Home Health Second opinion: ಇನ್ಮುಂದೆ ಶಸ್ತ್ರಚಿಕಿತ್ಸೆ ಬಗ್ಗೆ ತಜ್ಞ ವೈದ್ಯರಿಂದ ಉಚಿತವಾಗಿ ಸೆಕೆಂಡ್ ಒಪಿನಿಯನ್ ಜೊತೆಗೆ ಸಹಾಯವಾಣಿ...

Second opinion: ಇನ್ಮುಂದೆ ಶಸ್ತ್ರಚಿಕಿತ್ಸೆ ಬಗ್ಗೆ ತಜ್ಞ ವೈದ್ಯರಿಂದ ಉಚಿತವಾಗಿ ಸೆಕೆಂಡ್ ಒಪಿನಿಯನ್ ಜೊತೆಗೆ ಸಹಾಯವಾಣಿ ಲಭ್ಯ

Hindu neighbor gifts plot of land

Hindu neighbour gifts land to Muslim journalist

Second opinion: ಇನ್ಮುಂದೆ ಯಾರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೋ ಇಲ್ಲವೋ ಎನ್ನುವುದರ ಬಗ್ಗೆ 2ನೇ ಅಭಿಪ್ರಾಯ (Second opinion) ಪಡೆಯಲು ಉಚಿತವಾಗಿ ತಜ್ಞವೈದ್ಯರಿಂದ ಮಾಹಿತಿ ನೀಡಲು ಆರೋಗ್ಯ ಇಲಾಖೆ ಸಹಾಯವಾಣಿ ಪ್ರಾರಂಭಿಸಿದ್ದು, ಅಂತೆಯೇ ಮಂಗಳವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಚಾಲನೆ ನೀಡಿದ್ದಾರೆ.

ಆರೋಗ್ಯ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ವತಿಯಿಂದ 18004258330 ಸಹಾಯವಾಣಿ ತೆರೆದಿದ್ದು, 24/7 ಗಂಟೆ ಕಾರ್ಯ ನಿರ್ವಹಿಸಲಿದೆ. ಈ ದೂರವಾಣಿ ಸಂಖ್ಯೆ ಗೆ ಕರೆ ಮಾಡಿ ಸರ್ಕಾರಿ, ಖಾಸಗಿ ವೈದ್ಯರು ಶಸ್ತ್ರಚಿಕಿತ್ಸೆಗೆ ಮಾಡಿರುವ ಶಿಫಾರಸ್ಸಿನ ಬಗ್ಗೆ ತಿಳಿಸಿ, ದಾಖಲೆ ಸಲ್ಲಿಸಿ ತಜ್ಞ ವೈದ್ಯರಿಂದ ಅಭಿಪ್ರಾಯ ಪಡೆಯಬಹುದು.

ಮುಖ್ಯವಾಗಿ ಪ್ರಾಥಮಿಕ ಹಂತದಲ್ಲಿ ಮೊಣಕಾಲು ಕೀಲು ಬದಲಿ, ಸೊಂಟದ ಕೀಲು ಬದಲಿ (ಟಿಕೆಆರ್ / ಟಿಎಚ್‌ಆರ್) ಚಿಕಿತ್ಸಾ ವಿಧಾನಗಳಿಗೆ ಎರಡನೇ ವೈದ್ಯಕೀಯ ಅಭಿಪ್ರಾಯ ಲಭ್ಯವಿದೆ. ಈ ಕುರಿತು ಸಂಜಯ್ ಗಾಂಧಿ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ತಜ್ಞ ವೈದ್ಯರು ಜನರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಅಂದರೆ ಟಿಕೆಆರ್/ ಟಿಎಚ್ ಆರ್ ಸರ್ಜರಿ ಹೆಚ್ಚಾಗಿದೆ. ಈ ಸರ್ಜರಿ ತಕ್ಷಣಕ್ಕೆ ಅನಿವಾರ್ಯವೆ? ಒಂದೆರಡು ವರ್ಷ ಬಿಟ್ಟು ಮಾಡಿಸಿಕೊಳ್ಳಬಹುದೆ ಎಂಬ ಸಲಹೆಯನ್ನೂ ತಜ್ಞರು ನೀಡಲಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.