Home Breaking Entertainment News Kannada ಕಿಂಗ್‌ಖಾನ್‌, ಬಾದ್‌ ಶಾ ಶಾರುಖ್‌ ಖಾನ್‌ ಬಳಿ ಇರುವ ಐಷರಾಮಿ ಮನೆಗಳಿವು ! ಹೇಗಿದೆ ಗೊತ್ತಾ?

ಕಿಂಗ್‌ಖಾನ್‌, ಬಾದ್‌ ಶಾ ಶಾರುಖ್‌ ಖಾನ್‌ ಬಳಿ ಇರುವ ಐಷರಾಮಿ ಮನೆಗಳಿವು ! ಹೇಗಿದೆ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್ ಇರೋದು ಕಾಮನ್. ಬಾಲಿವುಡ್‌ ಬಾದ್‌ಷಾ, ಕಿಂಗ್ ಖಾನ್ ಖ್ಯಾತಿಯ ಸೂಪರ್‌ಸ್ಟಾರ್ ಶಾರುಖ್ ಖಾನ್ ಶ್ರೀಮಂತ ನಟರಲ್ಲಿ ಒಬ್ಬರು. ದೇಶ-ವಿದೇಶಗಳಲ್ಲಿ ಶಾರುಖ್ ಖಾನ್ ಆಸ್ತಿ ಹೊಂದಿದ್ದು, ಸಾವಿರಾರು ಕೋಟಿ ರೂಪಾಯಿ ಒಡೆಯ ಶಾರುಖ್ ಖಾನ್ ಬಳಿ ಹಲವು ದುಬಾರಿ ಕಾರುಗಳು ಕೂಡ ಇವೆ.

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ನಟನೆಯಿಂದ ನಾಲ್ಕು ವರ್ಷ ದೂರ ಇದ್ದರೂ ಕೂಡ ‘ಪಠಾಣ್​’ ಸಿನಿಮಾ (Pathan Movie) ಮೂಲಕ ದೊಡ್ಡ ಪರದೆಗೆ ಕಂಬ್ಯಾಕ್ ಆಗಿದ್ದು ಗೊತ್ತಿರುವ ವಿಚಾರವೇ. ಇದರ ನಡುವೆ ಶಾರುಖ್ ಖಾನ್ ಫ್ಯಾನ್ಸ್ ದಿಲ್ ಖುಷ್ ಆಗೋ ಸಂಗತಿ ಕೂಡ ಹೊರಬಿದ್ದಿದೆ. ವಿಶ್ವದ ನಾಲ್ಕನೇ ಶ್ರೀಮಂತ ನಟನಾಗಿ ಶಾರುಖ್ ಹೊರಹೊಮ್ಮಿದ್ದು, ಇದಲ್ಲದೆ ಟಾಪ್​ 10ರಲ್ಲಿ ಇರುವ ಭಾರತದ ಏಕೈಕ ಹೀರೋ ಶಾರುಖ್ ಎಂಬುದು ಮತ್ತೊಂದು ವಿಶೇಷತೆ.

80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶಾರುಖ್ ಬಣ್ಣ ಹಚ್ಚಿದ್ದು ಮಾತ್ರವಲ್ಲದೆ, ಬಾಲಿವುಡ್ ಬಾದ್ ಷಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 1980ರಲ್ಲಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಶಾರುಖ್ ಖಾನ್, 1992ರಲ್ಲಿ ‘ದೀವಾನಾ’ ಮೂಲಕ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದ ಬಳಿಕ ಅವಕಾಶದ ಬಾಗಿಲು ತೆರೆಯುತ್ತಾ ಹೋಗಿ ಶಾರುಕ್ ಹಿಟ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿ ವಿಶ್ವದಲ್ಲಿ ಶಾರುಖ್ ಖಾನ್‌ ಅತ್ಯಂತ ಯಶಸ್ವಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಶಾರುಖ್ ಅವರ ಒಟ್ಟಾರೆ ಆಸ್ತಿ 770 ಮಿಲಿಯನ್ ಡಾಲರ್. ತನ್ನ ನಟನೆಯ ಮೂಲಕ ಹಗಲಿರುಳು ಶ್ರಮಿಸಿ ಪಡೆದ ಆದಾಯವಿದು. ಕಾಯಕವೇ ಕೈಲಾಸ ಎಂಬ ತತ್ವವನ್ನು ಅನುಸರಿಸಿ ಇಂದು ಶ್ರೀಮಂತ ಪಟ್ಟಿಯ ಲಿಸ್ಟ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಶಾರುಖ್ ಹೆಸರಲ್ಲಿ ಎಷ್ಟು ಮನೆಗಳಿವೆ ಎಂಬ ಕುತೂಹಲಕಾರಿ ಸಂಗತಿಯ ಬಗ್ಗೆ ನಿಮಗೆ ತಿಳಿದಿದೆಯೇ?? ಇಲ್ಲ ಅನ್ನೋದಾದರೆ ನಾವು ಹೇಳ್ತೀವಿ ಕೇಳಿ!!

