Home Food ನಿಮಗೇನಾದರೂ ಪದೇ ಪದೇ ಆಯಾಸ ಸಮಸ್ಯೆ ಕಾಡುತ್ತಿದೆಯಾ ? ಹಾಗಾದರೆ ಇವುಗಳನ್ನು ತಿನ್ನಿ ಶಕ್ತಿ ಬರುತ್ತೆ!

ನಿಮಗೇನಾದರೂ ಪದೇ ಪದೇ ಆಯಾಸ ಸಮಸ್ಯೆ ಕಾಡುತ್ತಿದೆಯಾ ? ಹಾಗಾದರೆ ಇವುಗಳನ್ನು ತಿನ್ನಿ ಶಕ್ತಿ ಬರುತ್ತೆ!

Hindu neighbor gifts plot of land

Hindu neighbour gifts land to Muslim journalist

ಒಬ್ಬರ ಅಲ್ಪಾವಧಿ ಮತ್ತು ದೀರ್ಘಾವಧಿಯ ಆಯಾಸವು ಅವರು ತಿನ್ನುವ ಆಹಾರಕ್ಕೆ ನೇರವಾಗಿ ಸಂಬಂಧಿಸಿದೆ. ಅನೇಕರು ವಿಟಮಿನ್ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ನಮ್ಮ ದೇಹದಲ್ಲಿ ವಿಟಮಿನ್ ಕೊರತೆ ಕಾಣಿಸಿಕೊಂಡರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ, ಆಹಾರ ಬೆಳೆಗಳಿಗೆ ಹೆಚ್ಚು ರಾಸಾಯನಿಕ ಬಳಸುವುದು, ಪ್ರಸ್ತುತ ಹಣ್ಣು, ತರಕಾರಿ ಸಂಸ್ಕರಣೆಗೆ ಬಳಸುವ ವಿಧಾನ, ಕಲಬೆರಕೆ ಆಹಾರ, ಸಿದ್ಧ ಆಹಾರಕ್ಕೆ ಮಾರುಹೋಗಿರುವುದು ಅಪೌಷ್ಟಿಕತೆಗೆ ಕಾರಣವಾಗಿದೆ ಇದರಿಂದಾಗಿ ಸುಸ್ತು ಆಯಾಸ ಸರ್ವೇ ಸಾಮಾನ್ಯವಾಗಿ ಅನುಭವಿಸಬೇಕಾಗುತ್ತದೆ.

ಸದ್ಯ ನಮ್ಮ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ತುಂಬಲು ನಾವು ಕೆಲವು ಆಹಾರವನ್ನು ಸೇವಿಸಿದರೆ ಆಯಾಸವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅಂತಹ ಆಹಾರಗಳು ಯಾವುದೆಂದು ಈ ಕೆಳಗೆ ತಿಳಿದುಕೊಳ್ಳಿ.

