Home Entertainment Anurag Kashyap: ಬ್ರಾಹ್ಮಣರ ಬಗ್ಗೆ‌ ವಿವಾದಾತ್ಮಕ ಹೇಳಿಕೆ-ಕ್ಷಮೆ ಕೇಳಿದ ನಿರ್ದೇಶಕ ಅನುರಾಗ್‌ ಕಶ್ಯಪ್!

Anurag Kashyap: ಬ್ರಾಹ್ಮಣರ ಬಗ್ಗೆ‌ ವಿವಾದಾತ್ಮಕ ಹೇಳಿಕೆ-ಕ್ಷಮೆ ಕೇಳಿದ ನಿರ್ದೇಶಕ ಅನುರಾಗ್‌ ಕಶ್ಯಪ್!

Hindu neighbor gifts plot of land

Hindu neighbour gifts land to Muslim journalist

Anurag Kashyap: ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಸಿಬಿಎಫ್‌ಸಿ ಮತ್ತು ಬ್ರಾಹನ ಸಮುದಾಯದ ಮೇಲೆ ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌ ಮಾತಿನ ಮೂಲಕ ವಿವಾದ ಎಬ್ಬಿಸಿದ್ದರು. ಫುಲೆ ಸಿನಿಮಾಗೆ ಬ್ರಾಹ್ಮಣ ಸಮುದಾಯ ವಿರೋಧ ವ್ಯಕ್ತಪಡಿಸಿದೆ. ಈ ಕಾರಣಕ್ಕೆ ಸಿಬಿಎಫ್‌ಸಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ್ದು ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಲಾಗಿದೆ. ಈ ಕಾರಣಕ್ಕೆ ಅನುರಾಗ್‌ ಕಶ್ಯಪ್‌ ಸಿಟ್ಟಾಗಿದ್ದಾರೆ.

ಅಲ್ಲದೆ ಅವರ ಪೋಸ್ಟ್​ಗೆ ಬಂದ ಕಮೆಂಟ್ ಒಂದಕ್ಕೆ ‘ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೀನಿ’ ಎಂದು ಪ್ರತಿಕ್ರಿಯೆ ನೀಡಿದ್ದರು. ಇದೀಗ ತಮ್ಮ ಪೋಸ್ಟ್‌ಗೆ ಕ್ಷಮೆ ಕೇಳಿರುವ ಅನುರಾಗ್‌ ಕಶ್ಯಪ್‌, ʼ ಇದು ನನ್ನ ಕ್ಷಮಾಪಣೆ, ನಾನು ಹೇಳಿದ ಮಾತುಗಳಿಗೆ ಅಲ್ಲ ಬದಲಿಗೆ ನನ್ನ ಪೋಸ್ಟ್‌ನಲ್ಲಿರುವ ಒಂದು ಸಾಲನ್ನು ಮಾತ್ರ ಎತ್ತಿಕೊಂಡು ಅದನ್ನು ದ್ವೇಷ ಪ್ರಸರಣಕ್ಕೆ ಬಳಸಿಕೊಳ್ಳುವ ಕಾರಣಕ್ಕೆ. ಭಾರಿ ಸಂಸ್ಕಾರವಂತರು ಎನಿಸಿಕೊಂಡ ಸಮುದಾಯದವರು ಹೆಂಡತಿ, ಮಗಳು, ಗೆಳೆಯರ ಅತ್ಯಾಚಾರ, ಕೊಲೆಯ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಯಾವ ಹೇಳಿಕೆಯೂ ಈ ರೀತಿಯ ಬೆದರಿಕೆಗಳಿಗೆ ಅರ್ಹವಲ್ಲ. ಹೇಳಿರುವ ಮಾತುಗಳನ್ನು ವಾಪಸ್ ಪಡೆಯಲು ಆಗುವುದಿಲ್ಲ, ಅದನ್ನು ನಾನು ಪಡೆಯುವುದೂ ಇಲ್ಲ’ ಎಂದಿದ್ದಾರೆ.

‘ನಾನು ಹೇಳಿರುವ ಮಾತಿಗೆ ಬೇಕಾದರೆ ನನ್ನ ಬೈಯ್ಯಿರಿ ಆದರೆ ಕುಟುಂಬದವರನ್ನು ಏಕೆ ಎಳೆದು ತರುತ್ತೀರಿ. ಬ್ರಾಹ್ಮಣರೇ, ಪಾಪ ಮಹಿಳೆಯರನ್ನು ಬಿಟ್ಟುಬಿಡಿ, ಇಷ್ಟು ಸಂಸ್ಕಾರ ಶಾಸ್ತ್ರಗಳಲ್ಲಿಯೂ ಇದೆ. ಕೇವಲ ಮನುವಾದದಲ್ಲಿ ಇಲ್ಲ ಅಷ್ಟೆ. ನೀವು ಎಂಥಹಾ ಬ್ರಾಹ್ಮಣರು ನೀವೇ ನಿರ್ಧರಿಸಿಕೊಳ್ಳಿ. ಉಳಿದಂತೆ ನನ್ನ ಕಡೆಯಿಂದ ಕ್ಷಮೆ ಇರಲಿ’ ಎಂದಿದ್ದಾರೆ.