Home Entertainment ಪತಿಯ ಜೊತೆ ಕಿತ್ತಾಡಿಕೊಂಡ ಪತ್ನಿ ಕೋಪದಲ್ಲಿ ಮಾಡಿದ್ದೇನು ಗೊತ್ತೇ”!!?| ಅಯ್ಯೋ ಪಾಪ ಎಂಬಂತಿದೆ ಗಂಡನ ಪರಿಸ್ಥಿತಿ

ಪತಿಯ ಜೊತೆ ಕಿತ್ತಾಡಿಕೊಂಡ ಪತ್ನಿ ಕೋಪದಲ್ಲಿ ಮಾಡಿದ್ದೇನು ಗೊತ್ತೇ”!!?| ಅಯ್ಯೋ ಪಾಪ ಎಂಬಂತಿದೆ ಗಂಡನ ಪರಿಸ್ಥಿತಿ

Hindu neighbor gifts plot of land

Hindu neighbour gifts land to Muslim journalist

ಗಂಡ ಹೆಂಡತಿಯರ ನಡುವೆ ಜಗಳ ಕಾಮನ್ ಆಗಿಯೇ ಇರುತ್ತೆ. ಆದರೆ ಕೆಲವೊಂದಿಷ್ಟು ಜನರ ಗುದ್ದಾಟ, ಕೋಪ ಉಂಡು ಮಲಗುವವರೆಗೆ ಮಾತ್ರ ಇರುತ್ತೆ. ಆದ್ರೆ ಕೆಲವೊಂದಿಷ್ಟು ಜನರ ಜಗಳ ಅತಿರೇಕಕ್ಕೆ ಹೋಗುತ್ತೆ. ಇಂತಹ ಅದೆಷ್ಟೋ ತಮಾಷೆಯ ವಿಡಿಯೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ವೈರಲ್ ಆದ ವಿಡಿಯೋದಲ್ಲಿ ಗಂಡ ಹೆಂಡತಿ ಜಗಳ ಕೊನೆಗೆ ಯಾವ ಮಟ್ಟಿಗೆ ತಲುಪಿದೆ ಎಂಬುವಂತಹ ಹಾಸ್ಯ ಭರಿತವಾದ ವಿಡಿಯೋವನ್ನು ನೋಡಬಹುದಾಗಿದೆ.ಒಟ್ಟಾರೆ ಈ ವಿಡಿಯೋ ನೋಡಿದವರಿಗೆ ಕಡೆಗೆ ಎನಿಸೋ ಪ್ರಶ್ನೆ ‘ಇಂತಹ ಗಂಡ-ಹೆಂಡತಿ ಕೂಡ ಇದ್ದಾರಾ!?’..

ಹೌದು.ಈ ವಿಡಿಯೋದಲ್ಲಿ ಪತಿ-ಪತ್ನಿ ಜಗಳ ಬೇರೊಂದು ಹಂತಕ್ಕೆ ತಲುಪಿದ್ದು,ಪತಿಯ ಜೊತೆ ಕಿತ್ತಾಡಿಕೊಂಡ ಮಹಿಳೆ ಕೋಪದಲ್ಲಿ ಹಾಸಿಗೆ ಮೇಲೆ ಇಟ್ಟಿಗೆ ಗೋಡೆಯನ್ನೇ ಕಟ್ಟಿದ್ದಾಳೆ. ಇಟ್ಟಿಗೆ ಹಾಗೂ ಸಿಮೆಂಟ್‌ ತಂದಿಟ್ಟುಕೊಂಡು ಮಹಿಳೆ ಖುದ್ದಾಗಿ ಗೋಡೆ ಕಟ್ತಾ ಇರೋ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಾನಿನ್ನು ಏನು ಮಾಡಲು ಅಸಾಧ್ಯ ಎಂಬಂತೆ,ಪತ್ನಿ ಮಾಡ್ತಿರೋ ಕೆಲಸ ನೋಡಿ ಗಂಡ ಮೌನವಾಗಿ ಕೈಕಟ್ಟಿಕೊಂಡು ಆಕೆಯಕರಾಮತ್ತನ್ನು ನೋಡುತ್ತ ಕುಳಿತಿದ್ದಾನೆ. ಈ ಫನ್ನಿ ವಿಡಿಯೋವನ್ನು rising.teching ಹೆಸರಿನ Instagram ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, ನೆಟ್ಟಿಗರು ಬಗೆಬಗೆಯಾಗಿ ಕಮೆಂಟ್‌ ಮಾಡಿದ್ದಾರೆ. ಹಾಸಿಗೆಯಲ್ಲಿ ಗೋಡೆ ಕಟ್ಟುವ ಬದಲು ಇಬ್ಬರೂ ಒಮ್ಮೆ ಮಾತನಾಡಿ ಜಗಳ ಬಗೆಹರಿಸಿಕೊಳ್ಳಿ ಅಂತ ಕೆಲವರು ಸಲಹೆ ನೀಡಿದ್ದಾರೆ. ‘ಗಂಡ ಹೆಂಡತಿ ನಡುವಿನ ಜಗಳಕ್ಕೆ ಆಧುನಿಕ ಪರಿಹಾರ’ ಎಂದು ಮತ್ತೋರ್ವ ಕಮೆಂಟ್‌ ಹಾಕಿದ್ದಾನೆ. ಒಟ್ಟಾರೆ ಇವರಿಬ್ಬರ ಜಗಳ ಉಳಿದವರಿಗೆ ಒಮ್ಮೆ ನಗು ತರಿಸಿದ್ದು ಅಂತೂ ಸುಳ್ಳಲ್ಲ..