Home Health Dakshina Kannada (Cholera): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲರಾ ಆತಂಕ ಹೆಚ್ಚಳ; ಕಲುಷಿತ ಆಹಾರ ಸೇವನೆ...

Dakshina Kannada (Cholera): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲರಾ ಆತಂಕ ಹೆಚ್ಚಳ; ಕಲುಷಿತ ಆಹಾರ ಸೇವನೆ ತಪ್ಪಿಸಲು ಸೂಚನೆ

Kerala West Nile Fever

Hindu neighbor gifts plot of land

Hindu neighbour gifts land to Muslim journalist

Dakshina Kannada (Cholera): ಮೂಡಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಓರ್ವ ವ್ಯಕ್ತಿಯಲ್ಲಿ ಕಾಲರಾ ಸೋಂಕು ಪತ್ತೆಯಾಗಿರುವ ಕಾರಣ, ಉಡುಪಿ ಜಿಲ್ಲೆಯ ಹೊಸ್ಮಾರುವಿನ ಹೋಟೆಲ್‌ನಿಂದ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.

ಹಾಗಾಗಿ ಇದೀಗ ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಹೈ ಅಲರ್ಟ್‌ ಆಗಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೋಟೆಲ್‌ ಮಾಲೀಕರ ಜೊತೆ ವಿಶೇಷ ಸಭೆ ನಡೆಸಿದ್ದಾರೆ.

ಶುದ್ಧ ನೀರು ಬಳಸಬೇಕು, ಬೇಯಿಸಿದ ಆಹಾರವನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಆಹಾರ ಸ್ವಲ್ಪ ಕಲುಷಿತಗೊಂಡರೂ ಕಾಲರಾ ಅಪಾಯವಿದೆ. ತೊಟ್ಟಿ ನೀರಿನ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕ್ಲೋರಿನೇಷನ್‌ ಹಾಗೂ ಸೂಪರ್‌ ಕ್ಲೋರಿನೇಷನ್‌ ಮಾಡಬೇಕು. ಕಲುಷಿತ ಆಹಾರ ಸೇವನೆ ಮಾಡುವುದರಿಂದ ಕಾಲರಾ ಸೋಂಕು ಹರಡಲಿರುವ ಕಾರಣ, ತೀವ್ರ ವಾಂತಿ ಭೇದಿ ಉಂಟಾಗಿ ವ್ಯಕ್ತಿ ಸಾವಿಗೀಡಾಗುವ ಆತಂಕ ಇದೆ ಎನ್ನಲಾಗಿದೆ.