Home Breaking Entertainment News Kannada ಮೈ ಕೊರೆಯುವ ಚಳಿಯಲ್ಲಿ ಹೆಣ್ಣೋರ್ವಳ ಸಾಧನೆ ಅದ್ಭುತ | ಉರಿಯೋ ಬಾಣವನ್ನು ತಲೆಕೆಳಗಾಗಿ ಬಿಡೋ ರೀತಿಗೆ...

ಮೈ ಕೊರೆಯುವ ಚಳಿಯಲ್ಲಿ ಹೆಣ್ಣೋರ್ವಳ ಸಾಧನೆ ಅದ್ಭುತ | ಉರಿಯೋ ಬಾಣವನ್ನು ತಲೆಕೆಳಗಾಗಿ ಬಿಡೋ ರೀತಿಗೆ ನೆಟ್ಟಿಗರಿಂದ ಭಾರೀ ಪ್ರಶಂಸೆ

Hindu neighbor gifts plot of land

Hindu neighbour gifts land to Muslim journalist

ಮನಸಿದ್ದರೆ ಮಾರ್ಗ ಎಂಬ ಮಾತಿನಂತೆ ಯಾವುದೇ ಸಾಧನೆ ಮಾಡಲು ಮನಸ್ಸು ಮತ್ತು ಪ್ರಯತ್ನ ಇರಬೇಕು. ಒಂದಲ್ಲಾ ಒಂದು ದಿನ ನಮ್ಮ ಪ್ರಯತ್ನ ಸಫಲ ಆಗುತ್ತದೆ. ಹಾಗೆಯೇ ಇಲ್ಲೊಬ್ಬಳು ಮಹಿಳೆಯ ಚಾಣಕ್ಯತೆ ನೋಡಿ.

ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ತಮ್ಮ ಸಾಹಸ ಪ್ರದರ್ಶನ ಮಾಡುತ್ತಿರುವುದು ನಾವು ನೋಡಬಹುದು. ಹಾಗೆಯೇ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಈ ತರುಣಿ ಹಿಮನಾಡಿನಲ್ಲಿ ಬಿಲ್ಲುಗಾರಿಕೆ ಮಾಡುತ್ತಿದ್ದಾಳೆ. ಹೌದು ಒರಿಸ್ಸಾ ಕೆಲ್ಲಿ ಎಂಬ ಬಿಲ್ಲು ಪರಿಣತಿ ಹೊಂದಿದ ಈಕೆ ಬಾಣಕ್ಕೆ ಲೈಟರ್​ನಿಂದ ಬೆಂಕಿ ಹೊತ್ತಿಸುತ್ತಾಳೆ. ನಂತರ ಹ್ಯಾಂಡ್​ಸ್ಟ್ಯಾಂಡ್​ ಮೇಲೆ ತಲೆಕೆಳಗಾಗಿ ನಿಲ್ಲುತ್ತಾಳೆ. ಕಾಲಬೆರಳಿನಲ್ಲಿ ಹಿಡಿದುಕೊಂಡ ಬಾಣವನ್ನು ಗುರಿ ಇಟ್ಟು ಹೊಡೆಯುತ್ತಾಳೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಈಕೆಯ ಸಾಹಸವನ್ನು ಎಲ್ಲರೂ ಮೆಚ್ಚಲೇ ಬೇಕು.

ಈಗಾಗಲೇ ಈ ವಿಡಿಯೋ ಅನ್ನು ಹಲವು ಮಿಲಿಯನ್​ ಜನರು ವೀಕ್ಷಣೆ ಮಾಡಿದ್ದಲ್ಲದೆ ಆಕೆಯನ್ನು ಹಾಡಿ ಹೊಗಳಿದ್ದು ಇಂತಹವರಿಂದ ಇನ್ನೂ ಹೆಚ್ಚಿನ ಸಾಧನೆಗೆ ನಮ್ಮಲಿ ಸ್ಫೂರ್ತಿ ತುಂಬಿದೆ ಎಂದಿದ್ದಾರೆ. ನೀವು ಸಹ ಈ ವೀಡಿಯೋ ಒಮ್ಮೆ ನೋಡಲೇ ಬೇಕು.