Home Health Home remedies: ಯಾವಾಗಲೂ ತಲೆ ನೋಯುತ್ತದೆಯೇ? ಇಲ್ಲಿದೆ ಸುಲಭ ಪರಿಹಾರ

Home remedies: ಯಾವಾಗಲೂ ತಲೆ ನೋಯುತ್ತದೆಯೇ? ಇಲ್ಲಿದೆ ಸುಲಭ ಪರಿಹಾರ

Hindu neighbor gifts plot of land

Hindu neighbour gifts land to Muslim journalist

Home remedies: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ತಲೆನೋವು ಬಂದೇ ಬರುತ್ತೆ. ಕೆಲಸದ ಒತ್ತಡ ನಿದ್ರೆ ಕಡಿಮೆ ಅಥವಾ ಇನ್ನಿತರ ಕಾರಣಗಳು ಇರಬಹುದು. ಇದಕ್ಕಾಗಿ ಹೆಚ್ಚಿನ ಜನರು ಇಂಗ್ಲೀಷ್ ಔಷಧಿಗಳ ಮೊರೆ ಹೋಗ್ತಾರೆ. ಆದ್ರೆ ಇನ್ನು ಸುಲಭದ ಹಾದಿ ಅಂದ್ರೆ ಮನೆ ಮದ್ದು.

ತಲೆ ನೋವಿಗೆ ಮೆಹಂದಿ ಎಲೆಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಆ ನೀರು ಕುಡಿಬೇಕು. ಅಥವಾ ಈ ಎಲೆಗಳನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಬಹುದು. ಇದು ತಂಪು ನೀಡುವುದಲ್ಲದೆ, ತಲೆನೋವು ಕಡಿಮೆ ಮಾಡುತ್ತದೆ.

ಬೇವಿನ ಎಣ್ಣೆ ತಲೆನೋವಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಮನೆಯಲ್ಲಿಯೇ ಬೇವಿನ ಎಣ್ಣೆಯನ್ನು ಸುಲಭವಾಗಿ ತಯಾರಿಸಬಹುದು. ಇದಕ್ಕಾಗಿ ತೆಂಗಿನ ಎಣ್ಣೆಯಲ್ಲಿ ಬೇವಿನ ಎಲೆಗಳನ್ನು ನೆನೆಸಿ ಸ್ವಲ್ಪ ಸಮಯ ಬಿಸಿಲಿನಲ್ಲಿಡಿ. ನಂತರ, ಈ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಬೇಕು.

ತಲೆನೋವು ನಿವಾರಿಸಲು, ತಾಜಾ ಅಲೋವೆರಾ ಎಲೆಗಳ ಜೆಲ್ ಅನ್ನು ಹಣೆಗೆ ಹಚ್ಚಬೇಕು. ಇದರ ಜೊತೆಗೆ, ತಾಜಾ ಕಲಬಂದ ಜೆಲ್‌ನಲ್ಲಿ ಎರಡು ಹನಿ ಲವಂಗ ಎಣ್ಣೆ, ಚಿಟಿಕೆ ಅರಿಶಿನವನ್ನು ಬೆರೆಸಿ ಕೂಡ ಹಚ್ಚಬಹುದು. ಈ ಪೇಸ್ಟ್ ಅನ್ನು ಹಣೆಯ ಮೇಲೆ ಸುಮಾರು 20 ನಿಮಿಷಗಳ ಕಾಲ ಇರಿಸುವುದರಿಂದ ತಂಪು ಉಂಟಾಗುತ್ತದೆ.