Home Entertainment ಭರ್ಜರಿ ಮೇಕಪ್ ಮಾಡಿಸಿಕೊಂಡು ಥೇಟ್ 21 ರ ಯುವತಿಯಾಗಿ ವರನನ್ನು ಮಂಗ ಮಾಡಿದ 54 ರ...

ಭರ್ಜರಿ ಮೇಕಪ್ ಮಾಡಿಸಿಕೊಂಡು ಥೇಟ್ 21 ರ ಯುವತಿಯಾಗಿ ವರನನ್ನು ಮಂಗ ಮಾಡಿದ 54 ರ ಆಂಟಿ !

Hindu neighbor gifts plot of land

Hindu neighbour gifts land to Muslim journalist

ಹೆಣ್ಣು ಅಂದರೇನೇ ಅಂದ-ಚಂದದ ಕಡೆ ಹೆಚ್ಚು ಗಮನ ಕೊಡುವವಳು. ಹೀಗಾಗಿ ಆಕೆಯ ಮನಸ್ಸು ಹೋಗುವುದೇ ಮೇಕಪ್ ಕಡೆಗೆ. ಇಂದು ಅಂತೂ ಪ್ರತಿಯೊಬ್ಬರೂ ಕೂಡ ತಾನು ಚೆನ್ನಾಗಿ ಕಾಣಬೇಕು ಎನ್ನುವ ದೃಷ್ಟಿಯಿಂದಲೋ, ಅಥವಾ ಫ್ಯಾಷನ್ ಗಾಗಿಯೋ ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ನಾವು ನೀವೂ ಅಂದುಕೊಂಡ ರೀತಿ ಮೇಕಪ್ ಕೇವಲ ಫ್ಯಾಷನ್ ಗಾಗಿ ಅಲ್ಲ. ಬದಲಿಗೆ ಮೋಸದ ಆಟಕ್ಕೂ ಬಳಸುತ್ತಿದ್ದಾರೆ.

ಹೌದು. ಇಲ್ಲೊಂದು ಕಡೆ ಮಹಿಳೆಯೊಂದು ತನ್ನ ವಯಸ್ಸಾದ ಮುಖವನ್ನು 21 ರ ಹರೆಯದ ಯುವತಿಯಂತೆ ಕಾಣಲು ಮೇಕಪ್ ಹಚ್ಚಿ ಒಬ್ಬನಿಗೆ ಅಲ್ಲ, ಬರೋಬ್ಬರಿ ಮೂವರನ್ನು ಮದುವೆ ಆಗುವ ಮೂಲಕ ವಂಚನೆ ಮಾಡಿದ್ದಾಳೆ. ಈ ಘಟನೆ ಆಂಧ್ರ ಪ್ರದೇಶದ ಪುತ್ತೂರಿನಲ್ಲಿ ನಡೆದಿದ್ದು, ಮೇಕಪ್ ಮಾಡಿಕೊಂಡು ತನ್ನ ವಯಸ್ಸನ್ನು ಮರೆಮಾಚಿ ನವ ವಧುವಿನಂತೆ ಮೂರು ಬಾರಿ ಮದುವೆಯಾದ ಮಹಿಳೆ ಸದ್ಯ ಕಂಬಿ ಎನಿಸುತ್ತಿದ್ದಾಳೆ.

ಯಾರೀಕೆ ಖತರ್ನಾಕ್ ಲೇಡಿ?

ಈ ಬಂಧಿತ ಮಹಿಳೆ ವಯಸ್ಸು 54, ಮದುವೆಯಾಗಿ ಡಿವೋರ್ಸ್ ಆದ ಅಥವಾ ತಡವಾಗಿ ಮದುವೆಯಾಗುವ ವ್ಯಕ್ತಿಗಳೇ ಈಕೆಯ ಟಾರ್ಗೆಟ್. ಮ್ಯಾರೇಜ್ ಬ್ರೋಕರ್ ಸಂಪರ್ಕಿಸಿ, ಅವರಿಂದ ಮದುವೆಯಾಗಲು ಹೆಣ್ಣು ಹುಡುಕುತ್ತಿರುವ ವರರ ಫೋನ್ ನಂಬರ್ ಪಡೆದುಕೊಳ್ಳುತ್ತಿದ್ದಳು. ಅಲ್ಲದೆ, ತನ್ನ ನಂಬರ್ ಹಾಗೂ ಫೋಟೋವನ್ನು ನೀಡಿ ಮದುವೆಯಾಗಿ ವಂಚಿಸುತ್ತಿದ್ದಳು. ಅಂದಹಾಗೆ ಈಕೆಯ ಹೆಸರು ಶರಣ್ಯಾ, ಸುಕನ್ಯಾ, ಸಂಧ್ಯಾ ಎಂಬ ಮೂರು ಹೆಸರುಗಳು. ಮೂವರನ್ನು ಬೇರೆ ಬೇರೆ ಹೆಸರುಗಳಿಂದ ವಂಚಿಸಿದ್ದಾಳೆ.

