Home Entertainment ನೀಲಿ ದೇಹದ ಅನ್ಯ ಜೀವಿಗಳ ವಿಚಿತ್ರ ಲೋಕವನ್ನು ಕಟ್ಟಿ ಕೊಟ್ಟ ‘ಅವತಾರ್ 2’ ಸಿನಿಮಾದ ಭಾರತದ...

ನೀಲಿ ದೇಹದ ಅನ್ಯ ಜೀವಿಗಳ ವಿಚಿತ್ರ ಲೋಕವನ್ನು ಕಟ್ಟಿ ಕೊಟ್ಟ ‘ಅವತಾರ್ 2’ ಸಿನಿಮಾದ ಭಾರತದ ಗಳಿಕೆ ಮೂರೇ ದಿನಕ್ಕೆ165 ಕೋಟಿ !

Hindu neighbor gifts plot of land

Hindu neighbour gifts land to Muslim journalist

ಕಂಡು ಕೇಳರಿಯದ ಮಾಂತ್ರಿಕ ಲೋಕವನ್ನು ಕಣ್ಣ ಮುಂದೆ ಜೀವಂತವೇನೋ ಎನ್ನುವಂತೆ ಕಟ್ಟಿ ನಿರ್ಮಿಸಬಲ್ಲ ಸಿನಿ ದಿಗ್ಗಜ ಜೇಮ್ಸ್ ಕ್ಯಾಮೆರಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅವತಾರ್ -2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ದೊಡ್ಡ ಸಮಯದ ಸಿನಿಮಾ, ಜತೆಗೆ ಟಿಕೆಟ್ ಬೆಲೆ ಕೂಡಾ ದೊಡ್ಡದು. ಟಿಕೆಟ್‌ ದರವನ್ನೂ ಏರಿಸಿದ್ದರಿಂದ, ಸಾವಿರಾರು ಕೋಟಿ ರೂಪಾಯಿ ಸುಲಭವಾಗಿ ಹರಿದು ಬಂದಿದೆ.

ಕೇವಲ ಭಾರತ ಒಂದರಲ್ಲೇ, ಮೂರೇ ಮೂರು ದಿನಕ್ಕೆ ಬರೋಬ್ಬರಿ 165 ಕೋಟಿವರೆಗೂ ಕಲೆಕ್ಷನ್ ಮಾಡಿದೆ ಎಂಬ ಒಂದು ಅಂದಾಜು ಹೊರಬಿದ್ದಿದೆ. ಮೊದಲ ಮೂರು ದಿನಗಳ ಬಹುತೇಕ ಟಿಕೆಟ್‌ ಈ ಮೊದಲೇ ಮಾರಾಟವಾಗಿತ್ತು ಎನ್ನುವ ಸುದ್ದಿ ಕೂಡಾ ಇದೆ. 2009 ರಲ್ಲಿ ಅವತಾರ್ ಸಿನಿಮಾ ತೆರೆ ಕಂಡಾಗ ಕಂಡ ಸದ್ದು ಇವತ್ತೂ ಕಾಣುತ್ತಿದೆ. ಅಷ್ಟೇ ಸಂಭ್ರಮದಿಂದಲೇ ಅಭಿಮಾನಿಗಳು ಚಿತ್ರವನ್ನು ಇಷ್ಟಪಟ್ಟ ಹಾಗೆ ಕಾಣುತ್ತಿದೆ. ಆಗಿನ ಅವತಾರ್ ಕಾಡಿನ ಹಿನ್ನೆಯಲ್ಲಿನ ಅನ್ಯ ಜೀವಿಗಳ ಕುರಿತಾಗಿದ್ದರೆ, ಈಗಿನ ಸಿನಿಮಾ ಅವತಾರ್-2 ನೀರಿನ ಹಿನ್ನೆಲೆಯೊಂದಿಗೆ ಬ್ಲೂ ಬಾಡಿಯ ದೇಹಿಗಳ ದೃಶ್ಯ ಕಾವ್ಯ. ತಮ್ಮ ಕುಲದ ಉಳಿವಿಗಾಗಿ ಅನ್ಯ ಜೀವಿಗಳೊಂದಿಗೆ ಈ ಅವತಾರ್-2 ಜೀವಿಗಳ ಹೋರಾಟವೇ ಚಿತ್ರದ ಕಥಾವಸ್ತು.