  • ​ಕಂದು ಬಣ್ಣದ ಅಕ್ಕಿಯಲ್ಲಿ ​ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಪ್ರಮಾಣ ಹೆಚ್ಚಾಗಿದ್ದು, ನಿಮ್ಮ ಆಹಾರ ಪದ್ಧತಿಯಲ್ಲಿ ಇದನ್ನು ಸೇರಿಸಿ ಕೊಳ್ಳುವು ದರಿಂದ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶ ಮತ್ತು ಸ್ಟಾರ್ಚ್ ಸಿಗುತ್ತದೆ ಜೊತೆಗೆ ಇಡೀ ದಿನ ನಿಮಗೆ ಹೊಟ್ಟೆ ಹಸಿವು ಆಗದಂತೆ ಇದು ನೋಡಿಕೊಳ್ಳುತ್ತದೆ.
    ನೀವು ಸೇವಿಸಿದ ಆಹಾರ ನಿಧಾನವಾಗಿ ಜೀರ್ಣವಾಗುವ ಮೂಲಕ ನಿಮಗೆ ಕ್ರಮೇಣವಾಗಿ ಶಕ್ತಿ ಮತ್ತು ಚೈತನ್ಯ ವನ್ನು ನೀಡುತ್ತದೆ.
  • ಕಬ್ಬಿಣದ ಅಂಶ ಹೆಚ್ಚಾಗಿರುವ ಬೀಟ್ರೂಟ್ ಇದು ಉಸಿರಾಟದ ತೊಂದರೆ, ಆಯಾಸ ಇತ್ಯಾದಿಗಳನ್ನು ಸುಲಭವಾಗಿ ಹೋಗಲಾ ಡಿಸುತ್ತದೆ. ವ್ಯಾಯಾಮ ಮಾಡಿದ ನಂತರದಲ್ಲಿ ಎದುರಾಗುವ ಸುಸ್ತು ಇತ್ಯಾದಿ ಗಳನ್ನು ಇದು ಕ್ಷಣಮಾತ್ರದಲ್ಲಿ ಇಲ್ಲವಾಗಿಸುತ್ತದೆ.
  • ಹಸಿರು ಎಲೆ ತರಕಾರಿಗಳು ಕಬ್ಬಿಣ ಮತ್ತು ನಾರಿನ ಪ್ರಮಾಣ ಇವುಗಳಲ್ಲಿ ಹೇರಳವಾಗಿದ್ದು, ಇಡೀ ದೇಹದ ತುಂಬಾ ರಕ್ತ ಸಂಚಾರ ವನ್ನು ಉತ್ತೇಜಿಸುತ್ತದೆ ಮತ್ತು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಸಮರ್ಪಕವಾಗಿ ತಲುಪುವಂತೆ ನೋಡಿ ಕೊಳ್ಳುತ್ತದೆ.
  • ​ಬಾಳೆಹಣ್ಣಿನಲ್ಲಿ ಅಪಾರ ಪ್ರಮಾಣದ ಕ್ಯಾಲೋರಿಗಳು ಇರುವುದರಿಂದ ಸುಸ್ತು ಮತ್ತು ಆಯಾಸ ಎದುರಾಗಿ ದೇಹದ ಶುಗರ್ ಲೆವೆಲ್ ಕಮ್ಮಿ ಆಗಿರುತ್ತದೆ ಅಂತಹವರಿಗೆ ತಕ್ಷಣವೇ ದೇಹಕ್ಕೆ ಗ್ಲುಕೋಸ್ ಮತ್ತು ಖನಿಜಾಂಶ ಗಳ ಸಹಿತ ಹೆಚ್ಚಿನ ಪ್ರಮಾಣದ ಮೆಗ್ನೀಷಿ ಯಂ ಮತ್ತು ಪೊಟ್ಯಾಶಿಯಂ ಅಂಶವನ್ನು ಒದಗಿಸುತ್ತದೆ. ಜೊತೆಗೆ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತದೆ.
