

Thyroid Symptoms: ಆರೋಗ್ಯದ ಕಾಳಜಿ ಮಾಡುವಲ್ಲಿ ಥೈರಾಯ್ಡ್ ಗ್ರಂಥಿಯ ಪಾತ್ರ ಬಹುಮುಖ್ಯವಾದುದಾಗಿದೆ. ಆದರೆ ಒಂದು ವೇಳೆ ಈ ಪ್ರಮುಖ ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ ವ್ಯತ್ಯಾಸ ಕಾಣಿಸಿಕೊಂಡರೆ, ಥೈರಾಯ್ಡ್ ಸಂಬಂಧಿತ ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ.
ವರದಿಗಳ ಪ್ರಕಾರ,200 ಮಿಲಿಯನ್ ಜನರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪುರುಷರಿಗೆ ಹೋಲಿಸಿದರೆ ಸುಮಾರು 8 ಮಹಿಳೆಯರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಡುತ್ತಂತೆ. ಇನ್ನೂ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ಈ ಸಮಸ್ಯೆ ಎದುರಾಗಿದೆ ಎಂದೇ ಅರ್ಥವಾಗಿದೆ.
ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಮಾಡದೇ ಇದ್ದರೆ, ಥೈರಾಯ್ಡ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತೆ, ಆದರೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿದರೂ ಕೂಡ ಆಯಾಸದ ಅನುಭವ ಆದರೆ ಇದು ಥೈರಾಯ್ಡ್ ಲಕ್ಷಣವಾಗಿರುತ್ತದೆ. ಇನ್ನೂ ಮಹಿಳೆಯರ ದೇಹದ ತೂಕ ಇದ್ದಕ್ಕಿದಂತೆ ಹೆಚ್ಚಾಗುತ್ತಾ ಬಂದರೆ, ಮೊದಲಿಗೆ ಥೈರಾಯ್ಡ್ ಅನ್ನು ಪರೀಕ್ಷಿಸಬೇಕಾದ ಅನಿವಾರ್ಯವಿರುತ್ತದೆ, ಆಹಾರಪದ್ಧತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿದ್ದರೂ ಕೂಡ, ದೇಹದ ತೂಕ ಹೆಚ್ಚಾಗುತ್ತಿದ್ದರೆ, ಅದು ಹೈಪೋ ಥೈರಾಯ್ಡಿಸಮ್ ನಿಂದ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಇನ್ನೂ ಹೈಪೋಥೈರಾ ಯ್ಡಿಸಮ್ ಕಾಣಿಸಿಕೊಂಡರೆ ನಿಯಮಿತ ಮುಟ್ಟಿನ ಹರಿವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತೆ ಹಾಗೂ ಹಾರ್ಮೋನ್ ಅಸಮತೋಲನದಿಂದಾಗಿ ಗರ್ಭಧರಿಸಲು ಕಷ್ಟವಾಗಬಹುದು. ಇನ್ನೂ ದೇಹದ ತೂಕ ಹೆಚ್ಚು ಅಥವಾ ಅಥವಾ ಕಡಿಮೆ ಆಗುವುದು, ಮೂಳೆಗಳಲ್ಲಿ ನೋವು-ಕೀಲು ನೋವು , ಮಾನಸಿಕ ಒತ್ತಡ ಹೆಚ್ಚಾಗುವುದು, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದು, ಎದೆಯ ಬಿಗಿತ ಕಾಣಿಸಿಕೊಳ್ಳುವುದು, ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು ಮತ್ತು ಚರ್ಮದಲ್ಲಿ ಕೆರೆತ ಕಾಣಿಸಿಕೊಳ್ಳುವುದು ಕೂಡ ಲಕ್ಷಣಗಳಾಗಿವೆ













