Home Food ಅಜ್ಜಿಯ ಕೈಯಲ್ಲಿ ಪಿಜ್ಜಾ !! | ಮೊದಲ ಬಾರಿ ಪಿಜ್ಜಾ ಸವಿದ ಆಕೆಯ ರಿಯಾಕ್ಷನ್ ಗೆ...

ಅಜ್ಜಿಯ ಕೈಯಲ್ಲಿ ಪಿಜ್ಜಾ !! | ಮೊದಲ ಬಾರಿ ಪಿಜ್ಜಾ ಸವಿದ ಆಕೆಯ ರಿಯಾಕ್ಷನ್ ಗೆ ಫುಲ್ ಫಿದಾ ಆದ ನೆಟ್ಟಿಗರು!!

Hindu neighbor gifts plot of land

Hindu neighbour gifts land to Muslim journalist

ಪಿಜ್ಜಾ ಅಂದ್ರೆ ಈಗಿನ ಯುವಪೀಳಿಗೆಗೆ ತುಂಬಾ ಇಷ್ಟ. ನಗರಗಳಲ್ಲಿ ತಿಂಡಿ ಆರ್ಡರ್ ಮಾಡೋಣ ಎಂದಾಗ ಮೊದಲಿಗೆ ನೆನಪಿಗೆ ಬರುವುದೇ ಪಿಜ್ಜಾ. ಫ್ರೆಂಡ್ಸ್​ಗಳೆಲ್ಲಾ ಒಟ್ಟಿಗೆ ಸೇರಿ ಪಾರ್ಟಿ ಮಾಡೋಣ ಅಂದಾಗಲೂ ಮೊದಲು ನೆನಪಾಗೋದು ಪಿಜ್ಜಾ. ಅಷ್ಟು ಅಚ್ಚು ಮೆಚ್ಚಾಗಿಬಿಟ್ಟಿದೆ ಪಿಜ್ಜಾ. ಇದನ್ನು ಸಿಕ್ಕಾಪಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದರೂ ಅದರ ಹೆಸರು ಕೇಳಿದರೆ ಬಾಯಲ್ಲಿ ನೀರೂರಿಸುವವರೇ ಜಾಸ್ತಿ.

ಹೀಗಿರುವಾಗ ಈಗ ಇದೇ ಪಿಜ್ಜಾದ ವೀಡಿಯೋವೊಂದು ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಅಜ್ಜಿ ಪಿಜ್ಜಾ ತಿನ್ನುತ್ತಿದ್ದಾಳೆ. ಪಿಜ್ಜಾವನ್ನು ಕೈಗೆತ್ತಿಕೊಂಡು ಬಾಯಿಗೆ ಹಾಕಿದ ಬಳಿಕ ಅಜ್ಜಿಯ ರಿಯಾಕ್ಷನ್ ನೋಡಲು ಭಾರಿ ಮಜವಾಗಿದೆ.

ವೀಡಿಯೋದಲ್ಲಿ ಗಮನಿಸುವಂತೆ ಅಜ್ಜಿ ಮೊದಲ ಬಾರಿಗೆ ಪಿಜ್ಜಾ ತಿನ್ನುತ್ತಿರುವುದನ್ನು ನೋಡಬಹುದು. ಅವರ ಮೊಮ್ಮಗ ಅಜ್ಜಿಯ ರಿಯಾಕ್ಷನ್ಅನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೊ ಹಂಚಿಕೊಂಡಿದ್ದು ಇದೀಗ ವಿಡಿಯೊ ಫುಲ್ ವೈರಲ್ ಆಗಿದ್ದು, ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಪಿಜ್ಜಾ ತಿಂದು ಅಜ್ಜಿಯ ನೀಡಿದ ರಿಯಾಕ್ಷನ್ ಮಜವಾಗಿದೆ ಎಂದು ಪ್ರತಿಕ್ರಿಯಿಸುವ ಮೂಲಕ ನೆಟ್ಟಿಗರು ಅನಿಸಿಕೆ ಹಂಚಿಕೊಂಡಿದ್ದಾರೆ.

ಈ ತಮಾಷೆಯ ವೀಡಿಯೊ ಹಲವು ಮಂದಿಯ ಮನ ಗೆದ್ದಿದೆ. ಪಿಜ್ಜಾ ತಿಂದ ಬಳಿಕ ಅಜ್ಜಿ ಕೊಟ್ಟ ರಿಯಾಕ್ಷನ್​ ಮಾತ್ರ ಸಖತ್​ ವೈರಲ್​ ಆಗಿದೆ.