Home Entertainment Viral Video : ಪ್ರೇಯಸಿಯೊಂದಿಗೆ ಏಕಾಂತದಲ್ಲಿ ಗಂಡನ ಚಕ್ಕಂದ | ಹೆಂಡತಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ...

Viral Video : ಪ್ರೇಯಸಿಯೊಂದಿಗೆ ಏಕಾಂತದಲ್ಲಿ ಗಂಡನ ಚಕ್ಕಂದ | ಹೆಂಡತಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಜೋಡಿ | ಟವಲ್‌ ಸುತ್ತಿ ರಸ್ತೆಯಲ್ಲಿ ಓಡಿದ ಯುವತಿ

Hindu neighbor gifts plot of land

Hindu neighbour gifts land to Muslim journalist

ಜೀವನದ ಪ್ರಮುಖ ಘಟ್ಟವಾದ ‘ದಾಂಪತ್ಯ’ದ ಸುಂದರವಾದ ಜೀವನಕ್ಕೆ ದಂಪತಿಗಳು ಒಬ್ಬರ ಮೇಲೊಬ್ಬರ ಮೇಲೆ ಇಡುವ ನಂಬಿಕೆಯೆ ಅಡಿಪಾಯ. ಒಂದು ಬಾರಿ ನಂಬಿಕೆ ಕಡಿಮೆ ಆದರೆ ಅನುಮಾನವೆಂಬ ಹುಳ ಮೆದುಳನ್ನು ಮಾತ್ರವಲ್ಲ ಸಂಸಾರವನ್ನೆ ಹಾಳು ಮಾಡಿಬಿಡುತ್ತದೆ. ಇತ್ತೀಚೆಗೆ ಅಕ್ರಮ ಸಂಬಂಧಗಳ ಅದೆಷ್ಟೋ ಪ್ರಕರಣಗಳು ಹೊರ ಬಿದ್ದಿವೆ. ಗಂಡ ಬೇರೊಬ್ಬಳ ಜೊತೆ ಸಂಬಂಧ ಇಟ್ಟುಕೊಳ್ಳುವುದು , ಹೆಂಡತಿ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವುದು ಹೀಗೆ ಗೊತ್ತಾಗದಂತೆ ಮೋಸ ಮಾಡುವಾ ಅದೆಷ್ಟೋ ಜನರು ಇದ್ದಾರೆ. ಜೀವನ ಸಂಗಾತಿಯನ್ನು ವಂಚಿಸುವುದು ಕಾನೂನುಬಾಹಿರವಾಗಿದೆ ಮತ್ತು ಇದು ದಂಪತಿಗಳ ನಡುವೆ ಗಂಭೀರ ಕೌಟುಂಬಿಕ ಭಿನ್ನಾಭಿಪ್ರಾಯವನ್ನು ತಂದೊಡ್ಡುತ್ತದೆ.

ಈ ರೀತಿಯ ಸಂಬಂಧಗಳು ಗಂಡ ಮತ್ತು ಹೆಂಡತಿಯ ನಡುವಿನ ಹಾಲಿನಂತಹ ಸಂಸಾರದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತವೆ ಅಂತ ಗೊತ್ತಿದ್ದರೂ ಸಹ ಜನರು ಈ ತಪ್ಪನ್ನು ಮಾಡುತ್ತಿರುತ್ತಾರೆ. ಎಷ್ಟೋ ಸಂಸಾರಗಳು ಈ ವಿಷಯಕ್ಕೆ ಒಡೆದು ಹೋಗಿರುವುದನ್ನು ನಾವೆಲ್ಲಾ ಪ್ರತಿದಿನ ನೋಡುತ್ತಲೇ ಇರುತ್ತೇವೆ. ಇದೀಗ ಒಂದು ವಿಡಿಯೋ ವೈರಲ್ ಆಗುತ್ತಿದ್ದೂ, ಇದರಲ್ಲಿ ತನ್ನ ಪತಿರಾಯನ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತ್ನಿಯು ಗಂಡನಿಗೆ ಮತ್ತು ಅವನ ಗೆಳತಿಗೆ ಏನು ಮಾಡಿದಳು ಎಂಬುದನ್ನು ಸೆರೆ ಹಿಡಿಯಲಾಗಿದೆ.

ವೀಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನೊಂದಿಗೆ ಬೀದಿಯಲ್ಲಿ ನಿಂತು ಜಗಳವಾಡುತ್ತಿರುವುದನ್ನು ಪ್ರಾರಂಭದಲ್ಲಿ ನೋಡಬಹುದು. ಮಹಿಳೆ ತನ್ನ ಗಂಡನನ್ನು ಕೂಗಿದಾಗ, ಅರೆ ನಗ್ನನಾಗಿ ಹೊರಗಡೆ ಬಂದ ಗಂಡ, ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ನಂತರ, ಅವಳು ಆತನನ್ನು ದೂರಕ್ಕೆ ತಳ್ಳಿದ್ದಾಳೆ. ತನ್ನ ಮನೆಯೊಳಗೆ ಹೋಗಿ ತನ್ನ ಗಂಡನ ಬಟ್ಟೆಗಳನ್ನು ಹೊರಗೆ ಬೀಸಾಡುತ್ತಾಳೆ. ಈ ಮಧ್ಯೆ ಬೀದಿಯಲ್ಲಿ ನಡೆಯುತ್ತಿರುವ ದಂಪತಿಗಳ ಜಗಳವನ್ನು ನೆರೆಹೊರೆಯವರು ನೋಡುತ್ತಾ ನಿಂತಿರುತ್ತಾರೆ.

ಮುಂದಿನ ದೃಶ್ಯಗಳಲ್ಲಿ, ಮಹಿಳೆ ತನ್ನ ಮನೆಯ ಗೇಟಿನ ಪಕ್ಕದಲ್ಲಿ ನಿಂತು ತನ್ನ ಗಂಡನ ಮೇಲೆ ಕೂಗಾಡುತ್ತಿರುವುದನ್ನು ಕಾಣಬಹುದು. ಅದೇ ಮನೆಯ ಬಾಲ್ಕನಿಯಲ್ಲಿ ಹುಡುಗಿಯೊಬ್ಬಳು ಟವೆಲ್ ಸುತ್ತಿಕೊಂಡು ನಿಂತಿರುವುದನ್ನು ನೋಡಬಹುದು. ಆ ಗೇಟನ್ನು ಲಾಕ್ ಮಾಡುತ್ತಿರುವ ಮಹಿಳೆಯನ್ನು ಪತ್ತೆ ಹಚ್ಚಲು ಅವಳು ಕೆಳಗಡೆ ಇಣುಕಿ ನೋಡುತ್ತಾಳೆ. ದಂಪತಿಗಳು ಸ್ವಲ್ಪ ಸಮಯದವರೆಗೆ ವಾದಿಸಿದರು. ನಂತರ ಮಹಿಳೆ ಗೇಟ್ ತೆರೆದು ತನ್ನ ಮನೆಯನ್ನು ಪ್ರವೇಶಿಸಿದಳು.

ಇಲ್ಲೇ ಇದ್ದರೆ ಉಳಿಗಾಲವಿಲ್ಲವೆಂದು ಅರಿತ ಹುಡುಗಿ ಬಾಲ್ಕನಿಯಿಂದ ಇಳಿಯಲು ಪ್ರಯತ್ನಿಸುತ್ತಾಳೆ. ಆದರೆ ಅವಳು ನೆಲದ ಮೇಲೆ ಕಾಲಿಡುವುದಕ್ಕೂ ಮುಂಚಿತವಾಗಿಯೇ ಆ ಮಹಿಳೆ ಹೊರಗೆ ಬರುತ್ತಾಳೆ. ಹೇಗೋ ಮಾಡಿ ಕೊನೆಗೆ ಆ ಹುಡುಗಿ ಮನೆಯಿಂದ ಹೊರಗೆ ಓಡಿ ಹೋಗುತ್ತಾಳೆ. ಆ ಮಹಿಳೆ ಗಂಡನ ಜೊತೆ ಇದ್ದ ಹುಡುಗಿಯನ್ನು ಓಡಿಸಿಕೊಂಡು ಹೋಗುತ್ತಾಳೆ. ಆ ಹುಡುಗಿ ಟವೆಲ್ ಸುತ್ತಿಕೊಂಡು ಓಡಿ ಹೋಗುವುದನ್ನು ನಾವು ನೋಡಬಹುದು.

ಈ ವೈರಲ್ ವೀಡಿಯೋದಲ್ಲಿ ನಡೆದಿರುವ ಘಟನೆಯ ಸ್ಥಳದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಜಿಜೆ0082 ಎಂಬ ಹೆಸರಿನ ಟ್ವಿಟ್ಟರ್ ಖಾತೆಯು ಇದನ್ನು ಮರು-ಹಂಚಿಕೊಂಡಿದೆ ಎಂದು ಹೇಳಲಾಗುತ್ತಿದೆ.