Home Entertainment Mahalakshmi-Ravindar: ರವೀಂದರ್‌- ಮಹಾಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು?! ರವೀಂದರ್‌ ಒಬ್ಬಂಟಿ ಫೋಟೋ, ನಿಗೂಢ ಕ್ಯಾಪ್ಶನ್!!

Mahalakshmi-Ravindar: ರವೀಂದರ್‌- ಮಹಾಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು?! ರವೀಂದರ್‌ ಒಬ್ಬಂಟಿ ಫೋಟೋ, ನಿಗೂಢ ಕ್ಯಾಪ್ಶನ್!!

Mahalakshmi-Ravindar
Image Source: ಕನ್ನಡ ದುನಿಯಾ

Hindu neighbor gifts plot of land

Hindu neighbour gifts land to Muslim journalist

Mahalakshmi-Ravindar: ತಮಿಳು ಕಿರುತೆರೆಯ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ (Ravindar chandrasekaran And Mahalakshmi) ಜೋಡಿ ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯು ಮದುವೆಯ ಬಳಿಕ ಒಂದಲ್ಲ ಒಂದು ವಿಚಾರಕ್ಕೆ ನೆಟ್ಟಿಗರ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಗಳಿಗೂ ಒಳಗಾಗಿದ್ದಾರೆ.

ಅಂತಹ‌ ಕಾಮೆಂಟ್ ಗಳಿಗೆ , ಟ್ರೋಲ್ ಮಾಡುವವರಿಗೆ ರವೀಂದರ್‌ ಹಾಗೂ ಮಹಾಲಕ್ಷ್ಮಿ  (Mahalakshmi-Ravindar) ತಾವು ಜೊತೆಯಾಗಿರುವ ಫೋಟೋ ಅಪ್ಲೋಡ್ ಮಾಡಿ, ಕೌಂಟರ್ ಕೊಡುತ್ತಿದ್ದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಈ ಬಾರಿ ರವೀಂದರ್ ತಮ್ಮ ಫೋಟೋ ಮಾತ್ರ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪತ್ನಿ ಇಲ್ಲ. ಹಾಗಾಗಿ ಸೋಷಿಯಲ್ಸ್ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅವರಲ್ಲಿ ರವೀಂದರ್‌- ಮಹಾಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಮೂಡಿದ್ಯಾ? ಎಂಬ ಪ್ರಶ್ನೆ ಮೂಡಿದೆ.

ಪತ್ನಿ ಮಹಾಲಕ್ಷ್ಮಿ ಜೊತೆಗಿನ ಚಿತ್ರಗಳನ್ನು ಆಗಾಗ ಪೋಸ್ಟ್ ಮಾಡುತ್ತಿದ್ದ ರವೀಂದರ್ ಈಗ ಒಂದೇ ಒಂದು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ರವೀಂದರ್ ಚಂದ್ರಶೇಖರನ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ನಿಗೂಢ ಶೀರ್ಷಿಕೆಯೊಂದಿಗೆ ಒಬ್ಬಂಟಿಯಾಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, “ಬದುಕಲು ಕಾರಣ ಪ್ರೀತಿಸುವುದೇ ಕಾರಣ, ಕಷ್ಟದ ಸಮಯದಲ್ಲಿ ನಗು. ಯಾಕೆಂದರೆ ಅವರು ನಿನ್ನ ದುಃಖದಿಂದ ಮಾತ್ರ ಸಂತೋಷಪಡುತ್ತಾರೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಪತಿ ರವೀಂದರ್ ಚಂದ್ರಶೇಖರನ್ ಅವರ ಪ್ರತಿಯೊಂದು ಪೋಸ್ಟ್ ಅನ್ನು ಮೊದಲು ಇಷ್ಟಪಡುವ ಮಹಾಲಕ್ಷ್ಮಿ, ಅವರ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಆದರೆ ಮಹಾಲಕ್ಷ್ಮಿ ಈ ಪೋಸ್ಟ್ ಗೆ ಇದುವರೆಗೆ ಯಾವುದೇ ಕಾಮೆಂಟ್‌ಗಳನ್ನು ಮಾಡಿಲ್ಲ. ಇದೇ ವೇಳೆ ಬೇಸರಗೊಂಡಿರುವ ರವೀಂದರ್‌, ಒಂಟಿಯಾಗಿ ಭಾವುಕರಾಗಿ ನಿಂತಿರುವ ಫೋಟೋ ನೋಡಿ ಅವರ ಅಭಿಮಾನಿಗಳು ಇವರಿಬ್ಬರ ನಡುವೆ ಏನಾದರೂ ಸಮಸ್ಯೆ ಇದೆಯಾ ? ರವೀಂದರ್‌ ಜೀವನದಲ್ಲಿ ಎಲ್ಲವೂ ಸರಿ ಇದ್ಯಾ? ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿಂದೆ ಕ್ರಿಸ್ಮಸ್ ಸಂದರ್ಭದಲ್ಲಿ ಪತ್ನಿಗೆ ಸ್ವೀಟ್ ಮೆಸೇಜ್ ಮಾಡಿದ್ದ ರವೀಂದ್ರರವರು ಮಹಾಲಕ್ಷ್ಮಿ ತನ್ನ ಜೀವನದ ಎಂಟನೇ ಅದ್ಭುತ ಎಂದು ಹೇಳಿ ತನಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ನಟಿ ಮಹಾಲಕ್ಷ್ಮಿ ಕೂಡ ಪ್ರತಿಕ್ರಿಯೆ ನೀಡಿದ್ದರು. ‘ಜನರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ನಾನು ನನ್ನ ಕೊನೆಯ ಉಸಿರು ಇರುವವರೆಗೂ ಪ್ರೀತಿಸುತ್ತೇನೆ. ನೀನಿಲ್ಲದೆ ನಾನು ಏನೂ ಅಲ್ಲ. ನೀನೇ ನನ್ನ ಸರ್ವಸ್ವ’ ಎಂದು ಪತಿಯ ಪೋಸ್ಟ್ ಗೆ ಹೇಳಿಕೊಂಡಿದ್ದರು. ಹೀಗೇ ರವೀಂದ್ರರ್ ಪ್ರತಿ ಪೋಸ್ಟ್ ಗ್ ಕಾಮೆಂಟ್ ಮಾಡುವ ಪತ್ನಿ ಮಹಾಲಕ್ಷ್ಮಿ ಈ ಬಾರಿ ಕಾಮೆಂಟ್ ಮಾಡದೇ ಇರುವುದು ಹಾಗೂ ಪತಿಯ ಒಬ್ಬಂಟಿ ಫೋಟೋ ನೆಟ್ಟಿಗರನ್ನು ಗೊಂದಲಮಯವಾಗಿಸಿದೆ.

ಇದನ್ನೂ ಓದಿ: Mangaluru: ಕುಟುಂಬ ಸಮೇತರಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ನಟಿ ಮಾಲಾಶ್ರೀ ಭೇಟಿ!!