Home Entertainment ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ರ ಅರವಿಂದ್ ಕೆ ಪಿ?

ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ರ ಅರವಿಂದ್ ಕೆ ಪಿ?

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಸೀಸನ್ 9 ಕೊನೆಯ ದಿಗಳಿಗೆ ಅಂದ್ರೆ, ಗ್ರಾಂಡ್ ಫಿನಾಲೆಗೆ ಇನ್ನೂ 2 ದಿನಗಳು ಅಷ್ಟೇ ಬಾಕಿ ಇರೋದು. ಅದರ ಮಧ್ಯೆ ನಿನ್ನೆಯಷ್ಟೇ ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆಗಿ ಬಿಟ್ರು.

ಇದೀಗ ದೊಡ್ಡ ಮನೆಯಲ್ಲಿ ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದಿವ್ಯ ಉರುಡುಗ, ರಾಕೇಶ್ ಅಡಿಗ ಮತ್ತು ದೀಪಿಕಾ ದಾಸ್ ಇಷ್ಟು ಮಂದಿ ಟಾಪ್ 5 ಬಂದಿದ್ದಾರೆ. ಮನೆಯವರಿಗೆಲ್ಲಾ ಖುಷಿ ಮತ್ತು ಸಂತೋಷವನ್ನು ಹಂಚಲು ಬಿಗ್ ಬಾಸ್ ಒಂದು ಹೊಸ ಪ್ರಯತ್ನ ಮಾಡಿದ್ದಾರೆ.

ರೂಪೇಶ್ ಶೆಟ್ಟಿಗೆ ಮಂಗಳೂರಿನ ಹುಲಿ ಕುಣಿತ ವೇಷದಲ್ಲಿ ಒಂದಷ್ಟು ಮಂದಿ ಬಂದು ನೃತ್ಯ ಮಾಡಿ ಮನರಂಜಿಸಿದ್ದಾರೆ. ರೂಪ ಶೆಟ್ಟಿ ಅಂತೂ ಸಕ್ಕತ್ ಖುಷಿ ಪಟ್ಟೇ ಬಿಟ್ರು.

ಇನ್ನು ದಿವ್ಯಾಳಿಗೆ ಸಖತ್ ಖುಷಿಯಾಗಿದೆ. ಯಾಕಂದ್ರೆ ಆಕೆಯನ್ನು ಖುಷಿ ಪಡಿಸಲೆಂದು ಅರವಿಂದ ಕೆ ಪಿ ಅವರನ್ನು ಮನೆಗೆ ಕರೆಸಿದ್ದಾರೆ. ಅದಾದ ಅರವಿಂದ್ ಗಾಗಿ ಒಂದು ಕವನವನ್ನು ದಿವ್ಯ ಸ್ವತಃ ಬರೆದಿದ್ದನ್ನು ಎಲ್ಲರ ಮುಂದೆ ಓದುತ್ತಾಳೆ. ಆಗ ಕೆಪಿ ಇದು ಇನ್ನು ಯಾರಿಗೆಲ್ಲ ಕ್ರೆಡಿಟ್ ಕೊಡಬೇಕು ಕೊಟ್ಟು ಬಿಡು ಅಂತ ರೂಪೇಶ್ ರಾಜಣ್ಣನಿಗೆ ಟಾನ್ಟ್ ಹೊಡೆಯುತ್ತಾನೆ. ಇಲ್ಲ ಇಲ್ಲ ಇದು ನಾನೇ ಎಲ್ಲದು ಬರೆದಿದ್ದು ಅಂತ ಹೇಳಿ ಅಯ್ಯೋ ನನಗೆ ನಾಚಿಕೆ ಆಗ್ತಾ ಇದೆ ಅಂತ ಹೇಳಿ ಅರವಿಂದ್ ಅನ್ನು ತಬ್ಬಿ ಕೊಳ್ಳುತ್ತಾಳೆ ದಿವ್ಯ.

ಒಟ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೊನೆಯ ದಿನಗಳು ಫುಲ್ ಮಜವಾಗಿದೆ. ಇನ್ನು ಉಳಿದ ಸ್ಪರ್ಧಿಗಳಿಗೆ ಏನೆಲ್ಲಾ ಸರ್ಪ್ರೈಸ್ ಕಾದಿದೆ ಎಂದು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.