Home Health Nipah Virus: ನಿಫಾ ವೈರಸ್ ಆರ್ಭಟ- ಶಾಲಾ ಕಾಲೇಜಿಗೆ ರಜೆ, ಸದ್ಯದಲ್ಲೇ ಲಾಕ್ ಡೌನ್ ಘೋಷಣೆ?

Nipah Virus: ನಿಫಾ ವೈರಸ್ ಆರ್ಭಟ- ಶಾಲಾ ಕಾಲೇಜಿಗೆ ರಜೆ, ಸದ್ಯದಲ್ಲೇ ಲಾಕ್ ಡೌನ್ ಘೋಷಣೆ?

Nipah Virus
Image source: ToI

Hindu neighbor gifts plot of land

Hindu neighbour gifts land to Muslim journalist

Nipah Virus: ಕೇರಳದಲ್ಲಿ ನಿಫಾ ವೈರಸ್(Nipah Virus) ಅಬ್ಬರ ಜೋರಾಗಿದೆ. ಕೇರಳದಲ್ಲಿ ತೀವ್ರ ಜ್ವರದಿಂದ ಇಬ್ಬರು ಮೃತಪಟ್ಟ ಘಟನೆ ಬೆನ್ನಲ್ಲೇ ಮತ್ತೆ ಭಯದ ವಾತಾವರಣ ಮನೆ ಮಾಡಿದೆ. ಕೇರಳದಲ್ಲಿ ಇಂದು ಆರೋಗ್ಯ ಕಾರ್ಯಕರ್ತರೊಬ್ಬರಿಗೆ ನಿಫಾ ಪಾಸಿಟಿವ್ ಬಂದಿರುವ ಮೂಲಕ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಇಡೀ ದೇಶವನ್ನೇ ತಲ್ಲಣಗೊಳಿಸುತ್ತಿರುವ ನಿಫಾ ಸೋಂಕು ಕೇರಳದಲ್ಲಿ(Kerala)ತನ್ನ ಅಟ್ಟಹಾಸ ಮುಂದುವರೆಸಿದೆ. 4 ವರ್ಷಗಳ ನಂತರ ಇದೀಗ ಕೇರಳದಲ್ಲಿ ಮತ್ತೆ ನಿಫಾ ವೈರಸ್‌ನ(Nipah virus) ಆತಂಕ ಎದುರಾಗಿದ್ದು, ಇಲ್ಲಿನ ಕೋಝಿಕ್ಕೋಡ್‌ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಜ್ವರದಿಂದ ನಿಧನರಾಗಿದ್ದಾರೆ. ಕೋಝಿಕ್ಕೋಡ್‌ನಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಸರ್ಕಾರ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ನಿಫಾ ವೈರಸ್‌ ಸೋಂಕಿತರಲ್ಲಿ ಮರಣ ಪ್ರಮಾಣ ತೀರಾ ಹೆಚ್ಚಿದೆ ಎಂದು ಕೇರಳ ಆರೋಗ್ಯ ಸಚಿವೆ (Kerala health minister) ವೀಣಾ ಜಾರ್ಜ್‌ ಮಾಹಿತಿ ನೀಡಿದ್ದಾರೆ.ಈಗಾಗಲೇ 5,706 ಮಂದಿ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಕೋಝಿಕ್ಕೋಡ್‌ನಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಸರ್ಕಾರ (Governmnet) ಶಾಲಾ-ಕಾಲೇಜಿಗೆ ರಜೆ ಘೋಷಿಸಿದೆ.

ದಕ್ಷಿಣದ ರಾಜ್ಯದಲ್ಲಿ ನಿಫಾ ವೈರಸ್‌ ದೊಡ್ಡ ಮಟ್ಟದ ಆತಂಕ ಮೂಡಿಸಿದೆ. 2018ರ ನಂತರ ಕೇರಳದಲ್ಲಿ ಇತ್ತೀಚಿನ ಕೆಲ ದಿನಗಳಿಂದ ಕಂಡುಬರುತ್ತಿರುವ ನಿಫಾ ವೈರಸ್‌ ಬಾಂಗ್ಲಾದೇಶ ರೂಪಾಂತರವಾಗಿದ್ದು, ಬಹಳ ಅಪಾಯಕಾರಿ ಎನ್ನಲಾಗಿದೆ. ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ 24 ವರ್ಷದ ಆರೋಗ್ಯ ಕಾರ್ಯಕರ್ತೆಯೊಬ್ಬರಿಗೆ ವೈರಸ್ ಇರುವುದು ಪತ್ತೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆರೋಗ್ಯ ಕಾರ್ಯಕರ್ತರೊಬ್ಬರಿಗೆ ನಿಫಾ ಪಾಸಿಟಿವ್ ಬಂದಿರುವ ಮೂಲಕ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ ಕಂಡಿದೆ. ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಮತ್ತೊಂದು ನಿಫಾ ವೈರಸ್ ಪ್ರಕರಣವನ್ನು ದೃಢಪಡಿಸಿದ್ದಾರೆ.

ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇರುವ ಹಿನ್ನೆಲೆ ಕೇರಳ ಸರ್ಕಾರ ಕೆಲವು ಶಾಲೆಗಳು ಮತ್ತು ಕಚೇರಿಗಳನ್ನು ಮುಚ್ಚಲಾಗಿದೆ. ಏಳು ಗ್ರಾಮಗಳನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಣೆ ಮಾಡಲಾಗಿದ್ದು. ಇದಲ್ಲದೆ, ಕೋಝಿಕ್ಕೋಡ್‌ನಲ್ಲಿ ಜ್ವರದಿಂದ (Fever) ಎರಡು ಸಾವುಗಳು ವರದಿಯಾದ ನಂತರ ಕೇರಳ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದೆ. ನಿಪಾಹ್ ವೈರಸ್ ಹರಡುವುದನ್ನು ತಡೆಯಲು ಕೇರಳ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರು ಕೂಡ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಘೋಷಣೆ ಮಾಡಿಲ್ಲ. ಮಾರಣಾಂತಿಕ ಸೋಂಕು (Virus) ಹೆಚ್ಚುತ್ತಲೇ ಹೋದ ಸಂದರ್ಭ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಇಂತಹ ಕ್ರಮಗಳನ್ನು ಹೇರಲು ರಾಜ್ಯ ಸರ್ಕಾರ ಹೇರುವ ಸಾಧ್ಯತೆ ಇದೆ.

ಸೋಂಕು ಹರಡುವಿಕೆಯನ್ನು ಮಿತಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕಾರ್ಯತಂತ್ರದ ಭಾಗವಾಗಿ ಕಂಟೋನ್‌ಮೆಂಟ್ ವಲಯಗಳ ರಚನೆಯಾಗಿದೆ. ಕಂಟೈನ್‌ಮೆಂಟ್ ವಲಯದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ (Students) ಮನೆಯಿಂದಲೇ ತರಗತಿಗಳಿಗೆ ಹಾಜರಾಗಲು ಆನ್‌ಲೈನ್ ತರಗತಿಗಳನ್ನು ಆಯೋಜಿಸುವಂತೆ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.

ಕೋಝಿಕ್ಕೋಡ್ ಜಿಲ್ಲೆಯ ಏಳು ಗ್ರಾಮ ಪಂಚಾಯತ್‌ಗಳಾದ ಅತಂಚೇರಿ, ಮಾರುತೋಂಕಾರ, ತಿರುವಳ್ಳೂರು, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲ್ಲ್ಯಪಲ್ಲಿ ಮತ್ತು ಕವಿಲುಂಪಾರವನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಲಾಗಿದೆ. ಪ್ರಸ್ತುತ 13 ಜನರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಿಗೆ ತಲೆನೋವಿನ ರೀತಿಯ ಸೌಮ್ಯ ಲಕ್ಷಣಗಳು (Symptoms) ಗೋಚರಿಸಿವೆ. ಇದರ ಜೊತೆಗೆ, ಹೆಚ್ಚಿನ ಅಪಾಯದ ಸಂಪರ್ಕ ಹೊಂದಿರುವವರು ತಮ್ಮ ಮನೆಯೊಳಗಿರಲು ಸರ್ಕಾರ ಸಲಹೆ ನೀಡಿದೆ. ಈ ಮಧ್ಯೆ ಕೇರಳ ಸರ್ಕಾರವು ಪರಿಸ್ಥಿತಿ ನಿಭಾಯಿಸಲು 19 ಕೋರ್ ಕಮಿಟಿಗಳನ್ನು ರಚನೆ ಮಾಡಿದೆ. ಕ್ವಾರಂಟೈನ್‌ನಲ್ಲಿರುವವರಿಗೆ ಅವಶ್ಯಕ ವಸ್ತುಗಳನ್ನು ತಲುಪಿಸಲು ಸ್ಥಳೀಯ ಸ್ವಯಂ ಸರ್ಕಾರದಿಂದ ಸ್ವಯಂ ಸೇವಕ ತಂಡಗಳನ್ನು ರಚಿಸಲಾಗಿದೆ.

ಇದನ್ನೂ ಓದಿ: SBI ನಿಂದ ಬೃಹತ್‌ ಸಂಖ್ಯೆಯ ಹುದ್ದೆಗಳಿಗೆ ನೋಟಿಫಿಕೇಶನ್‌! 5000 ಕ್ಲರ್ಕ್‌ ಭರ್ತಿಗೆ ಅಧಿಸೂಚನೆ ಶೀಘ್ರ ಬಿಡುಗಡೆ!!!