Home Entertainment BBK 11: ದೊಡ್ಮನೆಯಲ್ಲಿ ಒಂದ್ಕಡೆ ದೊಡ್ಡ ಜಗಳ; ಇನ್ನೊಂದು ಕಡೆ ಧರ್ಮ-ಅನುಷಾ ಪ್ರೀತಿ

BBK 11: ದೊಡ್ಮನೆಯಲ್ಲಿ ಒಂದ್ಕಡೆ ದೊಡ್ಡ ಜಗಳ; ಇನ್ನೊಂದು ಕಡೆ ಧರ್ಮ-ಅನುಷಾ ಪ್ರೀತಿ

Hindu neighbor gifts plot of land

Hindu neighbour gifts land to Muslim journalist

BBK 11: ಬಿಗ್‌ಬಾಸ್‌ ಸೀಸನ್‌ 11 ರಲ್ಲಿ ಜಗದೀಶ್‌ ಮತ್ತು ಮಹಿಳಾ ಸ್ಪರ್ಧಿಗಳ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಈ ಜಗಳದಲ್ಲಿ ನೂಕಾಟ ಆಗಿದೆ. ಹಾಗಾಗಿ ಮಹಿಳೆಯರ ವಿರುದ್ಧ ನಿಂದನಾತ್ಮಕ ಶಬ್ದ ಬಳಸಿದ ಜಗದೀಶ್‌ ಮತ್ತು ಜಗದೀಶ್‌ ಅವರನ್ನು ಕೈಯಿಂದ ದೂರ ತಳ್ಳಿದ ಕಾರಣಕ್ಕೆ ರಂಜಿತ್‌ ಇವರಿಬ್ಬರನ್ನು ಎಲಿಮಿನೇಟ್‌ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಹೊರಗೆ ಇವರಿಬ್ಬರು ಕಾಣಿಸಿಕೊಂಡಿಲ್ಲ. ಹಾಗಾದರೆ ಇವರಿಬ್ಬರು ಹೋಗಿದ್ದಾರಾ? ಅಥವಾ ರಂಜಿತ್‌ಗೆ ರೆಡ್‌ಕಾರ್ಡ್‌ ಕೊಟ್ಟಿದ್ದಾರಾ? ಇದಕ್ಕೆ ನಾವು ಮುಂದಿನ ಬಿಗ್‌ಬಾಸ್‌ ಎಪಿಸೋಡ್‌ ನೋಡಿದಾಗಲೇ ತಿಳಿಯಬಹುದು.

ನಿನ್ನೆಯ ಎಪಿಸೋಡಿನಲ್ಲಿ ಮನೆಯಲ್ಲಿ ಮಾತಿಗೆ ಮಾತು, ಜಗಳ, ಏರು ಧ್ವನಿಯ ಕಿರುಚಾಟ, ಕಿರುಚಿದರೇ ನಾವು ಟಿವಿಯಲ್ಲಿ ಕಾಣಿಸೋಕೆ ಸಾಧ್ಯ ಅನ್ನುವಷ್ಟರ ಮಟ್ಟಿಗೆ ಸ್ಪರ್ಧಿಗಳು ಜಗಳ ಮಾಡಿಕೊಂಡಿದ್ದರು. ಇವೆಲ್ಲದರ ಮಧ್ಯೆ ಅದೋ ಒಂದು ಮೂಲೆಯಲ್ಲಿ (ಕಿಚನ್‌) ಲವ್‌ ಬರ್ಡ್ಸ್‌ ತರಹ ಚಪಾತಿ ತಿನ್ನಿಸುವ ದೃಶ್ಯವೊಂದು ಕಂಡು ಬಂದಿದೆ. ಅನುಷಾ- ಧರ್ಮ ಜಗಳ ನೋಡುತ್ತಾ ಚಪಾತಿ ಲಟ್ಟಿಸಿ, ಬೇಯಿಸುತ್ತಾ ದೂರದಿಂದಲೇ ಜಗಳ ನೋಡುತ್ತಿದ್ದರು. ಇದರ ಮಧ್ಯದಲ್ಲಿ ಅನುಷಾ ಅವರು ಧರ್ಮ ಅವರಿಗೆ ಪ್ರೀತಿಯಿಂದ ಚಪಾತಿ ತಿನ್ನಿಸುವ ದೃಶ್ಯ ಕಂಡು ಬಂದಿದೆ.

ಅನುಷಾ-ಧರ್ಮ ಅವರು ಏಳು ವರ್ಷಗಳಿಂದ ಪರಿಚಯ ಇರುವವರು. ಇವರಿಬ್ಬರು ಒಳ್ಳೆಯ ಫ್ರೆಂಡ್ಸ್‌ ಎಂದು ಬಿಗ್‌ಬಾಸ್‌ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಆದರೆ ಈ ಶೋ ಮುಗಿಯುವಷ್ಟರಲ್ಲಿ ಇವರಿಬ್ಬರು ಲವ್‌ಬರ್ಡ್ಸ್‌ ಆಗ್ತಾರಾ? ಕಾದು ನೋಡಬೇಕಿದೆ.