ಕಿಂಗ್ ಖಾನ್ ಒಡೆತನದ ‘ಮನ್ನತ್’ ಮನೆ ತುಂಬಾ ಪ್ರಸಿದ್ಧಿ ಪಡೆದಿದ್ದು, ಹೆಚ್ಚಿನವರು ಮುಂಬೈಗೆ ಬಂದಾಗ ಒಮ್ಮೆಯಾದರೂ ಮನ್ನತ್ ನೋಡಬೇಕು ಎಂದು ಬಯಸೋದು ಸಹಜ. ಇದನ್ನು ಹೊರತುಪಡಿಸಿದರೆ ಜಗತ್ತಿನಾದ್ಯಂತ ಶಾರುಖ್ ಹಲವಾರು ಮನೆಗಳನ್ನು ಹೊಂದಿದ್ದು, ದುಬೈನಿಂದ ಹಿಡಿದು ಲಾಸ್ ಏಂಜಲೀಸ್ ವರೆಗೆ ದುಬಾರಿ ಮನೆಗಳನ್ನು ಹೊಂದಿದ್ದಾರೆ. ಶಾರುಖ್ ಅವರ ಆರು ದುಬಾರಿ ಆಸ್ತಿಗಳ ಮಾಹಿತಿ ಇಲ್ಲಿದೆ.

ಮನ್ನತ್
ಶಾರುಖ್ ಖಾನ್ ಅವರ ‘ಮನ್ನತ್’ ಮನೆ ಹೆಚ್ಚು ಪ್ರಸಿದ್ದಿ ಪಡೆದಿದೆ. ಮುಂಬೈನ ಬಾಂದ್ರಾದ ಅತಿ ದುಬಾರಿ ಪ್ರದೇಶದಲ್ಲಿರುವ ಮನ್ನತ್ ಸರಿಸುಮಾರು 200 ಕೋಟಿ ರೂ. ಬೆಲೆಬಾಳುವ ಈ ಮನೆಯಿಂದ ಸಮುದ್ರ ನೋಡಲು ರಮ್ಯ ತಾಣ. ಈ ಮನೆಯಲ್ಲಿ ಜಿಮ್, ಈಜುಕೊಳ, ಥಿಯೇಟರ್, ಬೃಹತ್ ಕೊಠಡಿಗಳನ್ನು ಒಳಗೊಂಡಿದೆ. ‘ಮನ್ನತ್’ ಮನೆಯಲ್ಲಿ ಶಾರುಖ್ ಪತ್ನಿ ಗೌರಿ ಖಾನ್, ಮಕ್ಕಳಾದ ಸುಹಾನಾ ಖಾನ್, ಅಬ್ರಹಾಂ ಜೊತೆ ಶಾರುಖ್ ವಾಸಿಸುತ್ತಾರೆ. ಒಟ್ಟಾರೆಯಾಗಿ ‘ಮನ್ನತ್’ 200 ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎನ್ನಲಾಗಿದೆ.

ದೆಹಲಿಯಲ್ಲಿ ಕನಸಿನ ಮನೆ
ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರಿಗೆ ದೆಹಲಿ ನೆಚ್ಚಿನ ತಾಣ. ಅಷ್ಟೇ ಅಲ್ಲದೇ, ಇದು ಕಿಂಗ್ ಖಾನ್ ಜನ್ಮಸ್ಥಳವಾಗಿದ್ದು, ಶಾರುಖ್ ಹಾಗೂ ಗೌರಿ ಹದಿಹರೆಯದವರಾಗಿದ್ದಾಗ ತಾವು ಭೇಟಿಯಾಗುತ್ತಿದ್ದ ತಮ್ಮ ನೆಚ್ಚಿನ ಸ್ಥಳದಲ್ಲಿ ಕನಸಿನ ಮನೆಯನ್ನು ಹೊಂದಿದ್ದಾರೆ.ಈ ಮನೆಯ ಇಂಟೀರಿಯರ್ ಡಿಸೈನರ್ ಶಾರುಖ್ ಪತ್ನಿ ಗೌರಿ ಖಾನ್ ಅನ್ನೋದು ವಿಶೇಷ. ಈ ಮನೆಯಲ್ಲಿ ಸುಂದರವಾದ ಕಲಾಕೃತಿಗಳು, ಛಾಯಾಚಿತ್ರಗಳು, ವಿಂಟೇಜ್ ಗೋಡೆಗಳು, ಬೃಹತ್ ಕನ್ನಡಿಗಳು ಐಷಾರಾಮಿ ಜೀವನಕ್ಕೆ ತಕ್ಕಂತೆ ಎಲ್ಲ ವ್ಯವಸ್ಥೆಗಳಿವೆ. ಅಲ್ಲಿ ಸುಹಾನಾ ಖಾನ್ ಅವರ ಮೊದಲ ಮೇಕಪ್ ಕಿಟ್, ಆರ್ಯನ್ ಖಾನ್‌ರ ಬ್ಯಾಡ್ಮಿಂಟನ್ ರಾಕೆಟ್‌ ಸೇರಿ ಅನೇಕ ಮರೆಯಲಾರದ ಸವಿ ನೆನಪುಗಳನ್ನೂ ಒಳಗೊಂಡಿದೆ ಎನ್ನಲಾಗಿದೆ.

