

Oscar Award : ರಾಜಮೌಳಿ (Rajamouli) ನಿರ್ದೇಶನದ ಆರ್ಆರ್ಆರ್ (RRR) ಬಿಡುಗಡೆಯಾದಾಗಿನಿಂದ ಚಿತ್ರ ಹಾಗೂ ಅದರ ನಾಟು ನಾಟು ಹಾಡು ಸಿನಿರಂಗದ ಹೆಚ್ಚಿನ ಪ್ರಶಸ್ತಿಗಳನ್ನು ಈಗಾಗಲೇ ತನ್ನ ಮುಡಿಗೇರಿಸಿಕೊಂಡಿದೆ. ಅಲ್ಲದೆ ಇದೀಗ ನಿರೀಕ್ಷೆಯಂತೆ ಆಸ್ಕರ್ ಪ್ರಶಸ್ತಿ (Oscar Award) ಗೆದ್ದಿದ್ದು, ಭಾರತೀಯರೆಲ್ಲರಿಗೂ ಹೆಮ್ಮೆಯನ್ನುಂಟುಮಾಡಿದೆ. ಆದರೆ ಇದಕ್ಕೂ ಮುನ್ನ ನಾಟು ನಾಟು ಆಸ್ಕರ್ ವಿಚಾರವಾಗಿ ಭಾರಿ ಸದ್ದು ಮಾಡಿದೆ. ಈ ಪ್ರಶಸ್ತಿಗಾಗಿ ಆನ್ಲೈನ್ ಫ್ಲ್ಯಾಟ್ಫಾರ್ಮ್ನಲ್ಲಿ ಕೋಟಿ ಕೋಟಿಗಟ್ಟಲೆ ಹಣದ ಬೆಟ್ಟಿಂಗ್(Betting) ನಡೆದಿತ್ತು ಎಂದು ವರದಿಯಾಗಿದೆ.
ಹೌದು, ಐಪಿಎಲ್ ಸೀಸನ್, ಮಹತ್ವದ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಬೆಟ್ಟಿಂಗ್ ಇದೀಗ ಅವಾರ್ಡ್ ವಿಚಾರದಲ್ಲೂ ಭಾರೀ ಸದ್ದು ಮಾಡಿದೆ. ಈ ನಾಟು ನಾಟು ಹಾಡು ಆಸ್ಕರ್ (Oscar) ಪ್ರಶಸ್ತಿಗಳ ಪಟ್ಟಿಯಲ್ಲಿ ನಾಮಿನೇಷನ್ ಆಗುತ್ತಿದ್ದಂತೆಯೇ ಎಲ್ಲರ ಗಮನ ಈ ಪ್ರಶಸ್ತಿಯ ಮೇಲೆ ಬಿದ್ದಿತ್ತು. ಪ್ರಶಸ್ತಿ ಗೆಲ್ಲುವ ವಿಚಾರ ಕೋಟಿಗಟ್ಟಲೆ ಬೆಟ್ಟಿಂಗ್ ವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ. ಅಂದಹಾಗೆ ಈ ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಗುತ್ತಲೇ ಭಾರಿ ಸುದ್ದಿ ಮಾಡಿತ್ತು. ನಂತರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುತ್ತಲೇ ಕೋಟಿಗಟ್ಟಲೆ ಲೆಕ್ಕದಲ್ಲಿ ಬೆಟ್ಟಿಂಗ್ ಶುರುವಾಗಿತ್ತು ಎನ್ನಲಾಗುತ್ತಿದೆ.
ಹಿಂದೆಂದೂ ಕಾಣದಷ್ಟು ಬೆಟ್ಟಿಂಗ್ ಈ ಬಾರಿ ಆಸ್ಕರ್ ಸಮಾರಂಭದಲ್ಲಿ ನಡೆದಿದೆ ಎನ್ನಲಾಗಿದೆ. ಅದೂ ಅಲ್ಲದೆ ಈ ಬೆಟ್ಟಿಂಗ್ ನಡೆದದ್ದು ಆನ್ಲೈನ್ನಲ್ಲಿ (Online Betting). ಇದೀಗ ಆನ್ಲೈನ್ ಫ್ಲ್ಯಾಟ್ಫಾರ್ಮ್ನಲ್ಲಿ ಕೋಟಿಗಟ್ಟಲೆ ಹಣ ಕಟ್ಟಿರುವ ವರದಿ ಆಗಿದೆ. ಬೆಂಗಳೂರು ಕೂಡ ಸೇರಿದಂತೆ ಮುಂಬೈ, ಹೈದರಾಬಾದ್ಗಳಲ್ಲಿ ಆನ್ಲೈನ್ ಬುಕ್ಕಿಗಳು 1:4 ರ ರೇಂಜಿನಲ್ಲಿ ಕೋಟಿಗಳಲ್ಲಿ ಬೆಟ್ಟಿಂಗ್ ಮಾಡಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸಾಮಾನ್ಯ ಜನರಷ್ಟೇ ಅಲ್ಲದೇ, ನಾಟು ನಾಟುವಿನ ಬೆಟ್ಟಿಂಗ್ನಲ್ಲಿ ಹಲವು ಸೆಲೆಬ್ರಿಟಿಗಳು (Celebrities) ಕೂಡ ಭಾಗಿಯಾಗಿದ್ದರು ಎಂಬ ಸತ್ಯ ಕೂಡ ಇದೀಗ ಹೊರಬೀಳುತ್ತಿದೆ.
ಇನ್ನು RRR ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಹಲವು ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ನಾಟು ನಾಟು ಹಾಡು ಜನಪ್ರಿಯತೆ ಪಡೆದುಕೊಂಡಿದೆ. ಇದು ಮುಂದಿನ ಕಾಲಕ್ಕೂ ನೆನಪಿನಲ್ಲಿ ಉಳಿಯುವಂತಹ ಹಾಡು. ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಗೀತರಚನಕಾರ ಚಂದ್ರಬೋಸ್ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಭಾರತಕ್ಕೆ ಸಂತಸ ಮತ್ತು ಹೆಮ್ಮೆ’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಸಂಗೀತ ನಿರ್ದೇಶಕ ಕೀರವಾಣಿ ಪ್ರತಿಕ್ರಿಯಿಸಿ ‘ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಆಸ್ಕರ್ ಪ್ರಶಸ್ತಿಯ ಗರಿ ಪ್ರತಿ ಭಾರತೀಯ ಹೆಮ್ಮೆಪಡುವ ವಿಷಯ. ನನ್ನ ಮನಸ್ಸಿನಲ್ಲಿ ಒಂದೇ ಒಂದು ಆಸೆ ಇತ್ತು. ಆರ್ಆರ್ಆರ್ ಚಿತ್ರ ಗೆಲ್ಲಬೇಕು, ಪ್ರತಿ ಭಾರತೀಯ ಹೆಮ್ಮೆ ಪಡಬೇಕು. ಈ ಆಸೆ ಈಡೇರಿದೆ’ ಎಂದಿದ್ದಾರೆ.













