Home Food ಮಹಿಳೆಯರೇ ನಿಮಗೆ ರುಚಿಕರವಾದ ಚಹಾ ಮಾಡಲು ಬರುತ್ತದೆಯೇ ? ಹಾಗಾದರೆ ಒಂದು ಲಕ್ಷ ರೂಪಾಯಿ ಬಹುಮಾನ...

ಮಹಿಳೆಯರೇ ನಿಮಗೆ ರುಚಿಕರವಾದ ಚಹಾ ಮಾಡಲು ಬರುತ್ತದೆಯೇ ? ಹಾಗಾದರೆ ಒಂದು ಲಕ್ಷ ರೂಪಾಯಿ ಬಹುಮಾನ ನಿಮಗಾಗಿ ಕಾದಿದೆ!!!

Hindu neighbor gifts plot of land

Hindu neighbour gifts land to Muslim journalist

ಚಹಾ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ? ಅದರಲ್ಲೂ ಚಹಾ ದಲ್ಲಿ ಎಷ್ಟೊಂದು ಬಗೆಯ ಚಹಾ ಇದೆ. ಅಲ್ವಾ ? ಒಂದೊಂದು ರಾಜ್ಯದ ಜನರಿಗೆ ಒಂದೊಂದು ರೀತಿಯ ಚಹಾ ಇಷ್ಟ. ಹಾಗೆಯೇ ದೇಶಕ್ಕೆ‌ ಹೋಲಿಸಿದರೂ ಕೂಡಾ. ಎಲ್ಲಾ ಕಡೆ ಒಂದೊಂದು ರೀತಿಯ ರುಚಿಕರವಾದ ಚಹಾ ಕುಡಿಯಲು ಸಿಗುತ್ತದೆ.

ಹಾಗಾದರೆ ಬನ್ನಿ ಈಗ ಚಹಾ ಮಾಡುವುದರ ಬಗ್ಗೆ ಮಾತನಾಡೋಣ. ನಿಮಗೆ ಚಹಾ ಮಾಡಲು ಬರುತ್ತದೆಯೇ ? ಹಾಗಾದರೆ ನಿಮಗೆ ಒಂದು ಲಕ್ಷ ಗೆಲ್ಲುವ ಅವಕಾಶ ಇದೆ. ಹೌದು ಇಂತಹ ಒಂದು ಅವಕಾಶವನ್ನು ಹೈದರಾಬಾದ್ ಟೀ ಕಂಪನಿಯೊಂದು ನೀಡಿದೆ. ಇದೇ ಮೊದಲ ಬಾರಿಗೆ ಟೀ ಚಾಂಪಿಯನ್ ಶಿಪ್ ಆಯೋಜನೆ ಮಾಡಲು ಸಿದ್ಧವಾಗಿದೆ.

ಈ ಸ್ಪರ್ಧೆ ಕೇವಲ ಮಹಿಳೆಯರಿಗೆ ಮಾತ್ರ. ಮಾರ್ಚ್ 06 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಹಾಗಾಗಿ ಅವತ್ತು ಈ ಚಾಂಪಿಯನ್ ಶಿಪ್ ಆಯೋಜನೆ ಮಾಡಲಾಗಿದೆ. ಮೊದಲ ಬಹುಮಾನ ಒಂದು ಲಕ್ಷ ಎರಡು ಮತ್ತು ಮೂರನೇ ಬಹುಮಾನ ಕ್ರಮವಾಗಿ 50000 ಮತ್ತು 25000 ರೂಪಾಯಿ ದೊರೆಯಲಿದೆ.

ಹೈದರಾಬಾದ್ ನ ಹೈಟೆಕ್ ಸಿಟಿಯ ನೋವಾಟೆಲ್ ಹೋಟೆಲ್ ನಲ್ಲಿ ಈ ಸ್ಪರ್ಧೆ ನಡೆಯಲಿದೆ. ಮಾರ್ಚ್ 06 ರ ಮಧ್ಯಾಹ್ನ 3.00 ಗಂಟೆಗೆ ಸ್ಪರ್ಧೆ ನಡೆಯಲಿದೆ.

ಯಾರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಷ್ಟವಿದೆಯೋ ಅವರು ತಾವು ತಯಾರಿಸುವ ಚಹಾದ ಬಗ್ಗೆ ಒಂದು ನಿಮಿಷದ ವೀಡಿಯೋ ವನ್ನು ವಾಟ್ಸಪ್ ನಂಬರ್ 8340974747 ನಂಬರ್ ಗೆ ಕಳುಹಿಸಿ. ಇಲ್ಲಿ ನೂರು ಮಂದಿಯನ್ನು ಆಯೋಜಕರು ಆಯ್ಕೆ ಮಾಡುತ್ತಾರೆ. ಆಯ್ಕೆಯಾದವರನ್ನು ಮಾರ್ಚ್ 06 ರಂದು ನೊವಾಟೆಲ್ ಹೋಟೆಲ್ ಗೆ ಆಗಮಿಸಿ ಚಹಾವನ್ನು ಮಾಡಬೇಕು. ಅಲ್ಲಿರುವ ಅತಿಥಿಗಳಲ್ಲಿ ಕೆಲವರು ಈ ಚಹಾದ ರುಚಿ ನೋಡುತ್ತಾರೆ. ನಂತರ ಕೊನೆಗೆ ಯಾರು ವಿನ್ ಆಗುತ್ತಾರೆ ಎಂಬುದನ್ನು ಘೋಷಣೆ ಮಾಡಿ ಪ್ರೈಸ್ ಮನಿ ನೀಡಲಾಗುವುದು.