  • ಮೀನು ತನ್ನಲ್ಲಿ ಒಮೆಗಾ 3 ಫ್ಯಾಟಿ ಆಮ್ಲದ ಪ್ರಮಾಣ ವನ್ನು ಹೊಂದಿದ್ದು, ಅನೇಕ ಬಗೆಯ ಪೌಷ್ಟಿಕ ಸತ್ವಗಳನ್ನು ಒಳಗೊಂಡಿದೆ. ನಿಮ್ಮ ದೇಹದ ಮೆಟಬಾಲಿ ಸಂ ಪ್ರಕ್ರಿಯೆಯನ್ನು ಉತ್ತೇಜಿಸಿ, ಕೊಬ್ಬಿನ ಅಂಶವನ್ನು ಕರಗಿಸುತ್ತದೆ.
    ದೇಹದಲ್ಲಿ ಹೆಚ್ಚಿನ ಮಟ್ಟದಲ್ಲಿ ಶಕ್ತಿಯ ಪ್ರಮಾಣವನ್ನು ನಿರ್ವಹಿಸುತ್ತದೆ. ಪ್ರೋಟೀನ್, ವಿಟಮಿನ್, ಖನಿಜಾಂಶ ಗಳು ಮತ್ತು ಅಯೋಡಿನ್ ಇದರಲ್ಲಿ ಹೆಚ್ಚಾಗಿದ್ದು, ದೇಹದ ಬಹುತೇಕ ಕಾರ್ಯ ಚಟುವಟಿಕೆಗಳು ಅಚ್ಚು ಕಟ್ಟಾಗಿ ನಡೆಯಲು ನೆರವಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ ಯಾವಾಗಲೂ ಫಿಟ್ ಅಂಡ್ ಫೈನ್ ಆಗಿರುವಂತೆ ನೋಡಿಕೊಳ್ಳುತ್ತದೆ.
  • ಕೋಳಿ ಮಾಂಸ ಮತ್ತು ಕೋಳಿ ಮೊಟ್ಟೆ ದೇಹದ ಮಾಂಸ ಖಂಡಗಳ ಬೆಳವಣಿಗೆಯಲ್ಲಿ ಉಪಯೋಗಕ್ಕೆ ಬರುವ ಪ್ರೋಟಿನ್ ಅಂಶ ಸಿಗುವುದರ ಜೊತೆಗೆ ಮೂಳೆಗಳು ಸಹ ಬಲ ಗೊಳ್ಳುತ್ತವೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ದೇಹದಲ್ಲಿ ಟೆಸ್ಟೋಸ್ಟಿ ರೋನ್ ಹಾರ್ಮೋನ್ ಪ್ರಮಾಣ ಹೆಚ್ಚಾಗು ವಂತೆ ಮಾಡಿ ಲೈಂಗಿಕ ಸಮರ್ಥತೆಯನ್ನು ಸಹ ಕಾಪಾಡುತ್ತದೆ. ಇದರ ಜೊತೆಗೆ ಶಕ್ತಿಯನ್ನು ಹೆಚ್ಚಿಸಿ ವ್ಯಾಯಾಮ ಮಾಡಿದಾಗ ಅಥವಾ ಬೇರೆ ಬೇರೆ ಕೆಲಸಗಳನ್ನು ಮಾಡಿದಾಗ ಸುಸ್ತಾಗದಂತೆ ನೋಡಿ ಕೊಳ್ಳುತ್ತದೆ.
  • ಮುಖ್ಯವಾಗಿ ದಿನನಿತ್ಯ ಹಾಲು ಸೇವನೆ ಅಭ್ಯಾಸ ಮಾಡಿಕೊಂಡಾಗ ಹೆಚ್ಚಿನ ಪ್ರೊಟೀನ್ ನಿಮ್ಮ ದೇಹಕ್ಕೆ ದೊರೆಯುವುದರೊಂದಿಗೆ ನೀವು ನೆನಪಿನ ಶಕ್ತಿ ವೃದ್ಧಿ ಜೊತೆಗೆ ಚೈತನ್ಯತೆಯಿಂದ ಕೂಡಿರಲು ಸಹಾಯ ಮಾಡುತ್ತವೆ.
  • ಬಾದಾಮಿ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬಾದಾಮಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ. ಬಾದಾಮಿಯನ್ನು ನೆನೆಸಿ ತಿನ್ನುವುದು ಸೂಕ್ತ.
