Home Entertainment Weekend With Ramesh: ಮೋಹಕತಾರೆ ರಮ್ಯಾಳ ಇಂಗ್ಲಿಷ್ ಮೋಹಕ್ಕೆ ಕಿಡಿಕಾರಿದ ಕನ್ನಡ ಜನ! ಇದು ವೀಕೆಂಡ್...

Weekend With Ramesh: ಮೋಹಕತಾರೆ ರಮ್ಯಾಳ ಇಂಗ್ಲಿಷ್ ಮೋಹಕ್ಕೆ ಕಿಡಿಕಾರಿದ ಕನ್ನಡ ಜನ! ಇದು ವೀಕೆಂಡ್ ವಿತ್ ರಮೇಶಾ? ಇಲ್ಲ ವೀಕೆಂಡ್ ವಿತ್ ಇಂಗ್ಲೀಷಾ? ಎಂದ ನೆಟ್ಟಿಗರು!

Weekend With Ramesh show

Hindu neighbor gifts plot of land

Hindu neighbour gifts land to Muslim journalist

Weekend With Ramesh show:ಕನ್ನಡ ಕ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ (Weekend With Ramesh show) ಮತ್ತೆ ಶುರುವಾಗಿದೆ. ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿ ಮತ್ತೆ ಆರಂಭವಾದ ಈ ಶೋ ಮೊದಲ ಪ್ರಸಾರದಿಂದಲೇ ಸಾಕಷ್ಟು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಮೊದಲ ಅತಿಥಿಯಾಗಿ ಆಗಮಿಸಿದ್ದ ಕನ್ನಡದ ಎವರ್ ಗ್ರೀನ್ ನಟಿ ರಮ್ಯಾ, ಮೆಚ್ಚುಗೆಗೆ ಪಾತ್ರವಾಗಿದ್ದಕ್ಕಿಂತ ಟ್ರೋಲ್​ಗೆ ಒಳಗಾಗಿದ್ದೇ ಹೆಚ್ಚು. ಅದರಲ್ಲೂ ಆಕೆಯ ವಿರುದ್ಧ ಕನ್ನಡಿಗರೇ ಕಿಡಿಕಾರಿದ್ದಾರೆ.

ಹೌದು, ಈ ಬಾರಿ ಮೊದಲ ಅತಿಥಿಯಾಗಿ ಸ್ಯಾಂಡಲ್​ವುಡ್​ನ (Sandalwood) ಮೋಹಕ ತಾರೆ ಹಾಗೂ ಮಾಜಿ ಸಂಸದೆಯೂರಮ್ಯಾ (Ramya) ಭಾಗವಹಿಸಿದ್ದಾರೆ. ರಮ್ಯಾ ಅವರು ಅತಿಥಿ ಸೀಟ್​ನಲ್ಲಿ ಕುಳಿತು ತಮ್ಮ ಬಾಲ್ಯ, ಸಿನಿಮಾ, ಮೊದಲ ಸಂಪಾದನೆ (Earning) ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಆದರೆ ಈ ಕಾರ್ಯಕ್ರಮವನ್ನು ವೀಕ್ಷಿಸಿದ ಜನರು ಎಲ್ಲಕ್ಕಿಂತ ಹೆಚ್ಚು ಗಮನಿಸಿದ್ದು ನಟಿಯ ಇಂಗ್ಲಿಷನ್ನು. ಹೌದು ರಮ್ಯಾ ಅವರು ಇಂಗ್ಲಿಷ್ ಮಿಶ್ರಿತ ಕನ್ನಡ (Kannada) ಭಾಷೆಯಲ್ಲಿ ಮಾತನಾಡಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ.

ಇಡೀ ಶೋನಲ್ಲಿ ರಮ್ಯಾ ಕನ್ನಡಕ್ಕಿಂತ ಇಂಗ್ಲಿಷ್​ ಬಳಸಿದ್ದೇ ಹೆಚ್ಚು ಎಂಬುದೇ ವೀಕ್ಷಕರ ತಕರಾರು. ವೀಕೆಂಡ್ ವಿದ್ ರಮೇಶ್ ಶೋ ನೋಡಲು ಕುಳಿತ ಕನ್ನಡಿಗರಿಗೆ ರಮ್ಯಾ ಅತಿಯಾಗಿ ಆಡಿದ ಇಂಗ್ಲಿಷ್ ಮಾತುಗಳು ಕಿರಿಕಿರಿ ಉಂಟುಮಾಡಿವೆ. ಕನ್ನಡದ ಕಾರ್ಯಕ್ರಮವಾದರೂ ಆಕೆ ಅಲ್ಲಿ ಕನ್ನಡಕ್ಕೆ ಆದ್ಯತೆ ನೀಡದ್ದರಿಂದ ಅದು ಯಾವುದೋ ಕಂಗ್ಲಿಷ್​ ಕಾರ್ಯಕ್ರಮದಂತೆ ಅನಿಸಿತು ಎಂದು ಜನ ಆಡಿಕೊಂಡಿದ್ದಾರೆ. ಕನ್ನಡಿಗರು ಒಂದೆಡೆ ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್ ಮಾಡಿಕೊಂಡರೆ, ರಾಜಕೀಯ ಕಾರಣಕ್ಕೆ ಇತರ ಪಕ್ಷಗಳ ಕಾರ್ಯಕರ್ತರೂ ಇದೇ ವಿಚಾರವನ್ನು ನೆಪವಾಗಿಸಿಕೊಂಡು ರಮ್ಯಾ ವಿರುದ್ಧ ಹರಿಹಾಯ್ದಂಥ ಪೋಸ್ಟ್​ಗಳೂ ಕಂಡುಬಂದಿವೆ.

ಇನ್ನು ಈ ಕುರಿತು ಬಹಳಷ್ಟು ಟ್ರೋಲ್ ವೈರಲ್ ಆಗುತ್ತಿದ್ದು, ಒಂದರಲ್ಲಿ ನನ್ನಜ್ಜಿಗೆ ರಮ್ಯಾ ಅವರ ಪರಿಚಯ ಇದೆ. ಆದರೆ ಅವರಿಗೆ ಇಂಗ್ಲಿಷ್ ಗೊತ್ತಿಲ್ಲ. ಹಾಗಾಗಿ ಅವರು ಟಿವಿ ಆಫ್ ಮಾಡಿ ಹೋಗಿ ಮಲಗಿದ್ರು ಎಂದಿದ್ದಾರೆ. ಬರೀ ಇಂಗ್ಲಿಷ್ ಮಾತಾಡೋದೇ ಆಯ್ತು. ಸಾಧನೆ ಮಾಡಿರೋದು ಕನ್ನಡಕದಿಂದ ಎಂದಿದ್ದಾರೆ ಇನ್ನೊಬ್ಬರು. ಈ ಸೀಸನ್​ನಲ್ಲಿ ವೀಕೆಂಡ್ ವಿತ್ ರಮೇಶ್ ಯಾಕೆ ಇಂಗ್ಲಿಷ್ ವರ್ಷನ್ ಮಾಡಿದ್ದಾರೆ? ಕನ್ನಡ ಸಬ್​ಟೈಟಲ್ ಆದ್ರೂ ಹಾಕ್ರೋ ಕೆಳಗೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನೊಬ್ಬರು ಇದು ವೀಕೆಂಡ್ ವಿತ್ ರಮೇಶ್ ಹಾ? ಅಥವಾ ವೀಕೆಂಡ್ ವಿತ್ ಇಂಗ್ಲಿಷ್ ಹಾ? ಎಂದು ಕೇಳಿದ್ದಾರೆ.