Home Entertainment BBK9 : ಕರಾವಳಿ ಚೆಲುವ ಬಿಗ್‌ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿಯ ಕ್ಲೋಸ್‌ ಫ್ರೆಂಡ್‌ ಸಾನ್ಯಾ ಬದಲಾಗಿದ್ದಾರಾ...

BBK9 : ಕರಾವಳಿ ಚೆಲುವ ಬಿಗ್‌ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿಯ ಕ್ಲೋಸ್‌ ಫ್ರೆಂಡ್‌ ಸಾನ್ಯಾ ಬದಲಾಗಿದ್ದಾರಾ ? ವಿನ್ನರ್‌ ಕಡೆಯಿಂದ ಬಂತು ಶಾಕಿಂಗ್‌ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

‘ಬಿಗ್ ಬಾಸ್​ ಕನ್ನಡ ಸೀಸನ್ 9’ರ (BBK 9) ಫಿನಾಲೆ ಮುಗಿದಿದೆ. ಆದರೂ ಜನ ಇನ್ನೂ ಆ ಗುಂಗಿನಿಂದ ಹೊರಬಂದಿಲ್ಲ. ಕರಾವಳಿಯ ಚೆಲುವ, ಮುದ್ದು ಮುಖದ ನಟ ರೂಪೇಶ್‌ ಶೆಟ್ಟಿ ದೊಡ್ಮನೆಯ ವಿನ್ನರ್‌ ಆಗಿದ್ದು ಕರಾವಳಿ ಜನತೆಗೆ ಹಾಗೂ ಯಾರೆಲ್ಲ ರೂಪೇಶ್‌ ಶೆಟ್ಟಿಗೆ ವೋಟ್‌ ಮಾಡಿದ್ದಾರೋ ಅವರಿಗೆಲ್ಲ ಖುಷಿಯ ವಿಷಯ ಎಂದೇ ಹೇಳಬಹುದು. ದೊಡ್ಮನೆಯಿಂದ ಹೊರಬಂದ ವಿನ್ನರ್ ರೂಪೇಶ್ ಶೆಟ್ಟಿ ಅವರನ್ನು ಫ್ಯಾನ್ಸ್ ಅದ್ದೂರಿಯಾಗಿ ಸ್ವಾಗತಿಸಿ, ತಮ್ಮ ಭರಪೂರ ಅಭಿನಂದನೆ ತಿಳಿಸಿದ್ದಾರೆ. ಬಿಬಿಕೆ ಮನೆಯಿಂದ ಹೊರ ಬಂದ ಮೇಲೆ ರೂಪೇಶ್‌ ಶೆಟ್ಟಿಗೆ ಹಲವು ಆಫರ್​ಗಳು ಬಂದಿವೆ. ರೂಪೇಶ್ ಶೆಟ್ಟಿ (Roopesh Shetty) ಅವರು ಬಿಗ್‌ಮನೆಯಿಂದ ಹೊರ ಬಂದ ಮೇಲೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ ಹಲವು ವಿಷಯಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರ ಹಾಕಿದ್ದಾರೆ. ವಿಶೇಷವಾಗಿ ಸಾನ್ಯಾ ಐಯ್ಯರ್ ಜತೆಗಿನ ಫ್ರೆಂಡ್​ಶಿಪ್ ಕುರಿತು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್​ನಲ್ಲಿ ರೂಪೇಶ್ ಹಾಗೂ ಸಾನ್ಯಾ ಐಯ್ಯರ್ ಮೊದಲ ಭೇಟಿ ಆಗಿದ್ದು, ನಂತರ ಇಬ್ಬರ ಮಧ್ಯೆ ಗಾಢ ಸ್ನೇಹ ಬೆಳೆದಿದ್ದು ಬಿಗ್‌ ಬಾಸ್‌ ಫಾಲೋ ಮಾಡೋರಿಗೆ ಗೊತ್ತೇ ಇದೆ. ಹಲವು ವಿಚಾರಗಳಲ್ಲಿ ಇಬ್ಬರ ಮಧ್ಯೆ ಸಾಮ್ಯತೆ ಇದ್ದಿದ್ದರಿಂದ ಕ್ಲೋಸ್ ಆದರು. ಇವರ ಮಧ್ಯೆ ಆಪ್ತತೆ ಬೆಳೆಯಿತು. ಟಿವಿ ಸೀಸನ್​​ಗೆ ಈ ಇಬ್ಬರೂ ರಾಕೇಶ್‌ ಅಡಿಗೆ ಹಾಗೂ ಆರ್ಯವರ್ಧನ್‌ ಗುರೂಜಿ ಜೊತೆ ಸೇರಿ ಸೆಲೆಕ್ಟ್‌ ಆದರು. ಇವರು ಹಲವು ವಾರ ದೊಡ್ಮನೆಯಲ್ಲಿ ಒಟ್ಟಾಗಿ ಕಾಲ ಕಳೆದಿದ್ದಾರೆ. ಟಿವಿ ಸೀಸನ್​ನ ಮಧ್ಯದಲ್ಲಿ ಸಾನ್ಯಾ ಐಯ್ಯರ್ ಔಟ್ ಆದರು. ಇದು ರೂಪೇಶ್​ಗೆ ಸಾಕಷ್ಟು ಬೇಸರ ಮೂಡಿಸಿತ್ತು.

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಮನಸ್ಥಿತಿ ಬದಲಾಗಬಹುದು. ಈ ವಿಚಾರದಲ್ಲಿ ರೂಪೇಶ್​ ಶೆಟ್ಟಿಗೆ ಆತಂಕ ಕಾಡಿತ್ತು. ಸಾನ್ಯಾ ಐಯ್ಯರ್ ಅವರು ಬದಲಾಗಬಹುದು ಎಂದು ರೂಪೇಶ್ ಶೆಟ್ಟಿ ಆತಂಕ ಹೊರಹಾಕಿದ್ದರು. ಸಾನ್ಯಾ ದೊಡ್ಮನೆಯಿಂದ ಹೊರ ಬಂದ ನಂತರ ಬದಲಾದರಾ? ಈ ಬಗ್ಗೆ ರೂಪೇಶ್ ಅವರು ಮಾಧ್ಯಮವೊಂದರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. “ಸಾನ್ಯಾ ಐಯ್ಯರ್ ಬದಲಾಗಿಲ್ಲ. ನಮ್ಮ ಮಧ್ಯೆ ಶುದ್ಧ ಸ್ನೇಹವಿದೆ. ಮನಸ್ಸಿಂದ ಫ್ರೆಂಡ್​ಶಿಪ್ ಮಾಡಿದ್ರೆ ಅವರು ಯಾವಾಗಲೂ ಬದಲಾಗಲ್ಲ. ಬಿಗ್ ಬಾಸ್​ ಫಿನಾಲೆ ಮುಗಿದ ನಂತರ ಇಬ್ಬರೂ ಭೇಟಿ ಆದೆವು. ಸದ್ಯ ನನ್ನ ಕೈಯಲ್ಲಿ ಮೊಬೈಲ್ ಇಲ್ಲ. ಹೀಗಾಗಿ, ಸಾನ್ಯಾ ಜತೆ ಸಂಪರ್ಕ ಸಾಧಿಸೋಕೆ ಸಾಧ್ಯವಾಗಿಲ್ಲ. ನಾನು ಗೆದ್ದಿರೋದು ಸಾನ್ಯಾಗೆ ಖುಷಿ ನೀಡಿದೆ’ ಎಂದಿದ್ದಾರೆ ರೂಪೇಶ್ ಶೆಟ್ಟಿ.