ಮೊದಲು ತಮ್ಮದೇ ಏರಿಯಾದ ರವಿ ಎಂಬಾತನನ್ನು ಶರಣ್ಯಾ ಮದುವೆ ಆಗಿದ್ದಳು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ, ವೈಮನಸ್ಸಿನಿಂದಾಗಿ ಶರಣ್ಯಾ ತನ್ನ ಗಂಡ ರವಿಯಿಂದ ದೂರವಿದ್ದಾಳೆ. ರವಿ ಬಿಎಸ್ಎನ್ಎಲ್‌ನ ನಿವೃತ್ತ ನೌಕರ. ಗಂಡನಿಂದ ಬೇರೆಯಾಗಿ ತಾಯಿ ಮನೆಯಲ್ಲಿ ವಾಸಿಸುತ್ತಿದ್ದಳು. ರವಿಯಿಂದ ದೂರಾದ ಬಳಿಕ ಆರ್ಥಿಕ ತೊಂದರೆಗೆ ಸಿಲುಕಿದ್ದರಿಂದ ಅದರಿಂದ ಹೊರ ಬರಲು ಎರಡನೇ ಮದುವೆ ಆಗಿದ್ದಾಳೆ.

ಎರಡನೇಯವನೇ ಸುಬ್ರಮಣಿ. ಕೆಲ ಮ್ಯಾರೇಜ್ ಬ್ರೋಕರ್ಸ್ ಸಹಾಯದಿಂದ ಇತ್ತೀಚೆಗೆ ಶರಣ್ಯಾಗೆ ಸುಬ್ರಮಣಿ ಪರಿಚಯವಾಗಿತ್ತು. ಈತ ಜೊಲಾರ್ ಪೇಟೆಯ ರೈಲ್ವೇ ಗುತ್ತಿಗೆದಾರ. ಆತನಿಗೆ ಸುಕನ್ಯಾ ಹೆಸರಿನಿಂದ ಪರಿಚಯಿಸಿಕೊಂಡಿದ್ದಳು. ಮದುವೆ ಆಗಿ ಕೆಲ ವರ್ಷಗಳವರೆಗೆ ಆತನೊದಿಗೆ ಇದ್ದಳು. ಆ ನಂತರ ಕೊರೋನ ಅವಧಿಯಲ್ಲಿ ತಾಯಿಯನ್ನು ನೋಡಲು ಹೋಗುವುದಾಗಿ ಹೇಳಿ ಪುತ್ತೂರಿನ ಮನೆಗೆ ಮರಳಿದ್ದಳು. ಇದಾದ ಬಳಿಕ ಮತ್ತೆ ಬ್ರೋಕರ್ ಸಹಾಯದಿಂದ ಸಂಪರ್ಕಕ್ಕೆ ಬಂದಿದ್ದೇ ಇಂದ್ರಾಣಿಗೆ.

65 ವರ್ಷದ ಇಂದ್ರಾಣಿ ಎಂಬಾಕೆ ತನ್ನ ಮಗ ಹರಿ ಜೊತೆ, ತಮಿಳುನಾಡಿನ ತಿರುವಳ್ಳೂರಿನ ಪುದುಪೇಟೆ ಎಂಬಲ್ಲಿ ವಾಸಿಸುತ್ತಿದ್ದಾರೆ. ಮಗ ಹರಿ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾಗಿ ಡಿವೋರ್ಸ್ ಆಗಿದ್ದ ಮಗನಿಗೆ, ಮರು ಮದುವೆ ಮಾಡಲು ಕಳೆದ ಆರು ವರ್ಷದಿಂದ ಇಂದ್ರಾಣಿ ಪ್ರಯತ್ನಿಸುತ್ತಿದ್ದರು. ಹೀಗಿರುವಾಗ 2021ರಲ್ಲಿ ಇಂದ್ರಾಣಿ ಬ್ರೋಕರ್ ಮೂಲಕ ತಿರುಪತಿ ಜಿಲ್ಲೆಯ ಪುತ್ತೂರು ಮೂಲದ ಶರಣ್ಯಾ ಎಂಬಾಕೆಯ ಪರಿಚಯವಾಗಿದೆ. ಬಳಿಕ ಫೋನ್‌ನಲ್ಲಿ ಮಾತನಾಡಿದ್ದು, ತಾನು ಬಡವರ ಮನೆ ಹುಡುಗಿ ಎಂದು ಶರಣ್ಯಾ ಹೇಳಿಕೊಂಡಿದ್ದಾಳೆ. ಇದಾದ ಬಳಿಕ ಹೆಣ್ಣು ನೋಡಲು ಮನೆಗೆ ಬರುವುದಾಗಿ ಇಂದ್ರಾಣಿ ಹೇಳಿದ್ದಾಳೆ.

