Home Food Side Effects Of Papayas: ಇಂಥವರು ಯಾವುದೇ ಕಾರಣಕ್ಕೂ ಪಪ್ಪಾಯಿ ಹಣ್ಣನ್ನು ತಿನ್ನಲೇ ಬಾರದು...

Side Effects Of Papayas: ಇಂಥವರು ಯಾವುದೇ ಕಾರಣಕ್ಕೂ ಪಪ್ಪಾಯಿ ಹಣ್ಣನ್ನು ತಿನ್ನಲೇ ಬಾರದು – ತಿಂದ್ರೆ ಅಪಾಯವೇ ಹೆಚ್ಚು !!

Side Effects Of Papayas

Hindu neighbor gifts plot of land

Hindu neighbour gifts land to Muslim journalist

Side Effects Of Papayas: ಎಲ್ಲಾ ಋತುವಿನಲ್ಲೂ ಎಲ್ಲಾ ಕಡೆ ಸುಲಭವಾಗಿ ಸಿಗುವ ಹಣ್ಣು ಎಂದರೆ ಅದು ಪಪ್ಪಾಯಿ ಹಣ್ಣು. ಪಪ್ಪಾಯಿ ಕಣ್ಣುಗಳಿಗೆ ಒಳ್ಳೆಯದು, ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ, ಮುಖದ ಕಾಂತಿಗೆ ಇದರ ಪ್ರಭಾವ ತುಂಬಾ ಆರೋಗ್ಯಕರವಾಗಿರುತ್ತದೆ. ಆದರೆ ಆರೋಗ್ಯ ತಜ್ಞರು ಇದರ ನಿಯಮಿತ ಸೇವನೆಯನ್ನು ಶಿಫಾರಸು ಮಾಡುತ್ತಾರೆ, ಯಾಕೆಂದ್ರೆ ಅತಿಯಾಗಿ ಸೇವಿಸಿದರೆ ಪ್ರಯೋಜನಕ್ಕೆ ಬದಲಾಗಿ ಹಾನಿಯನ್ನುಂಟುಮಾಡುತ್ತದೆ (Side Effects Of Papayas). ಅಷ್ಟೇ ಅಲ್ಲದೆ, ಕೆಲವು ರೋಗಗಳಿಂದ ಬಳಲುತ್ತಿರುವ ಜನರು ಈ ಹಣ್ಣಿನಿಂದ ದೂರವಿರಬೇಕು.

ಹೌದು, ಪಪ್ಪಾಯಿಯಲ್ಲಿ ಫೈಬರ್ ಮತ್ತು ವಿಟಮಿನ್ ಸಿ ಯಂತಹ ಸಮೃದ್ಧ ಪೋಷಕಾಂಶಗಳು ಇದ್ದರೂ, ಈ ಹಣ್ಣು ಇನ್ನೂ ಅನೇಕ ಜನರಿಗೆ ಹಾನಿಕಾರಕವಾಗಿದೆ. ಪಪ್ಪಾಯಿಯು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ ನಿಜ. ಆದರೆ ಈ ಪೋಷಕಾಂಶವು ಕ್ಯಾಲ್ಸಿಯಂನೊಂದಿಗೆ ಬೆರೆತರೆ ಅದು ಸಮಸ್ಯೆಗಳನ್ನು ಉಂಟುಮಾಡಬಹುದು. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಈ ಹಣ್ಣನ್ನು ತಿನ್ನಬಾರದು.

ಇನ್ನು ನೀವು ರಕ್ತ ತೆಳುಗೊಳಿಸುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಹುದುಗಿಸಿದ ಪಪ್ಪಾಯಿಯು ನಿಮಗೆ ಹಾನಿಕಾರಕ. ಸಾಮಾನ್ಯವಾಗಿ ಹೃದ್ರೋಗದಿಂದ ಬಳಲುತ್ತಿರುವವರು ಪಪ್ಪಾಯಿ ಅತಿಯಾಗಿ ಸೇವಿಸಬಾರದು.

ಜೊತೆಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ಪಪ್ಪಾಯಿಯಿಂದ ದೂರವಿರಿ. ಈ ಹಣ್ಣಿನಲ್ಲಿರುವ ಕಿಣ್ವವು ಅಸ್ತಮಾ ರೋಗಿಗಳಿಗೆ ಹಾನಿಕಾರಕವಾಗಿದೆ.

ಇನ್ನು ಅಲರ್ಜಿಯಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಪಪ್ಪಾಯಿಯನ್ನು ತಿನ್ನಬೇಡಿ, ಏಕೆಂದರೆ ಅದರಲ್ಲಿರುವ ಪಪೈನ್ ಅಂಶವು ಸಮಸ್ಯೆಯನ್ನು ಹೆಚ್ಚಿಸಬಹುದು ಮತ್ತು ನಿಮಗೆ ಚರ್ಮದಲ್ಲಿ ತುರಿಕೆ ಅಥವಾ ಸುಡುವ ಸಂವೇದನೆ ಉಂಟು ಮಾಡುತ್ತದೆ.

ಅನೇಕ ಆರೋಗ್ಯ ತಜ್ಞರ ಪ್ರಕಾರ, ಗರ್ಭಿಣಿಯರು ಪಪ್ಪಾಯಿಯನ್ನು ತಿನ್ನಬಾರದು ಏಕೆಂದರೆ ಅದು ಅವರಿಗೆ ಹಾನಿಕಾರಕವಾಗಿದೆ.
ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ಬಾಣಂತನದ ಸಮಯದಲ್ಲಿ ಸ್ವಲ್ಪ ದಿನಗಳ ಕಾಲ ಸೇವಿಸದೇ ಇರುವುದು ಒಳ್ಳೆಯದು. ಪಪ್ಪಾಯಿಯಲ್ಲಿ ಪಪ್ಪಾಯಿನ್ ಎಂಬ ಅಂಶವಿದ್ದು, ಇದು ಗರ್ಭಿಣಿ ಮಹಿಳೆಯರ ದೇಹದಲ್ಲಿ ಬೆಳವಣಿಗೆ ಆಗುತ್ತಿರುವ ಭ್ರೂಣದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಮಗು ಹುಟ್ಟಿದ ಮೇಲೂ ಕೂಡ ಜನನದ ನ್ಯೂನ್ಯತೆಗಳು ಮಗುವಿನಲ್ಲಿ ಕಂಡು ಬರುತ್ತವೆ.

 

ಇದನ್ನು ಓದಿ: 7th Pay Commission: 7ನೇ ವೇತನ ಆಯೋಗದ ನಿರೀಕ್ಷೆಯಲ್ಲಿದ್ದ ನೌಕರರಿಗೆ ಶಾಕ್- ಹೊರಬಿತ್ತು ಸರ್ಕಾರದಿಂದ ಮಹತ್ವದ ಆದೇಶ !!