ವೀಕೆಂಡ್ ನಲ್ಲಿ ಮತ್ತು ಉಳಿದ ದಿನಗಳಲ್ಲಿ ಕೂಡಾ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಸೋಮವಾರ ಕೂಡ ಅನೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. 2009 ರ ಕನ್ನಡ ಸೇರಿದಂತೆ ಭಾರತೀಯ ನಾನಾ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲೇ ಬಾಕ್ಸ್ ಆಫೀಸಿಗೆ ಹಣ ಹರಿದು ಬಂದಿದೆ. ಕಣ್ಣು ಮುಚ್ಚಿ ಜಾನ್ ಕ್ಯಾಮರೂನ್ ನ ಸಿನಿಮಾ ಮೊದಲು ಧಾವಿಸಬಹುದು ಕಾರಣ ಆತ ಒಂದು ಸಿನಿಮಾ ಮಾಡಲು ತೆಗೆದುಕೊಳ್ಳುವ ದೀರ್ಘ ಕಾಲ ಮತ್ತು ಪರಿಶ್ರಮ. ಅವತಾರ್ ಬಂದ 13 ವರ್ಷಗಳ ನಂತರ ನೀಲಿ ದೇಹದ ಈ ಅವತಾರ್-2 ಜೀವಿಗಳ ಉದಯ ಆಗಿದೆ. ದಶಕಗಳ ಕಾಲ ಜೇಮ್ಸ್ ಕ್ಯಾಮರೂನ್ ಮತ್ತು ತಂಡ ಹೊಸ ಜೀವಿಗಳ ಅನ್ವೇಷಣೆಯಲ್ಲಿ ತೊಡಗಿ, ಈಗ ವಿಚಿತ್ರ ಕಾಲ್ಪನಿಕ ಜೀವಿಗಳನ್ನು ಚಿತ್ರ ಪರಿಚಯಿಸಿದೆ.

ಅವತಾರ್-2 ಚಿತ್ರ ವೀಕ್ಷಣೆಯ ವೇಳೆ ಸಿನಿಮಾ ನೋಡುತ್ತಲೇ ಹೃದಯಾಘಾತವಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿರೋ ಸುದ್ದಿ ಬಂದಿದೆ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಪುರಂನಲ್ಲಿ ಸಹೋದರ ರಾಜು ಜೊತೆ ಲಕ್ಷ್ಮಿರೆಡ್ಡಿ ಶ್ರೀನು ಎಂಬಾತ ಬಂದಿದ್ದ. ಸಿನಿಮಾ ಆನಂದಿಸುತ್ತಿದ್ದ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ನಡೆದರೂ ಆತ ಮೃತಪಟ್ಟಿದ್ದಾನೆ.

ಅವತಾರ್ ಸಿನಿಮಾ ನೋಡುವ ವೇಳೆಯಲ್ಲಿ ಈ ರೀತಿಯ ಘಟನೆಗಳು ಹಿಂದೆಯೇ ನಡೆದಿವೆ. ಅವತಾರ್ ಮೊದಲ ಭಾಗ ಬಂದಾಗ ತೈವಾನ್ ನಲ್ಲಿಯೂ ವ್ಯಕ್ತಿಯೊಬ್ಬನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದನಂತೆ. ಇವೆಲ್ಲ ಕಾಕತಾಳೀಯ ಅಷ್ಟೇ. ಆರಾಮಾಗಿ ಚಿತ್ರ ವೀಕ್ಷಿಸಲು ಯಾವುದೇ ತೊಂದರೆ ಇಲ್ಲ.