Home Entertainment ಹುಟ್ಟಿದ ಕೂಡಲೇ ತನ್ನ ಜನನ ಪ್ರಮಾಣ ಪತ್ರಕ್ಕೆ ಸಹಿ ಹಾಕಿತು ನಾಯಿ ಮರಿ! ಕಾಲು ಬೆರಳನ್ನೊತ್ತಿ...

ಹುಟ್ಟಿದ ಕೂಡಲೇ ತನ್ನ ಜನನ ಪ್ರಮಾಣ ಪತ್ರಕ್ಕೆ ಸಹಿ ಹಾಕಿತು ನಾಯಿ ಮರಿ! ಕಾಲು ಬೆರಳನ್ನೊತ್ತಿ ಸಹಿಮಾಡುವ ‘ಅಲೆಕ್ಸ್’ ವಿಡಿಯೋ ಇದೀಗ ಎಲ್ಲೆಡೆ ವೈರಲ್!!

Hindu neighbor gifts plot of land

Hindu neighbour gifts land to Muslim journalist

ನೀವೇನಾದರೂ ನಿಮ್ಮ ಜನನ ಪ್ರಮಾಣ ಪತ್ರಕ್ಕೆ ಸಹಿ ಮಾಡಿದ್ದೀರಾ? ಸಹಿ ಮಾಡುವ ಅವಕಾಶ ಏನಾದರೂ ಸಿಕ್ಕಿತ್ತಾ? ಸಹಿ ಮಾಡುವುದು ಬಿಡಿ ಇಲ್ಲಿಯ ತನಕ ಒಮ್ಮೆ ಕೂಡ ಅದು ಹೇಗಿರುತ್ತದೆ ಎಂದು ಹಲವರು ನೋಡಿರಲಿಕ್ಕಿಲ್ಲ. ಆದ್ರೆ ಇಲ್ಲೊಬ್ಬರು ಸ್ಪೆಷಲ್ ವ್ಯಕ್ತಿಯೊಬ್ಬರು ತಮ್ಮ ಜನನ ಪ್ರಮಾಣ ಪತ್ರಕ್ಕೆ ಸಹಿ ಮಾಡುವುದರೊಂದಿಗೆ ಸಾಕಷ್ಟು ಸುದ್ದಿಯಾಗಿದ್ದಾರೆ. ಅರೇ! ಇದ್ರಲ್ಲೇನು ವಿಶೇಷ? ಅವಕಾಶ ಸಿಕ್ರೆ ನಾವು ಮಾಡ್ತೀವಿ ಅಂತ ನೀವು ಹೇಳ್ಬೋದು. ಆದ್ರೆ ಇಲ್ಲಿ, ಸಹಿ ಮಾಡಿ ಸುದ್ದಿಯಾಗ್ತಿರೋ ಸ್ಪೆಷಲ್ ಪರ್ಸನ್ ಯಾರು ಗೊತ್ತಾ?

ಆ ಪರ್ಸನ್ ಬೇರಾರು ಅಲ್ಲ ಪುಟ್ಟದೊಂದು ನಾಯಿ ಮರಿ. ಹೌದು ಆಗಷ್ಟೇ ಹುಟ್ಟಿದ ನಾಯಿಮರಿಯೊಂದು ತನ್ನ ಜನನ ಪ್ರಮಾಣ ಪತ್ರಕ್ಕೆ ಪಂಜ ಒತ್ತಿ ಸಹಿ ಮಾಡಿದೆ. ನಾರಿ ಮರಿ ಸಹಿ ಮಾಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗ್ತಿದೆ. ಇದನ್ನು ನೋಡಿದ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಮುದ್ದಾದ ವಿಡಿಯೋ ನಮ್ಮಿಡೀ ದಣಿವನ್ನು ಕಳೆಯುವಂತೆ ಮಾಡಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ನಿಮ್ಮ ಆಸೆಗಳನ್ನು ಮುಗ್ಧ ಪ್ರಾಣಿಗಳ ಮೇಲೆ ಯಾಕೆ ಹೇರುತ್ತೀರಿ ಎನ್ನುತ್ತಿದ್ದಾರೆ.

ಈ ವಿಡಿಯೋವನ್ನು ಈಗಾಗಲೇ 5.5 ಮಿಲಿಯನ್​ ಜನರು ನೋಡಿದ್ದಾರೆ. ಅಲೆಕ್ಸ್ ಎಂಬ ಹೆಸರಿನ ಈ ಮರಿ ಗ್ರೇಹೌಂಡ್​ ತಳಿಯದ್ದಾಗಿದೆ. ನೆಟ್ಟಿಗರಂತೂ ಈ ಮುದ್ದಾದ ವಿಡಿಯೋ ನೋಡಿ ಇದು ನನಗೆ ಬೇಕು, ಕೊಡುವಿರಾ ಎಂದು ಕೇಳುತ್ತಿದ್ದಾರೆ ಜೊತೆಗೆ ಇಂಥ ಐಡಿಯಾ ಹೇಗೆ ಹೊಳೆಯಿತು ಎಂದು ಪ್ರಶ್ನಿಸುತ್ತಿದ್ದಾರೆ.

ಇದರ ಕುರಿತು ವಿಡಿಯೋ ಗೆ ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಗಳು ಬರುತ್ತಿವೆ. ಕೆಲವರು ಅದರ ಕಾಲುಗಳಿಗೆ ಹಚ್ಚಿರುವ ಮಸಿ ಅದರ ಚರ್ಮಕ್ಕೆ ಹಾನಿಕಾರಕ ಅಲ್ಲ ತಾನೆ? ಎಂದು ಕೇಳಿದ್ದಾರೆ. ಮತ್ತೊಬ್ಬ ನಾಯಿಪ್ರಿಯರು, ಇದು ಯಾಕೋ ತೀರಾ ಅಸಹಜ ಎನ್ನಿಸುತ್ತಿದೆ ಎಂದಿದ್ದಾರೆ. ರೀಲ್ಸ್​​ಗಾಗಿ ಜನ ಏನನ್ನೂ ಬೇಕಾದರೂ ಮಾಡುತ್ತಾರೆ, ನಾಯಿಗಳಿಗೂ ಅವುಗಳದೇ ಆದ ವೈಯಕ್ತಿಕ ಜೀವನ ಇದೆ ಎನ್ನುವುದಿದೆ ಎಂದಿದ್ದಾರೆ ಮತ್ತೊಬ್ಬರು.

ಇನ್ನು ಹಲವರು ಈತನಕ ನಾವು ಇಂಥ ವಿಡಿಯೋ ನೋಡಿರಲೇ ಇಲ್,. ಬಹಳ ಮುದ್ದಾಗಿದೆ ಎಂದು ಹೇಳಿದ್ದಾರೆ. ಸದ್ಯ ನಾಯಿಗಳಿಗೂ ಎಂಥ ಕಾಲ ಬಂತಪ್ಪಾ ಎಂದು ತಮಾಷೆ ಕೂಡ ಮಾಡಿದ್ದಾರೆ. ಅಲ್ಲದೆ ಯಾವತ್ತಾದರೂ ನಿಮ್ಮ ಜನನ ಪ್ರಮಾಣ ಪತ್ರಗಳಿಗೆ ನೀವೇ ಸಹಿ ಮಾಡಿದ್ದಿದೆಯೇ? ಎಂದು ಒಬ್ಬರು ಕೇಳಿದ್ದಾರೆ. ಹಾಗಾದ್ರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

https://www.instagram.com/reel/Cnwbg3cogv8/?igshid=MDJmNzVkMjY=