Home Entertainment ದಿವ್ಯಾ ಉರುಡುಗಾಳ ಅರ್ಧಂಬರ್ಧ ಪ್ರೀತಿ ಅಂತೆ!

ದಿವ್ಯಾ ಉರುಡುಗಾಳ ಅರ್ಧಂಬರ್ಧ ಪ್ರೀತಿ ಅಂತೆ!

Hindu neighbor gifts plot of land

Hindu neighbour gifts land to Muslim journalist

ದಿವ್ಯಾ ಉರುಡುಗ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ಪ್ರತಿಭಾನ್ವಿತ ನಟಿ. ಕಿರುತೆರೆಯಲ್ಲಿ ಕೆಲವು ಸೀರಿಯಲ್‌ಗಳ ಮೂಲಕ ಮನೆಮಾತಾಗಿರುವ ದಿವ್ಯಾ `ಹುಲಿರಾಯ’ ಚಿತ್ರದಿಂದ ಚಂದನವನದಲ್ಲಿ ಸಿನಿಪಯಣ ಆರಂಭಿಸಿದರು.

ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ದಿವ್ಯಾ, ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದರು. ಶಿಕ್ಷಣಕ್ಕಾಗಿ ಮಂಗಳೂರಿನಲ್ಲಿದ್ದಾಗ ಇವರಿಗೆ ಕಿರುತೆರೆಯಲ್ಲಿ ನಟಿಸಿಲು ಆಫರ್ ಬಂತು. ಕಿರುತೆರೆಯಲ್ಲಿ ಚಿಟ್ಟೆ ಹೆಜ್ಜೆ',ಅಂಬಾರಿ’,ಖುಷಿ',ಓಂ ಶಕ್ತಿ ಓಂ ಶಾಂತಿ’ ಸೀರಿಯಲ್‌ಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಉದಯ ಟಿವಿಯಲ್ಲಿ ಪ್ರಸಾರವಾದ `ಸೂಪರ್ ಕಬ್ಬಡ್ಡಿ’ ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು.

2017ರಲ್ಲಿ ತೆರೆಕಂಡ ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ' ಚಿತ್ರದಿಂದ ಸಿನಿಪಯಣ ಆರಂಭಿಸಿದ ದಿವ್ಯಾ ಈ ಚಿತ್ರದ ನಟನೆಗಾಗಿ ಸೈಮಾಗೆ ನಾಮ ನಿರ್ದೇಶನಗೊಂಡಿದ್ದರು. ರಾಜಕೀಯ ಆಧಾರಿತ ‘ಧ್ವಜ’ ಮತ್ತು `ಫೇಸ್ 2 ಪೇಸ್’ ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಬಿಗ್ ಬಾಸ್

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿದ್ದ ದಿವ್ಯಾ ಉರುಡುಗ, ಇದೀಗ ಮತ್ತೆ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಪ್ರವೇಶ ಮಾಡಿದ್ದಾರೆ. ಇಲ್ಲಿಗೆ ಬಂದ ನಂತರ ಗೊತ್ತಾದ ಅರ್ಧಂಬರ್ಧ ಪ್ರೀತಿ ಅಂತ.

ಏನಿದು ಅರ್ಧಂಬರ್ಧ ಪ್ರೀತಿ?
ಅರವಿಂದ್ ಕೌಶಿಕ್ ನಿರ್ದೇಶನದ ಅರ್ಧಂಬರ್ಧ ಪ್ರೀತಿ ಎಂಬ ಸಿನಿಮಾದಲ್ಲಿ ದಿವ್ಯ ಉರುಡುಗ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ನಾಯಕ ಯಾರೆಂದು ಇನ್ನು ತಿಳಿಸಿಲ್ಲ. ಟೀಸರ್ ಮೂಲಕ ನಾಯಕನನ್ನು ಪರಿಚಯಿಸುವ ಪ್ಲಾನ್ ಚಿತ್ರ ತಂಡದ್ದು. ಈ ಚಿತ್ರವನ್ನು ಬಕ್ಸ್ಸಸ್ ಮೀಡಿಯಾ ನಿರ್ಮಾಣ ಮಾಡುತ್ತಿದೆ. ಈ ಚಿತ್ರದಲ್ಲಿ ಹಿರಿಯ ನಟರೊಬ್ಬರು ನಟಿಸಿದ್ದಾರೆ ಎಂಬ ವಿಷಯವು ತಂಡ ಹೊರ ಬಿಟ್ಟಿದ್ದು, ಪ್ರೇಕ್ಷಕರ ಕುತೂಹಲ ಇನ್ನಷ್ಟು ಹೆಚ್ಚಿದೆ.