Home Health ಖಾಸಗಿ ಅಂಗದ ಕಪ್ಪು ಕಲೆಯಿಂದ ಬೇಸರವಾಗಿದೆಯೇ! ಚಿಂತೆ ಬಿಡಿ ಇಲ್ಲಿದೆ ಪರಿಹಾರ

ಖಾಸಗಿ ಅಂಗದ ಕಪ್ಪು ಕಲೆಯಿಂದ ಬೇಸರವಾಗಿದೆಯೇ! ಚಿಂತೆ ಬಿಡಿ ಇಲ್ಲಿದೆ ಪರಿಹಾರ

Private area

Hindu neighbor gifts plot of land

Hindu neighbour gifts land to Muslim journalist

Private area : ಖಾಸಗಿ ಅಂಗ(private area )ಮುಜುಗರ ತರಿಸುವಂತಹ ಭಾಗವಾಗಿದೆ. ಖಾಸಗಿ ಅಂಗವು ನಿಕಟ ಪ್ರದೇಶ ಆಗಿರುವುದರಿಂದ ಬಣ್ಣ ವ್ಯತ್ಯಾಸವು(different ) ಸಾಕಷ್ಟು ಗೋಚರಿಸುತ್ತದೆ. ಘರ್ಷಣೆ, ದದ್ದುಗಳು, ಬಿಗಿಯಾದ ಬಟ್ಟೆ, ಬೆವರುವಿಕೆ ಮತ್ತು ಹಾರ್ಮೋನ್ ಅಂಶಗಳಿಂದ ಬಣ್ಣ ವ್ಯತ್ಯಾಸ ಇರುತ್ತದೆ. ಕೆಲವೊಮ್ಮೆ ಖಾಸಗಿ ಅಂಗದ ಕಪ್ಪು ಕಲೆ ಸಂಭೋಗದ ವೇಳೆ ಮುಜುಗರವನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ ಮುಖ, ಕೈ, ಕಾಲಿನ ಅಂದ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ಹೋಗುತ್ತೇವೆ. ಹಾಗೆಯೇ ಇಲ್ಲಿ ಖಾಸಗಿ ಅಂಗದ ಸೌಂದರ್ಯ ಹೆಚ್ಚಿಸಿಕೊಳ್ಳುವುದನ್ನು ಸುಲಭ ಪರಿಹಾರ ತಿಳಿಸಲಾಗಿದೆ.

• ಚರ್ಮವನ್ನು ಹೊಳಪು ಮಾಡಲು ಅರಿಶಿನವನ್ನು ಬಳಸುವುದು ಅತ್ಯಂತ ಜನಪ್ರಿಯ ಭಾರತೀಯ ಪರಿಹಾರಗಳಲ್ಲಿ ಒಂದಾಗಿದೆ. ಮತ್ತೊಂದೆಡೆ, ಕಿತ್ತಳೆ ರಸವು ನಿಂಬೆಯಂತೆಯೇ ನೈಸರ್ಗಿಕ ಬ್ಲೀಚ್‌ನಂತೆ ಕಾರ್ಯನಿರ್ವಹಿಸುತ್ತದೆ. ಕಿತ್ತಳೆ ರಸದ ಮೂರು ಭಾಗಗಳನ್ನು ಒಂದು ಚಿಟಿಕೆ ಅರಿಶಿನ ಪುಡಿಯೊಂದಿಗೆ ಬೆರೆಸಿ ಮತ್ತು ಚರ್ಮದ ಮೇಲೆ ದಪ್ಪಗೆ ಹಚ್ಚಿರಿ.

• ರೋಸ್ ವಾಟರ್(Rose water ) ಚರ್ಮವನ್ನು ತೇವಗೊಳಿಸುತ್ತದೆ. ಒಂದು ಭಾಗವನ್ನು ರೋಸ್ ವಾಟರ್ ಮತ್ತು ಶ್ರೀಗಂಧದ ಪುಡಿಯನ್ನು ಬೆರೆಸಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಬಯಸಿದ ಪ್ರದೇಶದಲ್ಲಿ ಬಳಸಿ. ನಂತರ 15ನಿಮಿಷ ಕಳೆದು ತೊಳೆಯಿರಿ.

• ಒಂದು ಚಮಚ ತೆಂಗಿನ ಎಣ್ಣೆ ಹಾಗೂ 1 ಚಮಚ ಜೇನು ತುಪ್ಪವನ್ನು ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ. ಅದನ್ನು ಖಾಸಗಿ ಅಂಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಸ್ವಚ್ಚಗೊಳಿಸಿ. ಆ ನಂತರ ರೋಸ್ ವಾಟರ್ ಹಚ್ಚಿ.

• ಸೌತೆಕಾಯಿ ರಸ ತೆಗೆದು ಅದನ್ನು ಅಲೋವೆರಾ ರಸಕ್ಕೆ ಮಿಕ್ಸ್ ಮಾಡಿ ಹಚ್ಚಿಕೊಳ್ಳುತ್ತ ಬನ್ನಿ. ಇದು ಕೂಡ ಖಾಸಗಿ ಅಂಗವನ್ನು ಬೆಳ್ಳಗೆ ಮಾಡುತ್ತದೆ.

• ಆಲೂಗಡ್ಡೆ ಕತ್ತರಿಸಿ ಅದನ್ನು ವೃತ್ತಾಕಾರದಲ್ಲಿ ಖಾಸಗಿ ಅಂಗಕ್ಕೆ ಮಸಾಜ್ ಮಾಡಿ. ಇದು ಕೂಡ ಬ್ಲೀಚ್ ನಂತೆ ಕೆಲಸ ಮಾಡುತ್ತದೆ.

• ಸರಳವಾದ ಮೊಸರು ಸಹ ಗಾಢವಾದ ಚರ್ಮದ ತೇಪೆಗಳನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಕಿರಿಕಿರಿ ಮತ್ತು ದದ್ದುಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. 10-15 ನಿಮಿಷಗಳ ಕಾಲ ಚರ್ಮದ ಪ್ರದೇಶಕ್ಕೆ ಮೊಸರನ್ನು ಅನ್ವಯಿಸಿ ಮತ್ತು ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಈ ರೀತಿಯಾಗಿ ಮೇಲಿನಂತೆ ಮನೆಯಲ್ಲಿ ನೀವು ಪೇಸ್ಟ್ ತಯಾರಿಸಿ ಖಾಸಗಿ ಭಾಗಗಳಿಗೆ ಹಚ್ಚುವುದರಿಂದ ಖಾಸಗಿ ಭಾಗದ ದದ್ದುಗಳು ಮಾಯವಾಗಿ ನಯವಾಗಿ ಬಣ್ಣ ಪಡೆಯಲು ಕಾರಣವಾಗುತ್ತದೆ.