ಇಲ್ಲಿದೆ ನೋಡಿ ಆಕೆಯ ರಿಯಲ್ ಡ್ರಾಮಾ. ಮನೆಗೆ ಬರುತ್ತೇನೆ ಎಂದ ಇಂದ್ರಾಣಿಯ ಮಾತು ಕೇಳುತ್ತಿದ್ದಂತೆ, ಶರಣ್ಯಾ ಕಾಲು ಹಿಟ್ಟಿದ್ದೆ ಬ್ಯೂಟಿ ಪಾರ್ಲರ್ ಗೆ. ಪಾರ್ಲರ್ ಹೋಗಿ ಮೇಕಪ್ ಮಾಡಿಸಿಕೊಂಡು ಬಂದಿದ್ದಾಳೆ. ಯುವತಿಯಂತೆ ಕಾಣುತ್ತಿದ್ದ ಶರಣ್ಯಾನನ್ನು ನೋಡಿ ಮರುಳಾದ ಹರಿ, ಆಕೆಯನ್ನು ಮದುವೆಯಾಗಲು ಓಕೆ ಅಂದಿದ್ದಾನೆ. ಬಳಿಕ ಇಂದ್ರಾಣಿ ತಾನೇ ಹಣ ಖರ್ಚು ಮಾಡಿ ಮದುವೆ ಮಾಡಿಕೊಂಡಿದ್ದಾರೆ. ಅಲ್ಲದೆ, ಶರಣ್ಯಾಗೆ ಉಡುಗೊರೆಯಾಗಿ 25 ಸವರನ್ ಚಿನ್ನವನ್ನು ಸಹ ನೀಡಿದ್ದಾರೆ. ಮದುವೆ ಬಳಿಕ ಅತ್ತೆಯ ಮನೆಗೆ ಶರಣ್ಯಾ
ಹೋಗಿದ್ದಾಳೆ.

ಕೆಲ ದಿನಗಳವರೆಗೆ ಚೆನ್ನಾಗಿದ್ದ ಶರಣ್ಯಾ, ನಂತರ ತನ್ನ ವರಸೆ ಬದಲಿಸಿದ್ದಾಳೆ. ಗಂಡ ಹರಿಯ ಜತೆ ಜಗಳ ಶುರು ಮಾಡಿದ್ದು, ತಿಂಗಳ ಸಂಬಳವನ್ನು ತನ್ನ ಬಳಿ ತಂದುಕೊಡುವಂತೆ ಪಟ್ಟು ಹಿಡಿದಿದ್ದಾಳೆ. ಅಷ್ಟೇ ಅಲ್ಲದೆ, ಬೀರು ಕೀ ಕೊಡುವಂತೆ ಕೇಳಿದ್ದಾಳೆ. ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾಳೆ. ಆಕೆಯ ಈ ವರ್ತನೆಯಿಂದ ಹರಿ ಮತ್ತು ಇಂದ್ರಾಣಿ ಅನುಮಾನಗೊಂಡಿದ್ದಾರೆ. ಉಪಾಯ ಮಾಡಿದ ಅಮ್ಮ-ಮಗ, ಆಸ್ತಿ ಬದಲಾಯಿಸುತ್ತೇವೆ ಎಂದು ನಂಬಿಸಿ ಶರಣ್ಯಾಳಿಂದ ಆಧಾರ್ ಕಾರ್ಡ್ ಪಡೆದುಕೊಳ್ಳುತ್ತಾರೆ. ಇಲ್ಲಿ ಆಕೆಯ ನಿಜ ಬಣ್ಣ ಬಯಲಾಗುತ್ತದೆ. ಯಾಕೆಂದರೆ, ಆಧಾರ್ ಕಾರ್ಡಿನಲ್ಲಿ ಹರಿ ಬದಲು ಗಂಡನ ಹೆಸರು ರವಿ ಎಂದು ಇರುತ್ತದೆ. ಬಳಿಕ ಆಕೆಗೆ ಗೊತ್ತಿಲ್ಲದಂತೆ ಅವಳ ಬಗ್ಗೆ ವಿಚಾರಿಸಿ, ಎಲ್ಲವನ್ನು ತಿಳಿದ ಬಳಿಕ ಪುತ್ತೂರು ಪೊಲೀಸ್ ಠಾಣೆಯಲ್ಲಿ ಇಂದ್ರಾಣಿ ಮತ್ತು ಹರಿ ದೂರು ದಾಖಲಿಸುತ್ತಾರೆ. ಇದೀಗ ಶರಣ್ಯಾಳನ್ನು ಪೊಲೀಸರು ಬಂಧಿಸಿದ್ದಾರೆ.

ಆದರೆ, ಪತ್ನಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದು ನನಗೆ ಗೊತ್ತಿರಲಿಲ್ಲ ಎನ್ನುತ್ತಾರೆ ಎರಡನೇ ಪತಿ ಸುಬ್ರಮಣಿ. ವಂಚಕಿ ತನ್ನ ಮೊದಲ ಪತಿ ರವಿ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿ 10 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಒಟ್ಟಾರೆ, ಮೂರನೇ ಪತಿಯಿಂದಾದರೂ ಆಕೆಯ ಜನ್ಮ ಜಾಲಾಡಿದ್ದೆ ಸಾರ್ಥಕ!..