Home Entertainment Bigg Boss season 10:ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ತನಿಷಾಗೆ ಐ ಲವ್ ಯೂ ಎಂದ...

Bigg Boss season 10:ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ತನಿಷಾಗೆ ಐ ಲವ್ ಯೂ ಎಂದ ವರ್ತೂರು ಸಂತೋಷ್ !! ತನಿಷಾ ರಿಯಾಕ್ಷನ್ ಹೇಗಿತ್ತು? ಹೇಳಿದ್ದೇನು ?!

Bigg Boss season 10

Hindu neighbor gifts plot of land

Hindu neighbour gifts land to Muslim journalist

Bigg Boss Kannada season 10: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಕಡಿಮೆ ಆಗುತ್ತಿದ್ದ ಹಾಗೇ ಕಾಂಪಿಟೇಷನ್‌ ಟಫ್ ಆಗುತ್ತಿದೆ. ಈ ನಡುವೆ, ಬಿಗ್ ಬಾಸ್ (Bigg Boss Kannada Season 10 ) ಕಾರ್ಯಕ್ರಮದಲ್ಲಿ ಸ್ಪರ್ಧಿಗಳು 10ನೆಯ ವಾರಕ್ಕೆ ಕಾಲಿಟ್ಟಿದ್ದಾರೆ. ಸ್ಪರ್ಧಿಗಳ ನಡುವೆ ಕಿತ್ತಾಟ, ಮುನಿಸುಗಳ ನಡುವೆ ಬಿಗ್ ಬಾಸ್ ಹೊಸ ಟಾಸ್ಕ್ ನೀಡಿ ಪ್ರೇಕ್ಷಕರಿಗೆ ಮನರಂಜನೆ(Entertainment)ನೀಡುತ್ತಿದ್ದಾರೆ.

ಬಿಗ್ ಬಾಸ್ ಮನೆ(BBK 10)ಈಗ ಪ್ರಾಥಮಿಕ ಶಾಲೆಯ ರೀತಿಯಲ್ಲಿ ಬದಲಾಗಿದೆ. ಕಾರ್ತಿಕ್, ವಿನಯ್, ಸಂಗೀತಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಅವಿನಾಶ್, ಸಿರಿ, ಶಾಲಾ ಮಕ್ಕಳಾಗಿ ಮನರಂಜನೆ ನೀಡಿದ್ದಾರೆ. ದೊಡ್ಮನೆ ಸ್ಪರ್ಧಿಗಳನ್ನು ಮತ್ತೆ ಬಾಲ್ಯದ ನೆನಪುಗಳನ್ನ ಮರುಕಳಿಸಿರುವುದು ಸುಳ್ಳಲ್ಲ. ಬಿಗ್ ಬಾಸ್ ಮನೆಯಲ್ಲಿ ಶಾಲೆಯ ಯೂನಿಫಾರಂ ತೊಟ್ಟು ತರಲೆ ತುಂಟಾಟಗಳನ್ನು ಮಾಡುತ್ತಿದ್ದಾರೆ. ಈ ವಾರದ ಆಟದಲ್ಲಿ ಮೈಕಲ್, ಪವಿ, ಪ್ರತಾಪ್ ಹಾಗೂ ತನಿಷಾ ಟೀಚರ್ ಆಗಿದ್ದರೆ, ಶಾಲೆಯಲ್ಲಿ ಕ್ಲಾಸ್ ತೆಗೆದುಕೊಳ್ಳಲು ಬಂದಾಗ ತನಿಷಾ ಟೀಚರ್ ಅನ್ನು ಕಾಲೆಳೆಯುವ ಸಣ್ಣ ಅವಕಾಶವನ್ನು ಕೂಡ ಶಾಲಾ ಮಕ್ಕಳು ಬಿಟ್ಟುಕೊಟ್ಟಿಲ್ಲ. ಒಟ್ಟಿನಲ್ಲಿ ತನಿಷಾ ಅವರ ಮಾತನ್ನು ಕೇಳದೇ ಮಕ್ಕಳೆಲ್ಲ ಟೀಚರ್ಗೆ ತರಲೆ ತುಂಟಾಟ ನಡೆಸಿ ಟೀಚರ್ ಗೆ ಕಾಟ ಕೊಟ್ಟಿದ್ದಾರೆ.

ಕ್ಲಾಸ್ ನಲ್ಲಿ ತನಿಷಾ ಅವರಿಗೆ ವರ್ತೂರು ಸಂತೋಷ್, ನೀವು ತುಂಬಾ ಚೆನ್ನಾಗಿ ಕಾಣ್ತಿದ್ದೀರಾ ಮಿಸ್ ಎಂದಿದ್ದು, ಆಗ ತನಿಷಾ ಬೇಂಚ್ ಮೇಲೆ ನಿಲ್ಲುವಂತೆ ಶಿಕ್ಷೆ ನೀಡಿದ್ದಾರೆ. ನನಗೆ ಕಾಲು ನೋವು ಎಂದು ವರ್ತೂರು ಹೇಳಿ ಶಿಕ್ಷೆಯಿಂದ ಬಚಾವ್ ಆಗಲು ಮುಂದಾಗಿದ್ದಾರೆ. ಪಾಠ ಮಾಡುತ್ತಿದ್ದ ತನಿಶಾ ಟೀಚರ್ ಏಕಾಏಕಿ ಪ್ರೀತಿ ಪಾಠ ಶುರು ಮಾಡಿದ್ದು, ವರ್ತೂರು ಸಂತೋಷ್ ಸ್ಲೇಟ್ ನಲ್ಲಿ ಐ ಲವ್ ಯೂ ಎಂದು ಬರೆದಿದು ತನಿಷಾ ಟೀಚರ್ ಗೆ ನೀಡಿ, ಐ ಲವ್ ಯೂ ಎಂದು ಹೇಳಿದ್ದಾರೆ. ಕಳೆದ ಕೆಲ ವಾರಗಳಿಂದ ಗಲಾಟೆ, ಜಗಳದಲ್ಲಿ ಮುಳುಗಿದ್ದ ದೊಡ್ಮನೆ ಸ್ಪರ್ಧಿಗಳು ಈ ವಾರ ಮಕ್ಕಳಾಗಿ ಬಾಲ್ಯದ ನೆನಪು ಗಳ ಜೊತೆ ಆಟ ಆಡುತ್ತ ಪ್ರೇಕ್ಷಕರನ್ನು ರಂಜಿಸುವುದು ಖಚಿತ ಎನ್ನಲಾಗಿದೆ.

https://www.instagram.com/reel/C0vH2JESRC1/?igshid=MzRlODBiNWFlZA==

ಇದನ್ನೂ ಓದಿ: EPFO Update: ಜಾಬ್ ಚೇಂಜ್ ಮಾಡಿದ್ದೀರಾ?! ಹಾಗಿದ್ರೆ ತಕ್ಷಣ EPFಗೆ ಸಂಬಂಧಿಸಿದ ಈ ಕೆಲಸ ಮಾಡಲೇ ಬೇಕು !