Home Entertainment ಸ್ಟಾರ್ ನಟರ ಬೆತ್ತಲೆ ಫೋಟೋ ಸರದಿ ಮುಂದುವರಿಕೆ | ರಣವೀರ್ ಆಯ್ತು, ಈಗ ಮತ್ತೋರ್ವ ನಟನ...

ಸ್ಟಾರ್ ನಟರ ಬೆತ್ತಲೆ ಫೋಟೋ ಸರದಿ ಮುಂದುವರಿಕೆ | ರಣವೀರ್ ಆಯ್ತು, ಈಗ ಮತ್ತೋರ್ವ ನಟನ ಬೆತ್ತಲೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಬಹುಶಃ ಸ್ಟಾರ್ ನಟರೆಲ್ಲ ಈಗ ಬೆತ್ತಲಾಗುವ ಮೂಲಕ ಭಾರೀ ಸುದ್ದಿ ಮಾಡಲು ಹೊರಟಿದ್ದಾರೆ. ಏಕೆಂದರೆ
ಇತ್ತೀಚೆಗಷ್ಟೇ ಬಾಲಿವುಡ್ ನಟ ರಣವೀರ್ ಸಿಂಗ್ ಬೆತ್ತಲಾಗಿ ಫೋಟೋಶೂಟ್ ಮಾಡಿ, ಹುಡುಗಿಯರ ಮೈಮಾಟಕ್ಕಿಂತ ನನ್ನ ಮೈಮಾಟನೂ ಏನೂ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಫೋಸ್ ಕೊಟ್ಟು ಭಾರೀ ಸೆನ್ಸೇಶನ್ ಉಂಟು ಮಾಡಿದ್ದರು. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಭಾರೀ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ರಣವೀ‌ರ್ ಸಿಂಗ್ ಬೆತ್ತಲಾಗಿರುವ ಫೋಟೋಗಳು ವೈರಲ್ ಆಗಿದೆ. ಈ ಫೋಟೋ ಕುರಿತು ಅವರ ಅಭಿಮಾನಿಗಳು ತೆರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಇದರ ಮಧ್ಯದಲ್ಲಿ ಈಗ ಮತ್ತೋರ್ವ ಖ್ಯಾತ ನಟನ ಬೆತ್ತಲೇ ಫೋಟೋ ಭಾರೀ ಹಲ್ ಚಲ್ ಎಬ್ಬಿಸಿದೆ.

ಹೌದು, ತಮಿಳಿನ ಖ್ಯಾತ ನಟನಾದ ವಿಷ್ಣು ವಿಶಾಲ್ ಬೆತ್ತಲಾಗಿ ಹಾಸಿಗೆ ಮೇಲೆ ಮಲಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಬಹುಶಃ ಈ ನಟ ರಣವೀರ್ ಸಿಂಗ್ ನಿಂದ ಪ್ರೇರಿತರಾಗಿ ಈ ರೀತಿಯ ಫೋಟೋ ಕ್ಲಿಕ್ಕಿಸಿಕೊಂಡರ ಬಹುದೇನೋ? ಈಗ ರಣವೀರ್ ಹಾದಿಯಲ್ಲಿ ಸಾಗಿರುವ ವಿಷ್ಣು ಸಾಮಾಜಿಕ ಜಾಲತಾಣದಲ್ಲಿ ಫೋಟೋಹಂಚಿಕೊಂಡು ಟ್ರೆಂಡ್‌ಗೆ ಸೇರಿದ್ದೀನಿ ಎಂದು ಬರೆದುಕೊಂಡಿದ್ದಾರೆ.

ಈ ನಟನ ಬೆತ್ತಲಾಗಿರುವ ಫೋಟೋಗಳನ್ನು ತಮ್ಮ ಪತ್ನಿ-ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಕ್ಲಿಕ್ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಹೌದು, ಪತಿ ಬೆತ್ತಲಾಗಿ ಬೆಡ್ ಮೇಲೆ ಮಲಗಿರುವ ಫೋಟೋವನ್ನು ಕ್ಲಿಕ್ಕಿಸಿದ್ದು ವಿಷ್ಣು ಪತ್ನಿ ಜ್ವಾಲಾಗುಟ್ಟಾ.

ಅಂದಹಾಗೆ ವಿಷ್ಣು ವಿಶಾಲ್ ಶೇರ್ ಮಾಡಿರುವ ಈ ಫೋಟೋದಲ್ಲಿ, ತನ್ನ ಗುಪ್ತಾಂಗವನ್ನು ಬೆಡ್‌ಶೀಟ್‌ನಿಂದ ಮುಚ್ಚಿಕೊಂಡು ಫೋಸ್ ಕೊಟ್ಟಿದ್ದಾರೆ. ತನ್ನ ಪತ್ನಿಯ ಕ್ಯಾಮರಾಗೆ ಪೋಸ್ ನೀಡಿರುವ ವಿಷ್ಣು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ನಟ ವಿಷ್ಣು ವಿಶಾಲ್ ಫೋಟೋ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ರಣವೀರ್ ಸಿಂಗ್ ಮತ್ತು ವಿಷ್ಣು ಫೋಟೋವನ್ನು ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.