Home Entertainment BIGG BOSS Kannada OTT : ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಫ್ಲರ್ಟ್ ಮಾಡುವೆ, ಮನೆಯಾಚೆ...

BIGG BOSS Kannada OTT : ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಫ್ಲರ್ಟ್ ಮಾಡುವೆ, ಮನೆಯಾಚೆ ಅವರೆಲ್ಲ ತಂಗಿಯರಾದರೂ ಪರ್ವಾಗಿಲ್ಲ – ರಾಕೇಶ್ ಅಡಿಗ

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಮನೆ ಈಗ ಫ್ಲರ್ಟ್ ಮಯವಾಗಿದೆ. ಬಹುಶಃ ಫ್ಲರ್ಟ್ ಮಾಡ್ತಾ ಇದ್ದರೆ ಕ್ಯಾಮೆರಾ ಹೆಚ್ಚು ಫೋಕಸ್ ಆಗುತ್ತೆ ಅಂತ ಸ್ಪರ್ಧಿಗಳ ಅನಿಸಿಕೆ ಇರಬಹುದು. ಇಲ್ಲಿ ರಾಕೇಶ್ ಅಡಿಗ ಅವರು ನಾನು ಫ್ಲರ್ಟ್ ಮಾಡ್ತೀನಿ ಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಹಾಗೂ ಅದರಂತೆ ನಡೆದುಕೊಂಡಿದ್ದಾರೆ. ಮೊದಲಿಗೆ ಸ್ಫೂರ್ತಿ ಗೌಡ, ಸಾನ್ಯಾ ಅಯ್ಯರ್ ಜೊತೆ ಫ್ಲರ್ಟ್ ಮಾಡುತ್ತಿದ್ದ ರಾಕೇಶ್ ಅಡಿಗ ಅವರ ಮನಸ್ಸು ಕಿರಣ್ ಯೋಗೇಶ್ವರ್ ಮೇಲೆ ಬಂದಿದೆ. ಆದರೆ ಕಿರಣ್ ಅವರು ರಾಕೇಶ್ ಮಾತನ್ನು ಕ್ಯಾರೇ ಮಾಡೋದಿಲ್ವಂತೆ.

ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಫ್ಲರ್ಟ್ ಮಾಡಿಕೊಂಡು ಇರುವೆ, ಮನೆಯಿಂದಾಚೆ ಅವರೆಲ್ಲ ತಂಗಿಯರಾದರೂ ಸಮಸ್ಯೆಯಿಲ್ಲ ಎಂದು ರಾಕೇಶ್ ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೇ, ಸ್ಪೂರ್ತಿ, ರಾಕೇಶ್ ನನ್ನ ಹುಡುಗ ಎಂದು ಹೇಳುತ್ತಾ “ನನಗೆ ಯಾರ ಮೇಲೂ ಲವ್ ಆಗಲ್ಲ, ಲವ್ ಹುಟ್ಟಿಕೊಂಡರೂ ಕೂಡ ನಾನಾಗಿಯೇ ಹೇಳಿಕೊಳ್ಳಲ್ಲ, ಹುಡುಗನೇ ನನ್ನ ಹತ್ತಿರ ಬಂದು ಲವ್ ಮಾಡುವ ವಿಚಾರ ಹೇಳಬೇಕು” ಎಂದಿದ್ದಾರೆ. ಸಾಕಷ್ಟು ಬಾರಿ ಪರೋಕ್ಷವಾಗಿ ಯಾರಾದರೂ ಬಂದು ನನ್ನ ಲವ್ ಮಾಡಲಿ, ಎನ್ನುವರ್ಥದಲ್ಲಿ ಸ್ಫೂರ್ತಿ ಹೇಳಿಕೆ ನೀಡಿದ್ದರು. ಇದು ಬಿಗ್ ಬಾಸ್ ಸ್ಪರ್ಧಿ ಅಕ್ಷತಾ, ನಂದಿನಿ ಗಮನಕ್ಕೆ ಬಂದಿತ್ತು.

ಸ್ಪೂರ್ತಿ ಕೂಡಾ ರಾಕೇಶ್ ಅವರ ಪ್ರೀತಿಯನ್ನು ಒಪ್ಪಿಕೊಳ್ಳುವ ಬಗ್ಗೆ ಮಾತನಾಡುತ್ತಾ, “ರಾಕೇಶ್ ಎರಡು ದೋಣಿ ಮೇಲೆ ಕಾಲಿಡುತ್ತಾರೆ. ಒಂದು ದೋಣಿ ಮೇಲೆ ಕಾಲಿಟ್ಟರೆ ಯೋಚನೆ ಮಾಡಬಹುದಿತ್ತು” ಎಂಬ ಮಾತನ್ನು. ಈಗ ಕಿರಣ್ ಅವರ ಜೊತೆ ಫ್ಲರ್ಟ್ ಮಾಡುವತ್ತ ರಾಕೇಶ್ ಗಮನ ಹರಿಸಿದ್ದಾರೆ.

ಒಟ್ಟಿನಲ್ಲಿ ಬಿಗ್ ಬಾಸ್ ಶೋನಲ್ಲಿ ಈ ಬಾರಿ ಫ್ಲರ್ಟ್ ಮಾತುಗಳು ಹೆಚ್ಚೇ ಇವೆ. ಇಂದು ಎಲಿಮಿನೇಶನ್ ಪ್ರಕ್ರಿಯೆ ನಡೆಯಲಿದೆ.ಯಾರು ಬಿಗ್ ಬಾಸ್ ಶೋನಿಂದ ಹೊರಹೋಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.