Home Entertainment Weekend With Ramesh : ನಟ ಡಾಲಿ ಧನಂಜಯ್‌ ಮದುವೆ ವಿಷಯ ರಟ್ಟು! ವೀಕೆಂಡ್‌ ವಿತ್‌...

Weekend With Ramesh : ನಟ ಡಾಲಿ ಧನಂಜಯ್‌ ಮದುವೆ ವಿಷಯ ರಟ್ಟು! ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ಈ ವಿಷಯ ಬಹಿರಂಗ!!!

Weekend with Ramesh and Daali Dhananjay

Hindu neighbor gifts plot of land

Hindu neighbour gifts land to Muslim journalist

Weekend with Ramesh and Daali Dhananjay: ರಮೇಶ್ ಅರವಿಂದ್(Ramesh Aravind) ನಿರೂಪಿಸಿ ಕೊಡುವಂತಹ ವೀಕೆಂಡ್ ವಿತ್ ರಮೇಶ್ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಸೀಸನ್ 5 ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಬಾರಿ ಜೀ ಕನ್ನಡದಲ್ಲಿ(Zee Kannada) ನಡೆಯುವ ವೀಕೆಂಡ್ ವಿತ್ ರಮೇಶ್ ಗೆ ಡಾಲಿ ಧನಂಜಯ್ ಅತಿಥಿಯಾಗಿ ಬಂದಿದ್ದಾರೆ. ಅವರ ಜೀವನದಲ್ಲಿ ನಡೆದ ಕಹಿ ಘಟನೆಗಳು ಮತ್ತು ಸಂತೋಷವನ್ನು(happiness) ವೀಕೆಂಡ್ ವಿತ್ ರಮೇಶ್ ನಲ್ಲಿ ರಮೇಶ್ ಅರವಿಂದ್ ಜೊತೆಗೆ ಹಂಚಿಕೊಂಡಿದ್ದಾರೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್( Weekend with Ramesh and Daali Dhananjay) ಅವರ ಅಜ್ಜಿ(grandmother) ಬಂದಾಗ ಅವನು ಮದುವೆಯಾಗಬೇಕು ಎಂದು ಹೇಳಿದ್ದಾರೆ. ಅದಕ್ಕೆ ರಮೇಶ್ ಮದುವೆ ಆಗಬೇಕೆಂದರೆ ಹುಡುಗಿ ಬೇಕಲ್ವಾ ಹಾಗಾಗಿ ಹುಡುಗಿ ಹುಡುಕಿ ಅಂತ ತಮಾಷೆಯ ಮಾತನ್ನು ಆಡಿದಾಗ. ಅಜ್ಜಿ ಅದಕ್ಕೆ ಪ್ರತ್ಯುತ್ತರವಾಗಿ ನಾವು ಹುಡುಕಿದ ಹುಡುಗಿಯನ್ನು ಅವರು ಒಪ್ಪಲ್ಲ ಎಂದು ಹೇಳುತ್ತಾ ನಕ್ಕಿಬಿಡುತ್ತಾರೆ.

ಸ್ಯಾಂಡಲ್‍ವುಡ್ ನಲ್ಲಿ(sandalwood) ಓಡುತ್ತಿರುವ ಕುದುರೆ ಎಂದೇ ಧನಂಜಯ್ ಅವರಿಗೆ ಕರೆಯುತ್ತಾರೆ. ಎಲ್ಲರೂ ಅವನು ಅಂದುಕೊಂಡಂತೆ ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾನೆ. ಅದ್ಯಾಕೋ ಮದುವೆ ಮಾತ್ರ ಸೆಟ್ ಆಗುತ್ತಿಲ್ಲ. ಅದೇ ಮನೆಯವರಿಗೆ ಬಹಳಷ್ಟು ಚಿಂತೆ ಆಗಿ ಬಿಟ್ಟಿದೆ. ಶಿವಣ್ಣ ಅವರು ಡಾಲಿ(dolly) ಬಗ್ಗೆ ಸ್ಕ್ರೀನ್ ನಲ್ಲಿ ಮಾತನಾಡಿದಾಗ ಧನಂಜಯ್ ಅವರನ್ನು ಉದ್ದೇಶಿಸಿ ನಿನ್ನ ಮದುವೆ ಯಾವಾಗ ಎಂದು ಕೇಳಿದ್ದಾರೆ. ಅದಕ್ಕೆ ಧನಂಜಯ್​(Dhananjay) ಅವರು ಶಿವಣ್ಣ(Shivraj Kumar) ಹೇಳಿದ ಮಾತನ್ನು ನಾನು ಯಾವತ್ತಿಗೂ ತಳ್ಳಿ ಹಾಕಿಲ್ಲ. ಹಾಗಾಗಿ ಖಂಡಿತಾ ಆಗ್ತೀನಿ ಎಂದಿದ್ದಾರೆ.

ಡಾಲಿ ಅವರೇ ನಿಮ್ಮ ಮನಸ್ಸಿನಲ್ಲಿ ಯಾರಾದ್ರೂ ಇದ್ರೆ ನನಗೆ ಮಾತ್ರ ಹೇಳಿ ಎಂದು ರಮೇಶ್ ಅರವಿಂದ್(Ramesh aravindh) ಅವರ ಬಳಿ ಹೋಗ್ತಾರೆ. ಆಗ ಡಾಲಿ ಧನಂಜಯ್ ರಮೇಶ್ ಅವರ ಕಿವಿಯಲ್ಲಿ ಏನೋ ಪಿಸುಗುಟ್ಟುತ್ತಾ ಮಾತನ್ನು ಹೇಳ್ತಾರೆ. ಇದನ್ನು ನೋಡಿ ಎಲ್ಲರೂ ಹಸನ್ಮುಖಿಯಾಗಿ ನಗುತ್ತಾರೆ.

ಹಾಗಾದ್ರೆ ಶಿವಣ್ಣ (shivanna)ಹೇಳಿದ ಮಾತಿಗೆ ತಪ್ಪದೇ ಡಾಲಿ ಧನಂಜಯ್ ಮದುವೆ ಆಗ್ತಾರಾ? ಡಾಲಿ ಎಂಬ ಅದೃಷ್ಟವಂತನನ್ನು ಮದುವೆಯಾಗೋ ಹುಡುಗಿ ಹೆಸರು ಹೇಳ್ತಾರಾ? ಎಲ್ಲಾ ವಿಷಯವನ್ನು ತಿಳಿಯಲು ಅಭಿಮಾನಿಗಳು ಕಾದು ನೋಡಬೇಕಿದೆ ಹಾಗಾಗಿ ಶನಿವಾರ ಮತ್ತು ಭಾನುವಾರ ನಡೆಯುವ ವೀಕೆಂಡ್ ವಿತ್ ರಮೇಶ್ ಡಾಲಿ ಧನಂಜಯ್ ಅವರ ಕಾರ್ಯಕ್ರಮವನ್ನು (program)ನೋಡಲು ಅಭಿಮಾನಿಗಳು ತುದಿಕಾಲಲ್ಲಿ ಕಾತುರದಿಂದ ಕಾಯುತ್ತಿದ್ದಾರೆ.