಯು ತಜ್ಞರು ಸಲಹೆ(Suggestion) ನೀಡಿದ್ದಾರೆ.

H3N2 ಇನ್‌ಫ್ಲುಯೆಂಜಾ ವೈರಸ್ ಸೋಂಕು ಈಗಾಗಲೇ ಶೀಘ್ರ ಗತಿಯಲ್ಲಿ ಹರಡುತ್ತಿದ್ದು,H3N2 ಹಂದಿ ಜ್ವರದಿಂದ (H1N1) ರೂಪಾಂತರಗೊಂಡ ವೈರಸ್ ಎನ್ನಲಾಗುತ್ತಿದೆ. ಇದನ್ನು ಸಾಮಾನ್ಯವಾಗಿ ಫ್ಲೂ ಎನ್ನಲಾಗುತ್ತದೆ. ಹೀಗಿದ್ದರೂ ಕೂಡ ಕೊರೊನಾವೈರಸ್‌ನ ರೀತಿಯಲ್ಲೇ ಲಕ್ಷಣಗಳು ಕಂಡುಬರುತ್ತಿವೆ. ಈ ವೈರಸ್‌ನ ಪ್ರಭಾವದಿಂದ ದೀರ್ಘಕಾಲದ ಜ್ವರ, ಕೆಮ್ಮು, ಮೂಗು ಸೋರುವುದು ಮತ್ತು ಮೈ ಕೈ ನೋವು ಈ ಎಲ್ಲ ಲಕ್ಷಣಗಳು ಕಂಡುಬರುತ್ತವೆ. ಇದರ ಜೊತೆಗೆ, ಕೆಲವು ರೋಗಿಗಳಲ್ಲಿ ಉಸಿರಾಟ ಹಾಗೂ ಉಬ್ಬಸದ ಸಮಸ್ಯೆಗಳು ಗೋಚರಿಸುವ ಸಾಧ್ಯತೆಗಳು ಕೂಡ ಇದೆ.

ಈಗಾಗಲೇ ಈ ವೈರಸ್‌ನಿಂದ( Virus) ಗುಜರಾತ್ (Gujarath)ಒಬ್ಬ ವ್ಯಕ್ತಿ ಬಲಿಯಾಗಿದ್ದು, ಮತ್ತೊಂದು ಪ್ರಕರಣ ವಡೋದರಾದಲ್ಲಿ ಪತ್ತೆಯಾಗಿ ಮಹಿಳೆಯ ಸಾವಿಗೂ ವೈರಸ್ ಕಾರಣ ಎನ್ನಲಾಗಿದೆ. ಕರ್ನಾಟಕದಲ್ಲಿ ಈ ಹಿಂದೆ 82 ವರ್ಷದ ವ್ಯಕ್ತಿ ಮತ್ತು ಹರಿಯಾಣದಲ್ಲಿ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿ ಬಲಿಯಾಗಿದ್ದಾರೆ. ಸದ್ಯ, H3N2 ವೈರಸ್‌ನ ಪರೀಕ್ಷೆಗಾಗಿ ಮಾದರಿಗಳನ್ನು ಪುಣೆ ಲ್ಯಾಬ್‌ಗೆ ಕಳುಹಿಸಲಾಗುವುದು ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ. ಇದು ಹಂದಿ ಜ್ವರದಿಂದ (H1N1) ರೂಪಾಂತರಿತ ವೈರಸ್‌ನಿಂದ ದೇಶದಲ್ಲಿ ಘಟಿಸಿದ ಮೂರನೇ ಸಾವು ಎನ್ನಲಾಗಿದೆ.