Home Entertainment Kantara: ‘ಕಾಂತಾರ’ ಟಿಕೆಟ್​ ಬುಕಿಂಗ್​ ಆರಂಭ; ಪ್ರೀಮಿಯರ್​ ಶೋ ನೋಡಲು ಮುಗಿಬಿದ್ದ ಜನತೆ

Kantara: ‘ಕಾಂತಾರ’ ಟಿಕೆಟ್​ ಬುಕಿಂಗ್​ ಆರಂಭ; ಪ್ರೀಮಿಯರ್​ ಶೋ ನೋಡಲು ಮುಗಿಬಿದ್ದ ಜನತೆ

Hindu neighbor gifts plot of land

Hindu neighbour gifts land to Muslim journalist

ಸೆಪ್ಟೆಂಬರ್ 30 ರಂದು, ಬಹುನಿರೀಕ್ಷಿತ ಚಿತ್ರ ‘ಕಾಂತಾರ’ (Kantara) ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾದ ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ. ಸೆಪ್ಟೆಂಬರ್ 30ರಂದು ಈ ಚಿತ್ರ ರಿಲೀಸ್ ಆಗಲಿದೆಯಾದರೂ, ಒಂದು ದಿನ ಮೊದಲೇ ಅಂದರೆ ಗುರುವಾರ (ಸೆ.29) ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ (Kantara premiere show) ನಡೆಯಲಿದೆ. ಹಾಗಾಗಿ ಅದರ ಟಿಕೆಟ್‌ಗಳನ್ನು ಕೂಡ ಜನರು ಈಗಲೇ ಬುಕ್ ಮಾಡುತ್ತಿದ್ದಾರೆ.

ನಟ ರಿಷಭ್ ಶೆಟ್ಟಿ (Rishab Shetty) ಅಭಿಮಾನಿಗಳಂತು ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ‘ಕಾಂತಾರ’ ರಿಲೀಸ್ ಆಗಲಿದೆ. ಈಗಾಗಲೇ ಟ್ರೇಲರ್ ಧೂಳೆಬ್ಬಿಸಿದೆ. ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್’ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ಆ ಕಾರಣದಿಂದಲೂ ಚಿತ್ರದ ಮೇಲೆ ಹೈಪ್ ಹೆಚ್ಚಿದೆ.

‘ಕಾಂತಾರ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ರಿಷಭ್ ನಟಿಸುತ್ತಿದ್ದು, ಜೊತೆಗೆ ನಿರ್ದೇಶನವನ್ನೂ ಕೂಡಾ ಮಾಡಿದ್ದಾರೆ ರಿಷಬ್ ಶೆಟ್ಟಿ. ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಕಿಶೋರ್ ಕೂಡ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಹಾಗಾಗಿ ಅಲ್ಲಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ದೃಶ್ಯವೂ ಚಿತ್ರದಲ್ಲಿ ಇದೆ.

ಈ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದರೂ ಕೂಡ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿಲ್ಲ. ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಗುರುವಾರ ನಡೆಯಲಿರುವ ಪ್ರೀಮಿಯರ್ ಶೋನಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಚಿತ್ರಕ್ಕೆ ದೊಡ್ಡ ಬೂಸ್ಟ್ ಸಿಗಲಿದೆ.

ತಾಂತ್ರಿಕವಾಗಿ ‘ಕಾಂತಾರ’ ಚಿತ್ರ ತುಂಬ ಶ್ರೀಮಂತವಾಗಿ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್‌ನಲ್ಲಿ ಸಾಕ್ಷಿ ಸಿಕ್ಕಿದೆ. ದೊಡ್ಡ ಪರದೆ ಮೇಲೆ ಈ ಚಿತ್ರವನ್ನು ನೋಡಿ ಆಸ್ವಾದಿಸಲು ಕಾದಿರುವ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದು, ಚಿತ್ರ ಗಲ್ಲಾಪೆಟ್ಟಿಗೆ ದೋಚುವುದರಲ್ಲಿ ಎರಡು ಮಾತಿಲ್ಲ.