Home Entertainment ದರ್ಶನ್ ಇಷ್ಟ, ಆದರೆ ಯಶ್ ಬಗ್ಗೆ ಹಿಂಗ್ಯಾಕಂದ್ರು  ಸನ್ನಿಲಿಯೋನ್!!!

ದರ್ಶನ್ ಇಷ್ಟ, ಆದರೆ ಯಶ್ ಬಗ್ಗೆ ಹಿಂಗ್ಯಾಕಂದ್ರು  ಸನ್ನಿಲಿಯೋನ್!!!

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ನಟಿ, ಮಾಜಿ ನೀಲಿತಾರೆ ಸನ್ನಿಲಿಯೋನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈಗಾಗಲೇ ಕನ್ನಡದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದ ಸನ್ನಿ ಲಿಯೋನ್ ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ‘ಚಾಂಪಿಯನ್’ ಸಿನಿಮಾ ಮೂಲಕ ಸನ್ನಿ ಮತ್ತೆ ಕನ್ನಡಿಗರನ್ನು ತನ್ನತ್ತ ಸೆಳೆಯಲು  ಸಜ್ಜಾಗಿದ್ದಾರೆ. ಈಗಾಗಲೇ ಚಾಂಪಿಯನ್ ಹಾಡಿಗೆ ಹೆಜ್ಜೆ ಹಾಕಿರುವ ಸನ್ನಿ ಕನ್ನಡದ ಯೂಟ್ಯೂಬ್ ಚಾನೆಲ್ ವೊಂದಕ್ಕೆ  ಸಂದರ್ಶನ ನೀಡಿದ್ದಾರೆ. ಸನ್ನಿ ಸಂದರ್ಶನದಲ್ಲಿ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬಾಲಿವುಡ್ ನಟಿ ಸನ್ನಿ ಲಿಯೋನ್ ಪರಭಾಷೆಯಲ್ಲೂ ಸದ್ದು ಮಾಡಿದ್ದಾರೆ. ಈಗಾಗ್ಗೆ ಸ್ಯಾಂಡಲ್ ವುಡ್ ಗೂ ಎಂಟ್ರಿಕೊಟ್ಟು ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ಈಗ ಈ ನಟಿ  ಅನುಶ್ರೀ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನ  ಭಾರೀ ವೈರಲ್ ಆಗಿದೆ. ಇದರಲ್ಲಿ ಸನ್ನಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಸನ್ನಿ ಲಿಯೋನ್ ಯಶ್ ಹಾಗೂ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಎಂದರೆ ತುಂಬಾ ಇಷ್ಟ ಎಂದ ಸನ್ನಿ, “ಅವರು ತುಂಬಾ ಒಳ್ಳೆಯವರು. ಅವರು ಅಂದ್ರೆ ಇಷ್ಟ” ಎಂದಿದ್ದಾರೆ. ಇನ್ನೂ ಯಶ್ ನಟನೆಯ KGF ಫೋಸ್ಟರ್ ನೋಡಿದ ಸನ್ನಿ ಲಿಯೋನ್ ‘ಇದು ರಾಕಿ ಭಾಯ್’ ಅಂತಾರೆ. ಜೊತೆಗೆ ಅವರನ್ನು ನೋಡಿ “ಅವರು ನನ್ನ ಹುಡುಗ ಅಲ್ಲ” ಅಂತ ಹೇಳಿ ನಕ್ಕಿದ್ದಾರೆ. ಈ ಮೂಲಕ ಸನ್ನಿ ಲಿಯೋನಿ ಕನ್ನಡ ಸಿನಿಮಾ ರಂಗದ ಮೇಲೆ ತಮಗಿರುವ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ.

ಈ ವೀಡಿಯೋದಲ್ಲಿ ಇರೋ ಪ್ರಕಾರ, ನಿರೂಪಕಿ ಅನುಶ್ರೀ, ಸನ್ನಿ ಲಿಯೋನ್‌ಗೆ ಯಶ್ ಫೋಟೋ ತೋರಿಸಿ ಇವರು ಯಾರು, ಇವರ ಬಗ್ಗೆ ಹೇಳಿ ಎಂದೆಲ್ಲಾ ಕೇಳುತ್ತಾರೆ. ಯಶ್ ಫೋಟೋ ನೋಡಿ ಫುಲ್ ಎಕ್ಸೈಟ್ ಆಗಿರುವ ನಟಿ, ಇವರು ಯಶ್ ಎಂದಿದ್ದಾರೆ. ಅದಕ್ಕೆ ಅನುಶ್ರೀ ಇವರನ್ನು ಏನಂಥ ಕರೆಯುತ್ತಾರೆ ಎಂದು ಕೇಳಿದ್ದು, ರಾಕಿಭಾಯ್ ಎಂದು ಹೇಳಿದ್ದಾರೆ. ಅಲ್ಲದೇ, ಹಿ ಈಸ್ ನಾಟ್ ಮೈ ಬಾಯ್, ಅವರು ನನ್ನ ಹುಡುಗ ಅಲ್ಲ ಎಂದಿದ್ದಾರೆ. ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದ್ದು, ಸನ್ನಿ ಹಿಂಗ್ಯಾಕ್ ಅಂದ್ರು ಅಂತ ಯೋಚನೆ ಮಾಡ್ತಿದ್ದಾರೆ. ಆದರೆ ನಂತರ ಸಂದರ್ಶನದಲ್ಲಿ ಅವರು, ಯಶ್ ಬಗ್ಗೆ ಅವರಿಗಿರುವ ಪ್ರೀತಿ ಹಾಗೂ ಅಭಿಮಾನವನ್ನು ಸಹ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಚಿನ್ ಹಾಗೂ ಅದಿತಿ ಪ್ರಭುದೇವ ನಟನೆಯ ಚಾಂಪಿಯನ್ ಸಿನಿಮಾದ ಸ್ಪೆಷಲ್ ಹಾಡೊಂದಕ್ಕೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾರೆ. ಸ್ಪೋರ್ಟ್ ಕಥೆಯಾಧರಿಸಿದ ಚಾಂಪಿಯನ್ ಸಿನಿಮಾ ತಂಡ ಇತ್ತೀಚೆಗೆ ಆಡಿಯೋ ಲಾಂಚ್ ಮಾಡಿದ್ದು ಈ ಕಾರ್ಯಕ್ರಮಕ್ಕೂ ಸನ್ನಿ ಲಿಯೋನ್ ಹಾಜರಾಗಿದ್ದರು.