  • ಕಾರ್ಬೋಹೈಡ್ರೇಟ್ಸ್ ಹಾಗೂ ಫೈಬರ್ ಇರುವ ಆಹಾರ ಸೇಬು. ಮೀಡಿಯಂ ಸೈಜ್ ಇರುವ ಸೇಬು ದಿನವೂ ಒಂದರಂತೆ ಸೇವಿಸಿದರೆ ನಮ್ಮ ಆರೋಗ್ಯದಲ್ಲಾಗುವ ಬದಲಾವಣೆ ಕಾಣುತ್ತದೆ. ಇದು ಸುಸ್ತಾಗದಂತೆ ತಡೆಗಟ್ಟುತ್ತದೆ. ಇದರಲ್ಲಿರುವ ಫೈಬರ್ ನಮ್ಮ ಚರ್ಮಕ್ಕೂ ಒಳ್ಳೆಯದು.
  • ಆಹಾರದಲ್ಲಿ ನಿಯಮಿತವಾಗಿ ಅರಿಶಿನವನ್ನು ಸೇರಿಸಿಕೊಂಡು ಸೇವಿಸುತ್ತಾ ಬರುವ ಮೂಲಕ ಕಳೆದುಕೊಂಡಿದ್ದ ಶಕ್ತಿಯನ್ನು ಶೀಘ್ರವಾಗಿ ಪಡೆಯಬಹುದು. ಅರಿಶಿನದ ಇನ್ನೊಂದು ಗುಣವೆಂದರೆ ದೇಹದಿಂದ ಜಖಂಗೊಂಡಿದ್ದ ಅಂಗಾಂಶಗಳು ಶೀಘ್ರವೇ ದುರಸ್ತಿಗೊಳ್ಳುತ್ತವೆ ಹಾಗೂ ವಿಶೇಷವಾಗಿ ಸ್ನಾಯುಗಳು ಹೆಚ್ಚು ಹೆಚ್ಚು ಬಲಯುತಗೊಳ್ಳುತ್ತವೆ. ನಿತ್ಯವೂ ರಾತ್ರಿ ಮಲಗುವ ಮುನ್ನ ಬಿಸಿಹಾಲಿನಲ್ಲಿ ಒಂದು ಚಿಕ್ಕ ಚಮಚ ಅರಿಶಿನ ಬೆರೆಸಿ ಸೇವಿಸುವ ಮೂಲಕ ಇವೆಲ್ಲಾ ಗುಣಗಳನ್ನು ಗರಿಷ್ಟವಾಗಿ ಪಡೆಯಬಹುದು.
  • ಮೊಳಕೆ ಬರಿಸಿದ ಕಾಳುಗಳು ದೇಹಕ್ಕೆ ಹೆಚ್ಚಿನ ಪ್ರೊಟೀನ್ ಅನ್ನು ನೀಡುತ್ತವೆ. ಆದ್ದರಿಂದ ಹೆಚ್ಚಾಗಿ ನಿಮ್ಮ ಆಹಾರದಲ್ಲಿ ಮೊಳಕೆ ಕಾಳುಗಳ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
  • ಇವೆಲ್ಲದರ ಜೊತೆಗೆ ನೀರು ಅಗತ್ಯವಾದುದು. ನಮ್ಮ ದೇಹದ ಶೇ.75ರಷ್ಟು ಭಾಗದಲ್ಲಿ ನೀರಿನಾಂಶವಿದೆ. ಸ್ನಾಯುಗಳು ತೇವಾಂಶದಿಂದ ಇದ್ದರೆ ಆಗ ಬಲ ಸಿಗುವುದು ಮತ್ತು ಶಕ್ತಿಯ ಮಟ್ಟವು ಹೆಚ್ಚಾಗುವುದು. 0.6 ಔನ್ಸ್ ನಷ್ಟು ನೀರು 45 ಗ್ರಾಂ ತೂಕಕ್ಕೆ ಬೇಕಾಗಿದೆ. ಜಲೀಕರಣವು ಶಕ್ತಿಯ ಮೂಲಕ್ಕೆ ತುಂಬಾ ಪ್ರಮುಖ ಅಂಶವಾಗಿದೆ. ಇದು ಬೇರೆಲ್ಲಾ ಆಹಾರಕ್ಕಿಂತಲೂ ಪ್ರಮುಖವಾಗಿದೆ.

ಈ ಎಲ್ಲಾ ಆಹಾರಗಳನ್ನು ನಿಮ್ಮ ದಿನನಿತ್ಯ ಆಹಾರದ ಜೊತೆ ಸೇವಿಸಿದಲ್ಲಿ ದೇಹವು ಸದಾ ಚೈತನ್ಯತೆಯಿಂದ ಕೂಡಿರಲು ಸಹಾಯ ಮಾಡುತ್ತದೆ.