Home Fashion Ivana knoll: ಫಿಫಾ ವರ್ಲ್ಡ್ ಕಪ್ ನಲ್ಲಿ ಪಡ್ಡೆ ಹುಡುಗರ ಕಣ್ಣಿಗೆ ಹಬ್ಬ ತರಿಸಿ,...

Ivana knoll: ಫಿಫಾ ವರ್ಲ್ಡ್ ಕಪ್ ನಲ್ಲಿ ಪಡ್ಡೆ ಹುಡುಗರ ಕಣ್ಣಿಗೆ ಹಬ್ಬ ತರಿಸಿ, ವರ್ಲ್ಡ್ ಫೇಮಸ್ ಆಗಿದ್ದ ಮಾಡೆಲ್‌ ಮತ್ತೆ ಪ್ರತ್ಯಕ್ಷ !!

Ivana knoll
Image source- Instagram

Hindu neighbor gifts plot of land

Hindu neighbour gifts land to Muslim journalist

Ivana knoll: ಕಳೆದ ವರ್ಷ ಕತಾರ್(Kataar) ನಲ್ಲಿ ನಡೆದ ಫಿಫಾ ವಿಶ್ವಕಪ್(Fifa world cup)ಫುಟ್ಬಾಲ್ ಟೂರ್ನಿಯನ್ನು ಯಾರಾದರೂ ಮರೆಯಲು ಸಾಧ್ಯ ಉಂಟಾ ಹೇಳಿ. ಹಲವು ವರ್ಷಗಳ ಬಳಿಕ ರೋಚಕ ಗೆಲುವು ಸಾಧಿಸಿದ್ದ ಅರ್ಜೆಂಟೈನ(Argentine) ಇಡೀ ವಿಶ್ವದ ಮನವನ್ನೇ ಗೆದ್ದುಬಿಟ್ಟಿತು. ಆದರೆ ಈ ಟೂರ್ನಿಯಲ್ಲಿ ಇದು ಮಾತ್ರ ಗಮನ ಸೆಳೆದದ್ದಲ್ಲ, ಬದಲಿಗೆ ಒಬ್ಬಳು ಮಾಡೆಲ್ ಆಗಾಗ ಕಾಣಿಸಿಕೊಂಡು, ವೀಕ್ಷಕರ, ಪ್ರೇಕ್ಷಕರ ಹಾಗೂ ಪಡ್ಡೆಹುಡುಗರ ನಿದ್ದೆಯನ್ನೇ ಕದ್ದು ಭಾರೀ ವೈರಲ್ ಆಗಿದ್ಲು. ಕೆಲವೇ ಸಮಯದಲ್ಲಿ ಆಕೆ ಕಾಣೆಯಾಗಿಬಿಟ್ಲು. ಆದರೀಗ ಈ ಸುರಸುಂದರಾಗಿ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. ಹಾಗಿದ್ರೆ ಯಾರೀಕೆ? ಎಲ್ಲಿಯವಳು? ಎಲ್ಲದಕ್ಕೂ ಇಲ್ಲಿದೆ ನೋಡಿ ಉತ್ತರ.

ಹೌದು, 2022ರ ಕತಾರ್‌ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಒಬ್ಬಳು ಇವಾನಾ ನೊಲ್(Ivana knoll) ಎನ್ನುವ ಮಾಡೆಲ್‌ ತಮ್ಮ ಕ್ರೋವೆಷಿಯಾ ತಂಡವನ್ನು ಬೆಂಬಲಿಸಿ ವ್ಯಾಪಕ ಗಮನ ಸೆಳೆದಿದ್ದರು. ಬರೀ ಗಮನ ಸೆಳೆಯೋದಲ್ಲ, ಈಕೆಯ ಮೈಮಾಟಕ್ಕೆ ಸೋಲದವರೇ ಇಲ್ಲ. ಲಕ್ಷಾಂತರ ಪಡ್ಡೆಹುಡುಗರ ನಿದ್ದೆಯನ್ನೂ ಕದ್ದಿದ್ಲು. ಸದ್ಯ ಆ ಮಾಡೆಲ್ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾಳೆ.

ಇವಾನಾ ನೊಲ್ ಅವರ ಲುಕ್‌ನಿಂದಲೇ ಆಕೆ, ‘ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಸಕ್ಕತ್ ಹಾಟ್ ಫ್ಯಾನ್‌’ ಎನ್ನುವ ಮಟ್ಟಕ್ಕೆ ವರ್ಡ್ ಫೇಮಸ್ ಆಗಿದ್ದಳು. ಅಂದಹಾಗೆ ನೆದರ್‌ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ ಫುಟ್ಬಾಲ್ ತಂಡವು ಕ್ರೊವೇಷಿಯಾವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸುವ ಮೂಲಕ ಗೆಲುವಿನ ನಗೆ ಬೀರಿದ್ದು, ಇವಾನಾ ನೊಲ್ ಅವರಿಗೆ ಹಾರ್ಟ್‌ ಬ್ರೇಕ್‌ ಆಗುವಂತೆ ಮಾಡಿತಂತೆ.

ಇನ್ನು ಟೂರ್ನಿ ಮೂಲಕ ವರ್ಡ್ ಫೇಮಸ್(World Famous) ಆದ ಬಳಿಕ ಬಳಿಕ ಕಳೆದ ಡಿಸೆಂಬರ್‌ನಲ್ಲಿ ಮಾತನಾಡಿದ್ದ ಇವಾನಾ, “ನಾನು ಎಲ್ಲರ ಜತೆ ಎಂಜಾಯ್ ಮಾಡುತ್ತೇನೆ. ನಾನು ಚೆನ್ನಾಗಿ ಕಾಣುತ್ತೇನೆ ಎನ್ನುವ ಕಾರಣಕ್ಕಾಗಿಯೇ ಜನರು ನನ್ನನ್ನು ಇಷ್ಟಪಡುತ್ತಿದ್ದಾರೆ. ನಾನು ಎಲ್ಲರ ಜತೆ ಬೆರೆಯಲು ಸಿದ್ದನಿದ್ದೇನೆ. ನನ್ನ ಉದ್ದೇಶ ಎಲ್ಲರ ಮುಖದಲ್ಲೂ ನಗುವಿನ ಮಂದಹಾಸ ಮೂಡುವಂತೆ ಮಾಡುವುದಾಗಿದೆಎಂದು ಹೇಳಿದ್ದರು.

ಅಂದಹಾಗೆ ಈಕೆ ಕಳೆದ ಭಾನುವಾರ ನ್ಯಾಷನಲ್‌ ಲೀಗ್ ಫೈನಲ್‌ ಟೂರ್ನಿಯಲ್ಲಿ ಸ್ಪೇನ್ ಹಾಗೂ ಕ್ರೊವೇಷಿಯಾ ನಡುವಿನ ಫುಟ್ಬಾಲ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಮೈದಾನಕ್ಕೆ ಬಂದು ಮತ್ತೆ ಗಮನ ಸೆಳೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಇವಾನಾ ನೊಲ್, ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ.

 

 

ಇದನ್ನು ಓದಿ: Satish jarakiholi: ಕೇಂದ್ರ ಸರ್ಕಾರ ರಾಜ್ಯದ ಸರ್ವರ್ ಹ್ಯಾಕ್ ಮಾಡಿದೆ: ಸತೀಶ್ ಜಾರಕಿಹೊಳಿ ಗಂಭೀರ ಆರೋಪ