Home Entertainment Bigg boss kannada: ಬಿಗ್ ಬಾಸ್ ಮನೆಯಲ್ಲಿ ಕದ್ದು ಮೊಬೈಲ್ ಬಳಕೆ ?! ವೈರಲ್ ಆಯ್ತು...

Bigg boss kannada: ಬಿಗ್ ಬಾಸ್ ಮನೆಯಲ್ಲಿ ಕದ್ದು ಮೊಬೈಲ್ ಬಳಕೆ ?! ವೈರಲ್ ಆಯ್ತು ಫೋಟೋಸ್ !!

Bigg boss kannada

Hindu neighbor gifts plot of land

Hindu neighbour gifts land to Muslim journalist

Bigg boss kannada: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಹೊರಗಿನಿಂದ ಯಾರ ಸಂಪರ್ಕವೂ ಇಲ್ಲದೆ, ಮೊಬೈಲ್ ಯೂಸ್ ಇಲ್ಲದೆ 90 ಅಥವಾ ಭರ್ತಿ 100 ದಿನ ಇರುವುದು ನಿಯಮ. ಅಂದರೆ ಹೊರ ಜಗತ್ತಿನ ಯಾವುದೇ ಕನೆಕ್ಷನ್ ಅವರಿಗೆ ಇರುವದಿಲ್ಲ. ಆದರೆ ಕನ್ನಡ ಬಿಗ್ ಬಾಸ್(Bigg boss kannada) ಸೀಸನ್ 10 ರ ಮನೆಯೊಳಗೆ ಸ್ಪರ್ಧಿಗಳು ಮೊಬೈಲ್ ಫೋನ್ ಬಳಸುತ್ತಿದ್ದಾರಾ? ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾಗಳಲ್ಲಿ ನಿನ್ನೆಯಿಂದ ಭಾರೀ ಸದ್ದುಮಾಡುತ್ತಿದೆ. ಈ ಕುರಿತು ಫೋಟೋ ಕೂಡ ಎಲ್ಲೆಡೆ ವೈರಲ್ ಆಗಿದೆ.

ಹೌದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಫೋಟೋ ಭಾರೀ ಚರ್ಚೆ ಹುಟ್ಟುಹಾಕಿದ್ದು, ಆ ಫೋಟೋದಲ್ಲಿ ಮೊಬೈಲ್ ಚಾರ್ಜರ್ ಗಳು ಕಂಡುಬಂದಿದೆ. ಅಂದಹಾಗೆ ಸಂಗೀತಾ ಶೃಂಗೇರಿ ಅವರು ಪೌಡರ್ ರೂಮ್‌ನಲ್ಲಿ ನಮ್ರತಾ ಗೌಡ ಜೊತೆ ಕೂತು ಮಾತನಾಡುವಾಗ ಮೊಬೈಲ್ ಚಾರ್ಜರ್‌ ಒಂದು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಮೊಬೈಲ್ ಬಳಕೆ ಮಾಡಲಾಗ್ತಿದೆ ಅಂತ ಕೆಲ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.ಟ್ರೋಲ್​ ಪೇಜ್​ಗಳಂತೂ ಈ ಫೋಟೋವನ್ನು ಎಲ್ಲೆಡೆ ವೈರಲ್​ ಮಾಡುತ್ತಿವೆ.

ಇನ್ನು ಆ ಫೋಟೋದಲ್ಲಿ ಮೇಲ್ನೋಟಕ್ಕೆ ಒನ್‌ಪ್ಲಸ್ ಅಥವಾ Oppo ಮೊಬೈಲ್ ಚಾರ್ಜರ್ ನೋಡಿದ ಹಾಗೆ ಆಗುತ್ತದೆ. ಅದು ಮೊಬೈಲ್ ಚಾರ್ಜರ್ ಅಥವಾ ಟ್ರಿಮ್ಮರ್, ಸ್ಟ್ರೇಟನರ್ ಚಾರ್ಜರ್? ಅಂತ ವೀಕ್ಷಕರು ಅನುಮಾನ ಪಡುತ್ತಿದ್ದಾರೆ. ಇದಕ್ಕೆ ಸ್ವತಃ ಬಿಗ್ ಬಾಸ್ ಸ್ಪರ್ಧಿಗಳು ಅಥವಾ ಬಿಗ್ ಬಾಸ್ ಆಯೋಜಕರು ಉತ್ತರ ನೀಡಬೇಕಿದೆ. ಒಟ್ಟಿನಲ್ಲಿ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ವೀಕ್ಷಕರಂತೂ ಫುಲ್ ಗೊಂದಲದಲ್ಲಿದ್ದಾರೆ
ಈ ಕುರಿತು ಬಿಗ್ ಬಾಸ್ ಇನ್ನೂ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.

ಇದನ್ನು ಓದಿ: Hair Care: ಚಿಕ್ಕ ವಯಸ್ಸಿಗೇ ತಲೆ ಕೂದಲು ತುಂಬಾ ಉದುರುತ್ತಾ ಇದ್ಯಾ? ಹಾಗಾದ್ರೆ ಮೊದಲು ಈ ಟಿಪ್ಸ್​ ಫಾಲೋ ಮಾಡಿ