Home Food Drum Stick: ಪುರುಷರ ಈ ಸಮಸ್ಯೆಗೆ ನುಗ್ಗೆ ಕಾಯಿ ಸಂಜೀವಿನಿ ಆಗಲಿದೆ!

Drum Stick: ಪುರುಷರ ಈ ಸಮಸ್ಯೆಗೆ ನುಗ್ಗೆ ಕಾಯಿ ಸಂಜೀವಿನಿ ಆಗಲಿದೆ!

Drum Stick
Image source : Vijayakarnataka

Hindu neighbor gifts plot of land

Hindu neighbour gifts land to Muslim journalist

Drum Stick Benefits: ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳ ಹೊರತು ಕೆಲವೊಂದು ನೈಸರ್ಗಿಕ ಉತ್ಪನ್ನಗಳು ಮತ್ತು ಆಹಾರವು ಕಾಮಾಸಕ್ತಿ ಹೆಚ್ಚಿಸುವುದರ ಜೊತೆಗೆ ಲೈಂಗಿಕ ಆರೋಗ್ಯವನ್ನು ಉತ್ತಮಪಡಿಸುತ್ತದೆ.

ಮುಖ್ಯವಾಗಿ ದಾಂಪತ್ಯದಲ್ಲಿ ಲೈಂಗಿಕ ಆರೋಗ್ಯ ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ಈ ವಿಚಾರ ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತದೆ. ದಿನನಿತ್ಯವದ ಒತ್ತಡ ಹಾಗೂ ಹಾರ್ಮೋನ್ ಅಸಮತೋಲನದಿಂದಾಗಿ ಕಾಮಾಸಕ್ತಿ ಕುಂದುವುದು ಮತ್ತು ಲೈಂಗಿಕ ಆಸಕ್ತಿಯು ಕಡಿಮೆ ಆಗಬಹುದು.

ಈ ಮೇಲಿನ ಸಮಸ್ಯೆಗೆ ಪ್ರತಿದಿನ ಆಹಾರದ ಜೊತೆಗೆ ನುಗ್ಗೆಕಾಯಿ (Drum Stick Benefits) ತಿನ್ನಿ. ಹಿಂದಿನ ಕಾಲದಲ್ಲಿ ಲೈಂಗಿಕಾಸಕ್ತಿ, ಕಾಮಾಸಕ್ತಿ, ನಿಮಿರು ದೌರ್ಬಲ್ಯ ಹೀಗೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದವರು ನುಗ್ಗೆ ಕಾಯಿಯನ್ನು ತಿನ್ನುತ್ತಿದ್ದರು. ಹೌದು, ನೈಸರ್ಗಿಕ ಆಹಾರ ಸೇವಿಸುವ ಮೂಲಕ ಕೂಡ ಲೈಂಗಿಕ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು.

ನಿಮ್ಮ ಆಹಾರದಲ್ಲಿ ನುಗ್ಗೆ ಕಾಯಿ ಸಾಂಬರ್, ನುಗ್ಗೆ ಕಾಯಿ ಸೊಪ್ಪಿನಲ್ಲಿ ಪಲ್ಯ, ನುಗ್ಗೆ ಕಾಯಿ ಸೂಪ್, ನುಗ್ಗೆ ಕಾಯಿ ಪಲ್ಯ, ನುಗ್ಗೆ ಕಾಯಿ ಗ್ರೇವಿ ಹೀಗೆ ನುಗ್ಗೆ ಕಾಯಿಯಲ್ಲಿ ವಿಧವಿಧವಾದ ಖಾದ್ಯಗಳನ್ನು ಮಾಡಿ ಸೇವಿಸಬಹುದು. ನುಗ್ಗೆಕಾಯಿಯಷ್ಟೇ ಅಲ್ಲದೇ ಅದರ ಹೂವಿನ ಪಲ್ಯ ದೇಹಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಇದು ಲೈಂಗಿಕ ಭಾವನೆಯನ್ನು ಹೆಚ್ಚಿಸುತ್ತದೆ.

ಇನ್ನು ನುಗ್ಗೆ ಹೂವುಗಳನ್ನು ಹಾಲಿನೊಂದಿಗೆ ಬೆರೆಸಿ, ಕಲ್ಲು ಸಕ್ಕರೆ ಸೇರಿಸಿ ಕುಡಿದರೆ, ಪುರುಷರ ದೇಹದ ಟೆಸ್ಟ್ಸ್ಟರೋನ್ ಹಾರ್ಮೋನ್ ಹೆಚ್ಚಾಗುತ್ತದೆ. ಇದರಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ.

ನುಗ್ಗೆಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಅದರ ಕಾಂಡವನ್ನು ಒಣಗಿಸಿ ಪುಡಿ ಮಾಡಿ ಪ್ರತಿ ದಿನ ಒಂದು ಲೋಟ ಹಾಲಿನೊಂದಿಗೆ ಮಿಕ್ಸ್ ಮಾಡಿ ಒಂದು ತಿಂಗಳವರೆಗೂ ಕುಡಿಯಿರಿ. ಇದರಿಂದ ವೀರ್ಯಾಣುಗಳು ವೃದ್ಧಿಯಾಗುತ್ತದೆ.

ಮುಖ್ಯವಾಗಿ ನುಗ್ಗಿಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಕ್ಯಾಲ್ಸಿಯಂ ಅಂಶವು ಹೆಚ್ಚಾಗಿದೆ. ಅದರಲ್ಲೂ ಶುಗರ್ ಇರುವವರಿಗೆ ನುಗ್ಗೆ ಸೊಪ್ಪು ಸಂಜೀವಿನಿ ಆಗಿ ಕೆಲಸ ಮಾಡುತ್ತೆ.

Wifi router : ರಾತ್ರಿ ಮಲಗುವಾಗ ವೈಫೈ ರೂಟರ್ ಆನ್ ಇರಿಸುತ್ತೀರಾ! ಈ ವಿಚಾರ ತಿಳಿದುಕೊಳ್ಳಿ!