Home Entertainment Kantara : ಕಾಂತಾರ ಸಿನಿಮಾಗೆ ರಿಷಬ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು?

Kantara : ಕಾಂತಾರ ಸಿನಿಮಾಗೆ ರಿಷಬ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು?

Hindu neighbor gifts plot of land

Hindu neighbour gifts land to Muslim journalist

ರಿಷಬ್ ಶೆಟ್ಟಿ ನಿರ್ದೇಶಿಸಿ ಮತ್ತು ನಟಿಸಿದ ಬ್ಲಾಕ್ ಬ್ಲಸ್ಟರ್ ಸಿನಿಮಾ ‘ಕಾಂತಾರ’ ಚಿತ್ರವು ಈಗಾಗಲೇ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗಿ ಹೋಗುತ್ತಿದೆ. ಜಗತ್ತಿನಾದ್ಯಂತ 400ಕ್ಕೂ ಹೆಚ್ಚು ಕೋಟಿ ಗಳಿಕೆ ಕನ್ನ ಚಿತ್ರರಂಗದ ಗರಿಮೆಯನ್ನು ಹೆಚ್ಚಿಸಿದೆ ಎಂದೇ ಹೇಳಬಹುದು.ಅಷ್ಟು ಮಾತ್ರವಲ್ಲದೇ, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರದ ಪಟ್ಟಿಯಲ್ಲೂ ಸೇರಿದ ಸಿನಿಮಾ ಕಾಂತಾರ.

ಸಿನಿ ಪ್ರಿಯರಿಗೆ ಈ ಸಿನಿಮಾದ, ಬಜೆಟ್ ಎಷ್ಟಿರಬಹುದು ಮತ್ತು ಯಾರ್ಯಾರು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಕುತೂಹಲ ಖಂಡಿತಾ ಇರಬಹುದು. ಮೂಲಗಳ ಪ್ರಕಾರ, ಚಿತ್ರದ ಬಜೆಟ್ 16 ಕೋಟಿ ರೂ.ಗಳಾಗಿದ್ದು, ಅದರಲ್ಲಿ ರಿಷಬ್ ಶೆಟ್ಟಿ ಅವರ ಸಂಭಾವನೆಯೇ ಕಾಲು ಭಾಗದಷ್ಟಿದೆ ಎಂದು ಹೇಳಲಾಗಿದೆ.

ಹೌದು, ಈ ಚಿತ್ರದ ಕಥೆ-ಚಿತ್ರಕಥೆ, ನಟನೆ ಮತ್ತು ನಿರ್ದೇಶನಕ್ಕೆ ರಿಷಬ್ ಶೆಟ್ಟಿ ನಾಲ್ಕು ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ನಟ ಕಿಶೋರ್ ಅವರಿಗೆ ಒಂದು ಕೋಟಿ ರೂ.ಗಳನ್ನು ಸಂಭಾವನೆಯನ್ನಾಗಿ ನೀಡಲಾಗಿದೆಯಂತೆ. ಇನ್ನು, ಅಚ್ಯುತ್ ಕುಮಾರ್ ಅವರಿಗೆ 40 ಲಕ್ಷ ರೂ. ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಮಿಕ್ಕ ಬಜೆಟ್ ಚಿತ್ರದ ಮೇಕಿಂಗ್, ಸಂಭಾವನೆ ಮತ್ತು ಪ್ರಚಾರಕ್ಕೆ ಖರ್ಚಾಗಿದೆಯಂತೆ.

ಇಷ್ಟು ಮಾತ್ರವಲ್ಲದೇ, ಕಾಂತಾರ ಸೂಪರ್ ಹಿಟ್ ಹಾಗೂ ರಿಷಭ್ ಶೆಟ್ಟಿ ಅವರ ಕೆಲಸದಿಂದ ಖುಷಿಯಾಗಿರುವ ನಿರ್ಮಾಪಕರು ಅವರಿಗೆ ಸಂಭಾವನೆ ಜತೆಗೆ ಲಾಭದಲ್ಲಿ ಒಂದಿಷ್ಟು ಪರ್ಸೆಂಟ್ ಹಣವನ್ನು ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಪರ್ಸೆಂಟೇಜ್ ಎಷ್ಟು ಮತ್ತು ಅದನ್ನೂ ಸೇರಿಸಿದರೆ ‘ಕಾಂತಾರ’ ಚಿತ್ರದಿಂದ ರಿಷಬ್ ಶೆಟ್ಟಿ ಎಷ್ಟು ಗಳಿಸಿದಂತಾಗುತ್ತದೆ ಎಂಬ ವಿಷಯ ಇನ್ನಷ್ಟೇ ಗೊತ್ತಾಗಬೇಕು.