Home Entertainment ಮೂವರು ಹೆಂಡ್ತೀರ ಮುದ್ದಿನ ಗಂಡ ಈತ | ತ್ರಿಬಲ್ ಧಮಾಕಾ ಹೊಡೆದಾತನ ಈ ಅದೃಷ್ಟ ಯಾರಿಗುಂಟು…...

ಮೂವರು ಹೆಂಡ್ತೀರ ಮುದ್ದಿನ ಗಂಡ ಈತ | ತ್ರಿಬಲ್ ಧಮಾಕಾ ಹೊಡೆದಾತನ ಈ ಅದೃಷ್ಟ ಯಾರಿಗುಂಟು… ಯಾರಿಗಿಲ್ಲ !!

Hindu neighbor gifts plot of land

Hindu neighbour gifts land to Muslim journalist

ವ್ಯಕ್ತಿಗೆ ಅದೃಷ್ಟ ಯಾವ ರೀತಿಯಲ್ಲಿ ಖುಲಾಯಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತೆಯೇ ಇಲ್ಲಿ ವ್ಯಕ್ತಿಯೋರ್ವನ ಬಾಳಲ್ಲಿ ಒಂದಲ್ಲ, ಎರಡಲ್ಲ, ಮೂರು ಅದೃಷ್ಟದ ಬಾಗಿಲು ಒಂದೇ ಗಳಿಗೆಯಲ್ಲಿ ತೆರೆದಿದೆ. ಹೌದು. ಕಾಂಗೋದ ವ್ಯಕ್ತಿಯೋರ್ವ ಒಂದೇ ವೇದಿಕೆಯಲ್ಲಿ ತ್ರಿವಳಿ ಹುಡುಗಿಯರನ್ನು ಏಕಕಾಲಕ್ಕೆ ಮದುವೆಯಾಗಿದ್ದಾನೆ!!

ವಿಶೇಷವೆಂದರೆ, ಈ ತ್ರಿವಳಿ ಸಹೋದರಿಯರು ವ್ಯಕ್ತಿಗೆ ಒಟ್ಟಿಗೇ ವಿವಾಹ ಪ್ರಸ್ತಾಪ ಮಾಡಿದ್ದರಂತೆ. ಕಾಂಗೋದ ಲೂವಿಝೋ ಎನ್ನುವ ವ್ಯಕ್ತಿಯೇ ತ್ರಿವಳಿ ಸಹೋದರಿಯರನ್ನು ಏಕಕಾಲಕ್ಕೆ ವರಿಸಿದ ಅದೃಷ್ಟವಂತ.
ಕಾಂಗೋದಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗುವುದಕ್ಕೆ ಕಾನೂನಾತ್ಮಕ ಅವಕಾಶವಿರುವುದರಿಂದ ಅಲ್ಲಿ ಬಹುಪತ್ನಿತ್ವ ಸಾಮಾನ್ಯವಾಗಿದೆ. ಆದರೆ ಏಕಕಾಲಕ್ಕೆ ಬಹುಪತ್ನಿಯರನ್ನು ವರಿಸುವುದು ಅಪರೂಪ.

ಈತನ ಮೂವರು ಪತ್ನಿಯರಾದ ನತಾಶಾ, ನಟಾಲಿಯಾ ಮತ್ತು ನಾಡೆಗೆ ವಿವಾಹ ಪ್ರಸ್ತಾಪ ಮುಂದಿಟ್ಟಾಗ ಲೂವಿಝೋ “ಇಲ್ಲ” ಎನ್ನಲಿಲ್ಲವಂತೆ. ತ್ರಿವಳಿಯರಲ್ಲಿ ಮೊದಲು ಆತನಿಗೆ ಪ್ರೀತಿ ಹುಟ್ಟಿದ್ದು ನಟಾಲಿಯಾ ಮೇಲೆ. ತ್ರಿವಳಿಯರನ್ನು ಮದುವೆಯಾಗುವುದು ಸಣ್ಣ ನಿರ್ಧಾರವಲ್ಲ. ತ್ರಿವಳಿಗಳಾದ ಕಾರಣ “ಓಕೆ” ಎಂದುಬಿಟ್ಟೆ ಎನ್ನುತ್ತಾನೆ ಆತ. ಆದರೆ ಈ ಮದುವೆ ಲೂವಿಝೋ ಹೆತ್ತವರಿಗೆ ಇಷ್ಟವಿಲ್ಲದ ಕಾರಣ ಮದುವೆಗೆ ಬರಲು ನಿರಾಕರಿಸಿದ್ದಾರೆ.

ಕಾಂಗೋದ ದಕ್ಷಿಣ ಕೀವುನಲ್ಲಿರುವ ರುವಾಂಡೋ ಗಡಿ ಸನಿಹದ ಕಲೆಹೆ ಪ್ರದೇಶದಲ್ಲಿ ತ್ರಿವಳಿ ಸಹೋದರಿಯರು ಮತ್ತು ಲೂವಿಝೋ ಮದುವೆ ಅದ್ಧೂರಿಯಾಗಿ ನಡೆದಿದೆ. ಈತನ ಈ ಅದೃಷ್ಟವನ್ನು ಕಂಡು ಅದೆಷ್ಟೋ ಮಂದಿಗೆ ಹೊಟ್ಟೆ ಉರಿದಿರಬಹುದು. ಅದಲ್ಲದೆ ಮೂವರು ಸಹೋದರಿಯರೇ ಈತನನ್ನು ಒಪ್ಪಿಕೊಂಡಿರುವುದು ಆಶ್ಚರ್ಯವೇ ಸರಿ.