Home Entertainment ಭರ್ಜರಿ ಮೊತ್ತಕ್ಕೆ ಸ್ಯಾಟಲೈಟ್ , ಒಟಿಟಿ ಸೇಲಾದ ಕಾಂತಾರ ಸಿನಿಮಾ | ಎಷ್ಟು ಕೋಟಿಗೆ ಮಾರಾಟ?

ಭರ್ಜರಿ ಮೊತ್ತಕ್ಕೆ ಸ್ಯಾಟಲೈಟ್ , ಒಟಿಟಿ ಸೇಲಾದ ಕಾಂತಾರ ಸಿನಿಮಾ | ಎಷ್ಟು ಕೋಟಿಗೆ ಮಾರಾಟ?

Hindu neighbor gifts plot of land

Hindu neighbour gifts land to Muslim journalist

ದಸರಾ ಹಬ್ಬಕ್ಕೆ ಈ ಬಾರಿ ನಾಲ್ಕೈದು ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬಂದಿತ್ತು. ಆದರೆ, ನವರಾತ್ರಿಗೆಂದು ಬಿಡುಗಡೆಯಾದ ಈ ಸಿನಿಮಾಗಳಲ್ಲಿಯೂ ಬ್ಲಾಕ್ ಬಸ್ಟರ್ ಲಿಸ್ಟ್ ಗೆ ಸೇರಿದ ಸಿನಿಮಾವೆಂದರೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಚಿತ್ರ. ‘ಕಾಂತಾರ’ದ ಅಬ್ಬರ ಈಗಾಗಲೇ ಎಲ್ಲೆಡೆ ಕೇಳುತ್ತಿದೆ.

ಈ ಬೆನ್ನಲ್ಲೇ ‘ಕಾಂತಾರ’ ಸ್ಯಾಟಲೈಟ್ ಹಾಗೂ ಓಟಿಟಿ ವಲಯದಲ್ಲೂ ಜಾಕ್‌ಪಾಟ್ ಹೊಡೆದಿದೆ.

ಹೊಂಬಾಳೆ ನಿರ್ಮಿಸಿದ ‘ಕೆಜಿಎಫ್ 2’ ಬಳಿಕ ‘ಕಾಂತಾರ’ ಸದ್ದಿಗೆ ಪರಭಾಷೆಯ ಸಿನಿಮಾಗಳೂ ಕೂಡ ಗಪ್ ಚುಪ್ ಆಗಿದೆ. ದೊಡ್ಡ ದೊಡ್ಡ ಸಿನಿಮಾ ರಿಲೀಸ್ ಗಳ ಮಧ್ಯೆ ಕರ್ನಾಟಕದಲ್ಲಿ ‘ಕಾಂತಾರ’ನೇ ಪಾರುಪಥ್ಯ ವಹಿಸಿದೆ. ಹೀಗಾಗಿ ಇದೂವರೆಗೂ ಥಿಯೇಟರ್‌ನಲ್ಲಿ ಕೋಟಿ ಕೋಟಿ ಬಾಚುತ್ತಿದ್ದ ಸಿನಿಮಾ, ಸ್ಯಾಟಲೈಟ್ ರೈಟ್ಸ್ ಹಾಗೂ ಓಟಿಟಿ ರೈಟ್ಸ್ ನಿಂದಲೂ ಕೋಟಿ ಲೆಕ್ಕದಲ್ಲಿ ಬಾಚಿಕೊಂಡಿದೆ.

ಸಾಮಾನ್ಯವಾಗಿ ಒಂದು ಸಿನಿಮಾ ಬಿಡುಗಡೆಗೂ ಮೊದಲೇ ಸ್ಯಾಟಲೈಟ್ ಹಾಗೂ ಓಟಿಟಿಗೆ ಸೇಲ್ ಆಗುತ್ತೆ. ಆದರೆ, ‘ಕಾಂತಾರ’ ಸಿನಿಮಾದ ಮೇಲೆ ಬಹಳ ಭರವಸೆ ಇದ್ದಿದ್ದರಿಂದ ಸ್ಯಾಟಲೈಟ್‌ಗೆ ಹಾಗೂ ಟಿವಿಗೆ ಹಕ್ಕುಗಳನ್ನು ಮಾರಾಟ ಮಾಡಿರಲಿಲ್ಲ. ಆದರೀಗ ಭರ್ಜರಿ ಮೊತ್ತಕ್ಕೆ ಸ್ಯಾಟಲೈಟ್ ಹಾಗೂ ಓಟಿಟಿಗೆ ಸೇಲ್ ಆಗಿದೆ. ಕೊನೆಗೂ ಹೊಂಬಾಳೆ ಕಾಂತಾರ ಸಿನಿಮಾನ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಅನ್ನೋ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ.

ಸಿನಿಮಾಗಳಿಗೆ ಸ್ಯಾಟಲೈಟ್ ಹಕ್ಕುಗಳಿಗೆ ಟಿವಿ ಚಾನೆಲ್‌ಗಳು ಪೈಪೋಟಿ ಬೀಳುತ್ತವೆ. ಅದರಲ್ಲೂ ‘ಕಾಂತಾರ’ ಅಂತಹ ಸಿನಿಮಾಗಳನ್ನು ಕೊಂಡುಕೊಳ್ಳುವುದಕ್ಕೆ ಕಾಂಪಿಟೇಷನ್ ಇರುತ್ತೆ. ಸದ್ಯ ‘ಕಾಂತಾರ’ ಸಿನಿಮಾದ ಸ್ಯಾಟಲೈಟ್ಸ್ ರೈಟ್ಸ್ ಕೂಡ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗಿದೆ. ಸ್ಟಾರ್ ಸುವರ್ಣಗೆ ‘ಕಾಂತಾರ’ ಸೇಲ್ ಆಗಿದ್ದು, ಸುಮಾರು 6 ರಿಂದ 7 ಕೋಟಿ ರೂ.ಗೆ ಮಾರಾಟ ಆಗಿದೆ ಅಂತ ಕಿರುತೆರೆ ವಲಯದಲ್ಲಿ ಓಡಾಡುತ್ತಿದೆ.

ಹಾಗೇ ಒಟಿಟಿ ಗೆ ಬಂದರೆ ‘ಕಾಂತಾರ’ ಅಮೆಜಾನ್ ಪ್ರೈಂಗೆ ಸಿನಿಮಾ ಸೋಲ್ಡ್ ಆಗಿದೆ. ಅಮೆಜಾನ್ ಪ್ರೈಂ ಸುಮಾರು 7 ಕೋಟಿ ರೂ. ಈ ಸಿನಿಮಾವನ್ನು ಕೊಂಡುಕೊಂಡಿದೆ ಎನ್ನಲಾಗಿದೆ.