Home Entertainment Actress Rekha: ʼ ನನಗೆ ಮೂರು ಮದುವೆಯಾಗಿದೆ ಅದಕ್ಕೇ ಹಣೆಗೆ ಸಿಂಧೂರ ಹಚ್ಚುತ್ತೇನೆ’ ಸತ್ಯ...

Actress Rekha: ʼ ನನಗೆ ಮೂರು ಮದುವೆಯಾಗಿದೆ ಅದಕ್ಕೇ ಹಣೆಗೆ ಸಿಂಧೂರ ಹಚ್ಚುತ್ತೇನೆ’ ಸತ್ಯ ಬಿಚ್ಚಿಟ್ಟ ನಟಿ ರೇಖಾ!

Actress Rekha

Hindu neighbor gifts plot of land

Hindu neighbour gifts land to Muslim journalist

Actress Rekha: ಬಾಲಿವುಡ್‌ನ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರಾದ ರೇಖಾ (Actress Rekha) ಈಗಲೂ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ವಿಶೇಷತೆ ಏನೆಂದರೆ ಅವರು ಮೊದಲಿನಂತೆ ಇಂದಿಗೂ ಅಷ್ಟೇ ಸುಂದರವಾಗಿದ್ದಾರೆ.  ಹೆಚ್ಚಾಗಿ ಸೀರೆ, ಬಳೆ, ಸಿಂಧೂರ, ಹೂವು ತೊಟ್ಟು ಸಮಾರಂಭಗಳಲ್ಲಿ ದೇವತೆಯಂತೆ ಕಾಣಿಸಿಕೊಳ್ಳುತ್ತಾರೆ. ಆದ್ರೆ ರೇಖಾ ಅವರ ವೃತ್ತಿಪರ ವೃತ್ತಿಜೀವನ ಎಷ್ಟು ಅದ್ಭುತವಾಗಿದೆಯೋ, ಅವರ ವೈಯಕ್ತಿಕ ಜೀವನ ಅಷ್ಟೇ ನೋವಿನಿಂದ ಕೂಡಿದೆ.

ಹೌದು, ನಟಿ ರೇಖಾ 1990 ರಲ್ಲಿ ದೆಹಲಿಯ ದೊಡ್ಡ ಉದ್ಯಮಿ ಮುಖೇಶ್ ಅಗರ್ವಾಲ್ ಅವರೊಂದಿಗೆ ವಿವಾಹವಾದರು. ಆದ್ರೆ ಕೆಲವು ಮೂಲಗಳ ಪ್ರಕಾರ, ಮದುವೆಯಾದ 3 ತಿಂಗಳ ನಂತರ ರೇಖಾ ತನ್ನ ಪತಿ ಮುಖೇಶ್‌ನಿಂದ ಬೇರೆಯಾಗಲು ನಿರ್ಧರಿಸಿದ್ದಳು. ನಂತರ ಮದುವೆಯಾದ 7 ತಿಂಗಳಿಗೆ ರೇಖಾ ಅವರ ಪತಿ ಮುಖೇಶ್ ಆತ್ಮಹತ್ಯೆ ಮಾಡಿಕೊಂಡರು.

ಪತಿ ಸತ್ತರೂ, ಬೇರೆ ಮದುವೆ ಆಗಿಲ್ಲ ವಾದರೂ ರೇಖಾ ಇನ್ನೂ ತನ್ನ ಹಣೆಗೆ ಸಿಂಧೂರ ಹಚ್ಚುತ್ತಾರೆ. ವಿವಾಹಿತ ಮಹಿಳೆಯಂತೆಯೇ ಪ್ರತಿ ಕಾರ್ಯಕ್ರಮಕ್ಕೂ ಹಾಜರಾಗುತ್ತಾರೆ.. ಅದಕ್ಕಾಗಿ ರೇಖಾ ಅವರ ಎರಡನೇ ಮದುವೆಯ ಬಗ್ಗೆ ಸಿಮಿ ಗ್ರೆವಾಲ್ ಅವರ ಚಾಟ್ ಶೋನಲ್ಲಿ ಪ್ರಶ್ನಿಸಿದಾಗ, ನಟಿ ಶಾಕಿಂಗ್‌ ಮಾಹಿತಿಯನ್ನು ರಿವೀಲ್‌ ಮಾಡಿದ್ದಾರೆ.

ಹೌದು, ರೇಖಾ ಮೊದಲ ಪತಿ ಮುಖೇಶ್ ಸಾವನ್ನಪ್ಪಿದ್ದಾರೆ, ನಟಿ ಎರಡನೇ ಬಾರಿಗೆ ಮದುವೆಯಾಗುತ್ತೀರಾ ಎಂದು ರೇಖಾ ಅವರನ್ನು ಕೇಳಿದಾಗ… ನನ್ನ ಗಂಡನನ್ನು ಹೊರತುಪಡಿಸಿ, ನಾನು ಈ ಮೂವರನ್ನು ಮದುವೆಯಾಗಿದ್ದೇನೆ. ನಾನು ನನ್ನನ್ನು, ನನ್ನ ಕೆಲಸ ಮತ್ತು ನನ್ನ ಹೃದಯದಲ್ಲಿ ನನ್ನ ಅಭಿಮಾನಿಗಳನ್ನು ಮದುವೆಯಾಗಿದ್ದೇನೆ. ಹೀಗಾಗಿ ನನಗೆ ಮೂರು ಮದುವೆಯಾಗಿದೆ. ಮದುವೆಗೆ ಗಂಡ ಅಗತ್ಯವಿಲ್ಲ. ಈ ರೀತಿಯು ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು” ಎಂದು ನಟಿ ಶಾಕಿಂಗ್‌ ಹೇಳಿಕೆ ನೀಡಿದ್ದರು.

ಇನ್ನು ಇದರ ಹೊರತು ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಜೊತೆ ರೇಖಾ ಅವರ ಅಫೇರ್ ಬಗ್ಗೆ ಸಾಕಷ್ಟು ಗಾಸಿಪ್ ಇತ್ತು. ಆ ಸಮಯದಲ್ಲಿ ಅಮಿತಾಬ್ ಬಚ್ಚನ್ ಮದುವೆಯಾಗಿತ್ತು. ಹೀಗಾಗಿ ಅವರು ರೇಖಾ ಅವರೊಂದಿಗಿನ ಸಂಬಂಧದ ಬಗ್ಗೆ ಏನನ್ನೂ ಹೇಳಲಿಲ್ಲ. ಅಲ್ಲದೇ ರೇಖಾ ಕೂಡಾ ಇಂತಹ ಸೋಷಿಯಲ್ ಮೀಡಿಯಾ ಚರ್ಚೆಗೆ ಹೆಚ್ಚಿನ ಗಮನ ನೀಡಿಲ್ಲ.