ಲಂಡನ್ ಐಷಾರಾಮಿ ಅಪಾರ್ಟ್ಮೆಂಟ್
ಕೆಲ ವರದಿಗಳ ಅನುಸಾರ, ಶಾರುಖ್ ಖಾನ್ ಸೆಂಟ್ರಲ್ ಲಂಡನ್ ನ ಪಾರ್ಕ್ ಲೇನ್ ನಲ್ಲಿ 183 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದು, ಈ ಅಪಾರ್ಟ್ಮೆಂಟ್ಗೆ ಬಾಲಿವುಡ್ ಬಾದ್ ಷಾ ಆಗಾಗ ಕುಟುಂಬದೊಂದಿಗೆ ಭೇಟಿ ನೀಡುತ್ತಾರೆ.

ಜನ್ನತ್
ದುಬೈನ ಗೋಲ್ಡನ್ ವೀಸಾ ಹೊಂದಿರುವ ಶಾರುಖ್ ಖಾನ್ ಇದರ ಜೊತೆಗೆ ದುಬೈ ಟೂರಿಸಂ ರಾಯಭಾರಿಯಾಗಿರುವ ಕಿಂಗ್ ಖಾನ್, ಪಾಮ್ ಜುಮೆರೈನಲ್ಲಿ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ. ಈ ಐಷಾರಾಮಿ ಮನೆಗೆ ಜನ್ನತ್ ಎಂದು ಹೆಸರಿಡಲಾಗಿದೆ. ಸುಮಾರು 18 ಕೋಟಿ ರೂ. ಬೆಲೆಬಾಳುವ ಈ ಮನೆಯಲ್ಲಿ 6 ಕೊಠಡಿಗಳಿವೆ. ರಿಮೋಟ್ ಕಂಟ್ರೋಲ್ ಗ್ಯಾರೇಜ್, ಈಜುಕೊಳ, ಮೀನುಗಾರಿಕೆ ನೇರವಾಗಿ ಸಂಪರ್ಕ ಒದಗಿಸುವಂತೆ ನೀರಿನ ವ್ಯವಸ್ಥೆ ಕೂಡ ಇದೆ ಎನ್ನಲಾಗಿದೆ.

ಲಾಸ್ ಏಂಜಲೀಸ್ ವಿಲ್ಲಾ
ಶಾರುಖ್ ಖಾನ್ ಲಾಸ್ ಏಂಜಲೀಸ್ ನಲ್ಲಿ ಒಂದು ವಿಸ್ತಾರವಾದ ಪ್ಯಾಲೇಟಿಯಲ್ ‘ವಿಲ್ಲಾ’ವನ್ನು ಹೊಂದಿದ್ದು, ಇದರಲ್ಲಿ ಆರು ವಿಶಾಲವಾದ ಕೋಣೆಗಳು, ಜಕುಜೀಗಳು, ದೊಡ್ಡದಾದ ಸ್ವಿಮಿಂಗ್ ಪೂಲ್, ಖಾಸಗಿ ಟೆನಿಸ್ ಕೋರ್ಟ್ ಅನ್ನು ಒಳಗೊಂಡಿದೆ.

ಅಲಿಬಾಗ್ ಹಾಲಿಡೇ ಹೋಮ್
ಶಾರುಖ್ ಖಾನ್ ಅಲಿಬಾಗ್ ನಲ್ಲಿ ಒಂದು ಹಾಲಿಡೇ ಮನೆಯನ್ನು ಹೊಂದಿದ್ದು, ಪ್ರಕೃತಿ ನಡುವಿರುವ ಈ ಬಂಗಲೆ 15 ಕೋಟಿ ಮೌಲ್ಯದ್ದು. ಇದರಲ್ಲಿ ಸ್ವಿಮ್ಮಿಂಗ್ ಪೂಲ್, ಹೊರಾಂಗಣ ಸ್ಥಳಗಳು, ಹಾಗೂ ಖಾಸಗಿ ಹೆಲಿಪ್ಯಾಡ್ ಕೂಡ ಇವೆ. ಕೆಲ ವರ್ಷಗಳ ಕಾಲ ತಮ್ಮ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. 20,000 ಚದರ ಮೀಟರ್ ಹೊಂದಿರುವ ಈ ಮನೆಯನ್ನು ಪಾರ್ಟಿ, ವಿಶ್ರಾಂತಿಗಾಗಿಯೆ ಕಟ್ಟಿಸಲಾಗಿದೆ.