Home Food Antioxidants : ಕೋಳಿ, ಹಂದಿ, ದನದ ಮಾಂಸದಲ್ಲಿ ಆಂಟಿಆಕ್ಸಿಡೆಂಟ್‌ ?! ಸಂಶೋದನೆಯಿಂದ ಏನು ಪತ್ತೆಯಾಯ್ತು?

Antioxidants : ಕೋಳಿ, ಹಂದಿ, ದನದ ಮಾಂಸದಲ್ಲಿ ಆಂಟಿಆಕ್ಸಿಡೆಂಟ್‌ ?! ಸಂಶೋದನೆಯಿಂದ ಏನು ಪತ್ತೆಯಾಯ್ತು?

Hindu neighbor gifts plot of land

Hindu neighbour gifts land to Muslim journalist

Reaserch Report: ಮಾಂಸ ಪ್ರಿಯರು ಈ ಸುದ್ದಿ ಓದಲೇ ಬೇಕು. ಯಾಕೆ ಅಂತೀರಾ? ನೀವೆಲ್ಲ ಸೇವಿಸುವ ಕೋಳಿ, ಹಂದಿ ಮಾಂಸದಿಂದ ದೇಹಕ್ಕೆ ಆಗುವ ಪ್ರಯೋಜವೇನು? ಎಂಬ ಕುರಿತು ಜಪಾನ್ ವಿಶ್ವವಿದ್ಯಾನಿಲಯದ ಸಂಶೋಧನಾ ತಂಡ ಸಂಶೋಧನೆ ಕೈಗೊಂಡು ಈ ಬಗ್ಗೆ ಮಾಹಿತಿ ನೀಡಿದೆ.

ಜಪಾನ್‌ನ ಒಸಾಕಾ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯದ ಪ್ರೊ. ಹಿದೇಶಿ ಇಹಾರಾ ನೇತೃತ್ವದಲ್ಲಿ ನಡೆದ ಸಂಶೋಧನೆಯ ಪ್ರಕಾರ ಅನೇಕ ವಿವರಗಳು ದೊರೆತಿವೆ ಎನ್ನಲಾಗಿದೆ. ಜಪಾನ್ ಸಂಶೋಧಕರು ಕೋಳಿ(Chiken)ಹಂದಿ ಮಾಂಸ (Pork) ಹಾಗೂ ದನದ ಮಾಂಸದಲ್ಲಿ(Beef) ಹೊಸ ಬಗೆಯ ಆಂಟಿಆಕ್ಸಿಡೆಂಟ್‌ಗಳನ್ನು (ಉತ್ಕರ್ಷಣಗಳು) ಪತ್ತೆ ಮಾಡಿದ್ದಾರೆ ಎನ್ನಲಾಗಿದೆ.

ಜಪಾನ್ ಸಂಶೋಧಕರು ಪತ್ತೆ ಮಾಡಿರುವ ಸಂಶೋಧನೆಗಳಲ್ಲಿ ಕೋಳಿ, ದನ ಹಾಗೂ ಹಂದಿ ಮಾಂಸದಲ್ಲಿ 2-ಆಕ್ಸೋ-ಐಡಿಪಿಗಳು ಕಂಡುಬಂದಿವೆ. ಇದು ಸಹಜವಾಗಿ ಕಂಡುಬರುವ ಐಡಿಪಿಗಳಿಗಿಂತ ಹೆಚ್ಚು ಆಮ್ಲಜನಕದ ಪ್ರಮಾಣವನ್ನು ಒಳಗೊಂಡಿದೆ ಎನ್ನಲಾಗಿದೆ.ಹೊಸ ಸಂಶೋಧನೆಯ ಅನುಸಾರ, ಔಷಧ ವಿಜ್ಞಾನ ಹಾಗೂ ಕೃಷಿ ಕ್ಷೇತ್ರದಲ್ಲಿನ ರಾಸಾಯನಿಕ ವಿಭಾಗದಲ್ಲಿ ಪ್ರಗತಿ ಸಾಧಿಸಲು ನೆರವಾಗುವ ಸಾಧ್ಯತೆ ದಟ್ಟವಾಗಿದೆ.

ಈ ನವೀನ ಬಗೆಯ ಆಂಟಿಆಕ್ಸಿಡೆಂಟ್‌ಗಳು ಬುದ್ಧಿಮಾಂದ್ಯತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವಾಗಿ, ಈ ಸಮಸ್ಯೆಯಿಂದ ಪಾರಾಗಲು ಸಹಕಾರಿಯಾಗಿದೆ. ಇದಲ್ಲದೆ, ಮನುಷ್ಯನ ಆಯಾಸವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಸಾಮಾನ್ಯವಾಗಿ ಮಾಂಸ(Meat) ಮತ್ತು ಮೀನುಗಳಲ್ಲಿ(Fish) ಆಯಾಸ ನಿಯಂತ್ರಿಸುವ ಆಕ್ಸೋ-ಐಡಿಪಿಗಳು (ಆಂಟಿಆಕ್ಸಿಡೆಂಟ್‌ಗಳು) ಹೆಚ್ಚು ಕಂಡುಬರುತ್ತವೆ.