Home Breaking Entertainment News Kannada ಕಿಯಾರಾ-ಸಿದ್ದಾರ್ಥ್‌ ನಡುವಿನ ವಯಸ್ಸಿನ ಅಂತರವೆಷ್ಟು? ಇಲ್ಲಿದೆ ಮಾಹಿತಿ

ಕಿಯಾರಾ-ಸಿದ್ದಾರ್ಥ್‌ ನಡುವಿನ ವಯಸ್ಸಿನ ಅಂತರವೆಷ್ಟು? ಇಲ್ಲಿದೆ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಮಂಗಳವಾರ (ಫೆಬ್ರವರಿ 7) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಜೈಸಲ್ಮೇರ್​ ನ ಐಷಾರಾಮಿ ಸೂರ್ಯಗಢ ಪ್ಯಾಲೇಸ್ ಹೋಟೆಲ್ ನಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ.

ಬಾಲಿವುಡ್ ಲವ್ ಬರ್ಡ್ಸ್ ಗಳ ಮದುವೆಗೆ ಹಲವು ಗಣ್ಯರು ಆಗಮಿಸಿದ್ದು, ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್, ಜೂಹಿ ಚಾವ್ಲಾ ಮತ್ತು ಮೀರಾ ರಜಪೂತ್ ಕಪೂರ್, ಆಲಿಯಾ ಭಟ್, ಸಮಂತಾ ಮತ್ತು ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹ ರೆಡ್ಡಿ ಆಗಮಿಸಿದ್ದು, ನವ ಜೋಡಿಗೆ ಶುಭಕೋರಿದ್ದಾರೆ.

ಸದ್ಯ ಸಿದ್ದಾರ್ಥ್ ಹಾಗೂ ಕಿಯಾರಾ ಅಡ್ವಾಣಿ ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಭಿಮಾನಿಗಳಂತು ಫುಲ್ ಖುಷಿಯಲ್ಲಿದ್ದು, ನವ ದಂಪತಿಗೆ ಶುಭಾಶಯಗಳು ಹರಿದುಬರುತ್ತಿದೆ. ಇದೀಗ ಈ ಪ್ರಣಯ ಪಕ್ಷಿಗಳ‌ ನಡುವಿನ ವಯಸ್ಸಿನ ಅಂತರವೆಷ್ಟು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಕಿಯಾರಾ -ಸಿದ್ದಾರ್ಥ್‌ ನಡುವಿನ ವಯಸ್ಸಿನ ಅಂತರವೆಷ್ಟು? ಎಂಬುದರ ಮಾಹಿತಿ ಇಲ್ಲಿದೆ ನೋಡಿ.

2018ರಲ್ಲಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಅವರು ಸೆಟ್​ ಒಂದರಲ್ಲಿ ಭೇಟಿ ಆಗಿದ್ದರು. ಮೊದಲ ಭೇಟಿಯಲ್ಲೇ ಇಬ್ಬರಿಗೂ ಮಾತುಕತೆ ಆಗಿ, ನಂತರ ಸ್ನೇಹ ಬೆಳೆಯಿತು. ಸ್ನೇಹ ಪ್ರೀತಿಗೆ ತಿರುಗಿತು. ‘ಶೇರ್ಷಾ’ ಸಿನಿಮಾದಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್ ಒಟ್ಟಾಗಿ ನಟಿಸಿದರು. ಇವರಿಬ್ಬರ ನಟನೆಯ ಈ ಸಿನಿಮಾವನ್ನು ಜನರು ಮೆಚ್ಚಿಕೊಂಡರು. ಹಾಗೇ ಜೋಡಿಯನ್ನೂ ಕೂಡ. ಇವರಿಬ್ಬರೂ ಹಸೆಮಣೆ ಏರಿದ್ದು, ಅಭಿಮಾನಿಗಳಿಗೆ ತುಂಬಾ ಖುಷಿಕೊಟ್ಟಿದೆ. ಪರದೆ ಮೇಲೆ ಇದ್ದ ಜೋಡಿ. ಇದೀಗ ನಿಜ ಜೀವನದಲ್ಲೂ ಜೋಡಿಯಾಗಿದ್ದಾರೆ.

ಕಿಯಾರಾ-ಸಿದ್ದಾರ್ಥ್‌ ಮಧ್ಯೆ ಸುಮಾರು ಏಳು ವರ್ಷಗಳ ವಯಸ್ಸಿನ ಅಂತರ ಇದೆ. ಸಿದ್ಧಾರ್ಥ್ ಮಲ್ಹೋತ್ರಾ ಅವರು ಜನವರಿ 16, 1985 ರಂದು ಜನಿಸಿದರು ಮತ್ತು ಪ್ರಸ್ತುತ ಅವರ ವಯಸ್ಸು 37. ಕಿಯಾರಾ ಅಡ್ವಾಣಿ ಅವರು ಜುಲೈ 1, 1992 ರಂದು ಜನಿಸಿದರು ಮತ್ತು ಅವರು ಪ್ರಸ್ತುತ 30 ವರ್ಷ ವಯಸ್ಸಿನವರಾಗಿದ್ದಾರೆ. ಹಾಗಾಗಿ ಇವರಿಬ್ಬರ ನಡುವಿನ ವಯಸ್ಸಿನ ಅಂತರ 7 ವರ್ಷಗಳು.