Home Health ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್!

ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್!

Female medicine doctor hand holding silver pen writing something on clipboard closeup. Medical care, insurance, prescription, paper work or career concept. Physician ready to examine patient and help

Hindu neighbor gifts plot of land

Hindu neighbour gifts land to Muslim journalist

ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ರೋಗಿಗಳಿಗೆ ಪರಿಹಾರ ನೀಡುವ ಸಲುವಾಗಿ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯನ್ನು (ಎನ್‌ಎಲ್‌ಇಎಂ)ನ್ನು ತಯಾರಿಸಿದೆ.

ಈ ಪಟ್ಟಿಯನ್ನು ಆರೋಗ್ಯ ಸಚಿವಾಲಯವು ಸುಮಾರು ಏಳು ವರ್ಷಗಳ ನಂತರ ನವೀಕರಿಸಿ ಈ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಟಿಬಿ, ಎಚ್‌ಐವಿ, ಹೆಪಟೈಟಿಸ್ ಬಿ, ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಔಷಧಗಳು ಅಗ್ಗವಾಗಲಿದ್ದು, ಇದು ಪೇಟೆಂಟ್ ಔಷಧಗಳನ್ನು ಒಳಗೊಂಡಿದೆ.

ಇದನ್ನು 350 ಕ್ಕೂ ಹೆಚ್ಚು ತಜ್ಞರು ಸಿದ್ಧಪಡಿಸಿದ್ದಾರೆ ಮತ್ತು ಒಟ್ಟು 384 ಔಷಧಿಗಳನ್ನು ಒಳಗೊಂಡಿದೆ. ಇವುಗಳಲ್ಲಿ 8 ಕ್ಯಾನ್ಸರ್ ವಿರೋಧಿ ಔಷಧಗಳು ಸೇರಿದಂತೆ 34 ಹೊಸ ಔಷಧಿಗಳಿವೆ. 26 ಔಷಧಗಳನ್ನೂ ತೆಗೆಯಲಾಗಿದೆ. 2015ರ ಪಟ್ಟಿಯಲ್ಲಿ 376 ಔಷಧಗಳಿದ್ದವು. ಈ ಔಷಧಿಗಳನ್ನು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ನಿಗದಿಪಡಿಸಿದ ಬೆಲೆಗಿಂತ ಹೆಚ್ಚು ಮಾರಾಟ ಮಾಡುವಂತಿಲ್ಲ.

ಆದರೆ, ಕೋವಿಡ್ ಔಷಧಿಗಳು ಮತ್ತು ಲಸಿಕೆಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಏಕೆಂದರೆ ಅವುಗಳನ್ನು ತುರ್ತು ಬಳಕೆಗೆ ಮಾತ್ರ ಅನುಮತಿಸಲಾಗಿದೆ. ಹಾಗೂ ಪಟ್ಟಿಯಿಂದ ಕೆಲವು ಔಷಧಿಗಳನ್ನು ಹೊರಗಿಡಲಾಗಿದ್ದು, ಅವುಗಳಲ್ಲಿ ರಾನಿಟಿಡಿನ್, ಬ್ಲೀಚಿಂಗ್ ಪೌಡರ್, ವಿಟಮಿನ್ ಸಪ್ಲಿಮೆಂಟ್ ನಿಕೋಟಿನಮೈಡ್ ಸೇರಿವೆ.

ಮಧುಮೇಹ ವಿರೋಧಿ ಔಷಧಗಳು, ಉದಾ ಟೆನೆಲಿಗ್ಲಿಪ್ಟಿನ್, ಇನ್ಸುಲಿನ್ ಗ್ಲಾರ್ಜಿನ್ ಇಂಜೆಕ್ಷನ್. ಪ್ರತಿಜೀವಕಗಳು ಉದಾಹರಣೆಗೆ ಮೆರೊಪೆನೆಮ್, ಸೆಫುರಾಕ್ಸಿಮ್. ಸಾಮಾನ್ಯ ನೋವು ನಿವಾರಕಗಳು ಮತ್ತು ಇತರ ಔಷಧಿಗಳಾದ ವಾರ್ಫಿನ್, ಐಬುಪ್ರೊಫೇನ್, ಡಿಕ್ಲೋಫೆನಾಕ್, ಪ್ಯಾರಸಿಟವಾಲ್, ಟ್ರವಾಡಾಲ್, ಪ್ರೆಡ್ನಿಸೋಲೋನ್, ಹಾವಿನ ವಿಷಕ್ಕೆ ಪ್ರತಿವಿಷ, ಕಾರ್ಬವಾಜೆಪೈನ್, ಅಲ್ಬೆಂಡಜೋಲ್, ಐವರ್ಮೆಕ್ಟಿನ್, ಸೆಟಿರಿಜಿನ್, ಅಮೋಕ್ಸಿಸಿಲಿನ್ ಟಿಬಿ ವಿರೋಧಿ ಔಷಧಿಗಳಾದ ಬೆಡಾಕ್ವಿಲಿನ್ ಮತ್ತು ಡೆಲಾವಾನಿಡ್, ಆಂಟಿ ಎಚ್‌ಐವಿ ಡೊಲುಟೆಗ್ರಾವಿರ್, ಆಂಟಿ ಹೆಪಟೈಟಿಸ್ ಸಿ ಡಕ್ಲಾಟಾಸ್ವಿರ್ ಮುಂತಾದ ಪೇಟೆಂಟ್ ಔಷಧಗಳು ಬುಪ್ರೆನಾರ್ಫಿನ್, ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿಯಂತಹ ಡಿ-ಅಡಿಕ್ಷನ್ ಔಷಧಿಗಳು ಡಬಿಗಟ್ರಾನ್ ಮತ್ತು ಇಂಜೆಕ್ಷನ್ ಟೆನೆಕ್ಟೆ ಪ್ಲಸ್ ಅನ್ನು ಹೃದ್ರೋಗಗಳು ಮತ್ತು ಪಾರ್ಶ್ವವಾಯುಗಳಲ್ಲಿ ಬಳಸಲಾಗುತ್ತದೆ ರೋಟವೈರಸ್ ಲಸಿಕೆ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ.