Home Food Watermelon: ಕಲ್ಲಂಗಡಿ ಹಣ್ಣನ್ನು ಅತಿಯಾಗಿ ಸೇವಿಸಿದರೆ ಏನೆಲ್ಲ ಸಮಸ್ಯೆ ಆಗುತ್ತೆ?

Watermelon: ಕಲ್ಲಂಗಡಿ ಹಣ್ಣನ್ನು ಅತಿಯಾಗಿ ಸೇವಿಸಿದರೆ ಏನೆಲ್ಲ ಸಮಸ್ಯೆ ಆಗುತ್ತೆ?

Watermelon
Image source: News18

Hindu neighbor gifts plot of land

Hindu neighbour gifts land to Muslim journalist

Watermelon: ಬೇಸಿಗೆಯ ಬೇಗೆಯಿಂದ ಪಾರಾಗಲು ಹೆಚ್ಚಿನ ಮಂದಿ ಕಲ್ಲಂಗಡಿ (Watermelon) ಹಣ್ಣನ್ನು ಸೇವಿಸುವುದು ಸಾಮಾನ್ಯ. ಕಲ್ಲಂಗಡಿ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾರೊಟಿನಾಯ್ಡ್​ಗಳು, ಲೈಕೋಪೀನ್, ಕುಕುರ್ಬಿಟಾಸಿನ್, ಮೆಗ್ನೀಸಿಯಮ್​ನಂತಹ ಅನೇಕ ಪೋಷಕಾಂಶಗಳನ್ನ ಒಳಗೊಂಡಿದೆ. ಗರ್ಭಿಣಿಯರು ಹಾಗೂ ಬೊಜ್ಜಿನ ಸಮಸ್ಯೆಯಿದ್ದವರಿಗೆ ಕಲ್ಲಂಗಡಿ ಹಣ್ಣನ್ನು ಸೇವಿಸುವುದು ಉತ್ತಮ ಎಂದು ಹೇಳುವುದನ್ನು ನೀವು ಕೇಳಿರಬಹುದು. ಅದೇ ರೀತಿ ಕಲ್ಲಂಗಡಿ ಸೇವನೆಯು ಆರೋಗ್ಯ(Healthy) ಪ್ರಯೋಜನ ನೀಡುವ ಜೊತೆಗೆ ಅಡ್ಡ ಪರಿಣಾಮಗಳನ್ನ ಉಂಟು ಮಾಡಬಹುದು ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಿದ್ರೆ, ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಏನೆಲ್ಲ ಸಮಸ್ಯೆ ಉಂಟಾಗಬಹುದು?

ಕಲ್ಲಂಗಡಿ ಹಣ್ಣಿನಲ್ಲಿರುವ ನೀರಿನ ಅಂಶ ದೇಹ ಡಿಹೈಡ್ರೇಟ್ (Dehydrate) ಆಗದಂತೆ ಕಾಪಾಡುತ್ತದೆ. ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಸೇವಿಸುವ ಆಹಾರ, ಸೇವನೆಯ ಪ್ರಮಾಣ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ನೀರಿನಾಂಶ ಇದ್ದರೂ ಸಹ ಹಣ್ಣಿನಲ್ಲಿ ಉಷ್ಣ(Heat)ವನ್ನು ಉಂಟುಮಾಡುವ ಗುಣ ಹೊಂದಿದ್ದು, ಹೀಗಾಗಿ, ಆರೋಗ್ಯ ಸಮಸ್ಯೆಯಿದ್ದವರಿಗೆ ಈ ಹಣ್ಣು ಸಮಸ್ಯೆ ಉಂಟು ಮಾಡುವ ಸಾಧ್ಯತೆಗಳಿವೆ.

ಕಲ್ಲಂಗಡಿ ಹಣ್ಣಿನಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ಹೀಗಾಗಿ, ಹಣ್ಣನ್ನು ಹೆಚ್ಚು ಸೇವಿಸುವುದರಿಂದ ಪ್ರಮಾಣದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ (Blood Sugar Level) ಬಹಳ ವೇಗವಾಗಿ ಹೆಚ್ಚಾಗಬಹುದು. ಇದರಿಂದಾಗಿ ಮಧುಮೇಹ ಇರುವವರು ಕಲ್ಲಂಗಡಿ ಹಣ್ಣನ್ನು ಹಿತ ಮಿತವಾಗಿ ಸೇವಿಸುವುದು ಉತ್ತಮ. ಹೆಚ್ಚು ಸೇವನೆ ಒಳ್ಳೆಯದಲ್ಲ.ಸೂಕ್ಷ್ಮದೇಹಿಗಳು ಈ ಹಣ್ಣನ್ನು ಸೇವನೆ ಮಾಡಿದರೆ ಚರ್ಮದ ಬಣ್ಣದಲ್ಲಿ ಬದಲಾವಣೆಯಾಗುವ ಸಾಧ್ಯತೆ ಕೂಡ ಇದೆ.

ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಯಿದ್ದವರು ಅತಿಯಾಗಿ ಕಲ್ಲಂಗಡಿ ಹಣ್ಣಿನ ಸೇವನೆ ಮಾಡಿದರೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕಂಡುಬರುವ ಜೊತೆಗೆ ಡಯೇರಿಯಾ ಹಾಗೂ ಊತ ಕಂಡುಬರುವ ಸಾಧ್ಯತೆಗಳಿವೆ.ಕಲ್ಲಂಗಡಿ ಹಣ್ಣನ್ನು ಮಾತ್ರ ತಿನ್ನುವುದರಿಂದ ವಿಪರೀತ ಹಸಿವು ಉಂಟಾಗುವುದರ ಜೊತೆಗೆ ದೇಹಕ್ಕೆ ಬೇರೆ ಯಾವುದೇ ಪ್ರೋಟೀನ್ ದೇಹವನ್ನು ಸೇರದು. ಇದನ್ನೆ ಅತಿಯಾಗಿ ದೀರ್ಘಕಾಲದವರೆಗೆ ಸೇವಿಸಿದರೆ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಕಲ್ಲಂಗಡಿ ಹಣ್ಣನ್ನು ಇತರ ಪ್ರೋಟೀನ್ ಭರಿತ ಆಹಾರಗಳೊಂದಿಗೆ ಪ್ರತಿದಿನ ಸೇವನೆ ಮಾಡುವುದು ಉತ್ತಮ.

 

ಇದನ್ನು ಓದಿ: PAN Card: ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ದರೆ ಮೊದಲು ಈ ಮಾಹಿತಿ ತಿಳಿದುಕೊಳ್ಳಿ!