Home Food Hariyali Egg Fry : ನೀವು ಮೊಟ್ಟೆ ಪ್ರಿಯರೇ ? ಹಾಗಾದರೆ ಒಮ್ಮೆ ಟ್ರೈ ಮಾಡಿ...

Hariyali Egg Fry : ನೀವು ಮೊಟ್ಟೆ ಪ್ರಿಯರೇ ? ಹಾಗಾದರೆ ಒಮ್ಮೆ ಟ್ರೈ ಮಾಡಿ ರುಚಿಯಾದ ಹರಿಯಾಲಿ ಎಗ್ ಕರಿ | ಮಾಡೋ ಸರಳ ವಿಧಾನ ಇಲ್ಲಿದೆ!!

Hindu neighbor gifts plot of land

Hindu neighbour gifts land to Muslim journalist

ಮೊಟ್ಟೆಗಳು ನಮ್ಮಲ್ಲಿ ಅನೇಕರಿಗೆ ಅಚ್ಚುಮೆಚ್ಚಿನ ಆಹಾರ. ಶತಶತಮಾನಗಳಿಂದಲೂ ಇದು ಆಹಾರದ ಒಂದು ಭಾಗವಾಗಿದೆ. ಹೆಚ್ಚಾಗಿ ಮೊಟ್ಟೆ ಪ್ರಿಯರು ಉಪಹಾರದ ನಂತರ, ಮಧ್ಯಾಹ್ನ ಅಥವಾ ರಾತ್ರಿಯ ಊಟದ ಸಮಯದಲ್ಲಿ ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್ ಹೀಗೆ ಯಾವುದಾದರೂ ಒಂದು ರೀತಿಯಲ್ಲಿ ತಯಾರಿಸಿ ಸೇವಿಸುತ್ತಾರೆ. ಅಂತಹ ಮೊಟ್ಟೆ ಪ್ರಿಯರಿಗೆ ಇಲ್ಲಿದೆ ಒಂದು ಅದ್ಭುತವಾದ ರೆಸಿಪಿ. ಇಂದು ನಾವು ರುಚಿಕರವಾದ ಹರಿಯಾಲಿ ಎಗ್ ಕರಿ ರೆಸಿಪಿಯನ್ನು ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಬೇಕಾಗುವ ಸಾಮಾಗ್ರಿಗಳು: ಬೇಯಿಸಿದ ಮೊಟ್ಟೆ – 4,ಅರ್ಧ ಟೀಸ್ಪೂನ್ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ 1 ಕಪ್, 1 ಇಂಚು ಬೆಳ್ಳುಳ್ಳಿ, 2 ಹಸಿರು ಮೆಣಸಿನಕಾಯಿ, 2 ಹೆಚ್ಚಿದ ಈರುಳ್ಳಿ, 1 ಹೆಚ್ಚಿದ ಟೊಮೆಟೊ, ಅರ್ಧ ಟೀಸ್ಪೂನ್ ಜೀರಿಗೆ, 1 ಟೀಸ್ಪೂನ್ ಗರಂ ಮಸಾಲೆ, ಅಗತ್ಯವಿರುವಷ್ಟು ಎಣ್ಣೆ ಮತ್ತು ನೀರು.

ಮಾಡುವ ವಿಧಾನ: ಮೊದಲಿಗೆ ಕೊತ್ತಂಬರಿ ಸೊಪ್ಪನ್ನು ತೊಳೆದು ಮಿಕ್ಸಿಜಾರ್‌ಗೆ ಹಾಕಿ, ಅದಕ್ಕೆ ಶುಂಠಿ,ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ನುಣ್ಣಗೆ ಪೇಸ್ಟ್ ಆಗುವಂತೆ ರುಬ್ಬಿಕೊಳ್ಳಿ. ಈಗ ಒಂದು ಬಾಣಲೆಗೆ 2 ಟೀಸ್ಪೂನ್ ಎಣ್ಣೆ ಹಾಕಿ, ಇದು ಬಿಸಿಯಾದ ನಂತರ, ಬೇಯಿಸಿದ ಮೊಟ್ಟೆಗಳನ್ನು ಹಾಕಿ ಫೈ ಮಾಡಿಕೊಂಡು ಪಕ್ಕಕ್ಕೆ ಇರಿಸಿ. ಈಗ ಅದೇ ಎಣ್ಣೆಯಲ್ಲಿ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಅದಕ್ಕೆ ಉಪ್ಪು, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ ಬಳಿಕ ಟೊಮೆಟೊ ಸೇರಿಸಿ, ಮೃದುವಾಗುವವರೆಗೆ ಬೇಯಿಸಿ. ಈಗ ಹರಿಯಾಲಿ ಮೊಟ್ಟೆ ಕರಿ ಸವಿಯಲು ಸಿದ್ಧ. ಚಪಾತಿ, ಅನ್ನದೊಂದಿಗೆ ಇದರ ಕಾಂಬಿನೇಷನ್ ಪರ್ಫೆಕ್ಟ್ ಆಗಿದ್ದು, ಒಮ್ಮೆ ಇದರ ರುಚಿ ನೋಡಿದರೆ ಮತ್ತೆ ಮತ್ತೆ ಟ್ರೈ ಮಾಡುತ್ತೀರಿ.

ಮೊಟ್ಟೆಯಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಎ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಇದರಿಂದ ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ಲುಟೀನ್‌ನಲ್ಲಿ ಸಮೃದ್ಧವಾಗಿದೆ, ಇದು ಮೆದುಳು ಮತ್ತು ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್‌ ಇರುವುದರಿಂದ ತೂಕ ಇಳಿಕೆಗೆ ಸಹಾಯಕವಾಗಿವೆ.